Wednesday, June 17, 2026
28.9 C
Belagavi

ಮಕ್ಕಳ ವರ್ತನೆಯಲ್ಲಿ ಈ ಬದಲಾವಣೆ ಕಾಣ್ತಿದೆಯಾ?: ಸೈಕಾಲಜಿಸ್ಟ್ ಏನಂತಾರೆ..?

advertisement

spot_img

ಮಕ್ಕಳ ವರ್ತನೆಯಲ್ಲಿ ಈ ಬದಲಾವಣೆ ಕಾಣ್ತಿದೆಯಾ?: ಸೈಕಾಲಜಿಸ್ಟ್ ಏನಂತಾರೆ..?

ಬೆಂಗಳೂರು: ಶಾಲೆ ಅಥವಾ ಕಾಲೇಜಿಗೆ ಹೋಗುವ ನಿಮ್ಮ ಮಕ್ಕಳಲ್ಲಿ, ಅದರಲ್ಲಿಯೂ ಗಂಡು ಮಕ್ಕಳಲ್ಲಿ, ಇದ್ದಕ್ಕಿದ್ದಂತೆ ಭಯ, ಸಂಕೋಚ, ಆತ್ಮವಿಶ್ವಾಸದ ಕೊರತೆ ಕಾಣಿಸುತ್ತಿದೆಯೇ?
ಅಥವಾ ಅವರು ತುಂಬಾ ಮೌನವಾಗಿದ್ದಾರೆಯೇ, ಎಲ್ಲರಿಂದ ದೂರವಾಗುತ್ತಿದ್ದಾರೆಯೇ?
ಇಲ್ಲವೇ, ಇದ್ದಕ್ಕಿದ್ದಂತೆ ಕೋಪ ಹೆಚ್ಚಾಗಿ, ಸಣ್ಣ ವಿಷಯಕ್ಕೂ ಅಗ್ರೆಸಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆಯೇ?

ಹಾಗಿದ್ದರೆ ಅದನ್ನು ಏನೋ ವಯಸ್ಸಿನ ಸಮಸ್ಯೆ” ಎಂದು ನಿರ್ಲಕ್ಷ್ಯ ಮಾಡಬೇಡಿ . ನಿಧಾನವಾಗಿ ಅವರ ಜೊತೆ ಮಾತನಾಡಿ. ಶಾಲೆ ಅಥವಾ ಕಾಲೇಜಿನಲ್ಲಿ ಸೀನಿಯರ್‌ಗಳು, ಸಹಪಾಠಿಗಳು ಅಥವಾ ಸ್ನೇಹಿತರಿಂದ ಬುಲ್ಲಿಯಿಂಗ್ (Bullying), ಬೆದರಿಕೆ ಅಥವಾ ಅವಮಾನ ಎದುರಿಸುತ್ತಿದ್ದಾರೆಯೇ ಎಂದು ವಿಚಾರಿಸಿ.

ಅಂತಹ ಪರಿಸ್ಥಿತಿ ಇದ್ದರೆ, ಮಗುವಿನ ಜೊತೆ ನಿಲ್ಲಿ. ತಪ್ಪು ಅವರದಲ್ಲ ಎಂಬ ಭರವಸೆ ನೀಡಿ. ಇಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಸಿ. ಅಗತ್ಯವಿದ್ದರೆ ಶಾಲೆಯ ಶಿಕ್ಷಕರು ಅಥವಾ ಮುಖ್ಯಸ್ಥರ ಜೊತೆ ಮಾತನಾಡಿ.ನನ್ನ ಕೌನ್ಸೆಲಿಂಗ್ ಅನುಭವದಲ್ಲಿ, ಮನೆಯಲ್ಲಿ ಅತಿಯಾದ ಭಯ ಮತ್ತು ಒತ್ತಡದಲ್ಲಿ ಬೆಳೆದ ಮಕ್ಕಳು, ಆತಂಕ (Anxiety) ಹೊಂದಿರುವ ಮಕ್ಕಳು, ಅಥವಾ ಎಡಿಎಚ್‌ಡಿ (ADHD) ಮತ್ತು ಆಟಿಸಂ (Autism) ಇರುವ (ನ್ಯೂರೋಡೈವರ್ಜೆಂಟ್) ಮಕ್ಕಳು ಇಂತಹ ಬುಲ್ಲಿಯಿಂಗ್‌ಗೆ ಹೆಚ್ಚು ಗುರಿಯಾಗುವುದನ್ನು ನೋಡಿದ್ದೇನೆ.

ದುರದೃಷ್ಟವಶಾತ್, ಬಾಲ್ಯದಲ್ಲಿ ಶಾಲೆ ಅಥವಾ ಕಾಲೇಜಿನಲ್ಲಿ ಅನುಭವಿಸಿದ ಈ ಭಯ ಕೆಲವರನ್ನು ಜೀವನಪೂರ್ತಿ ಹಿಂಬಾಲಿಸುತ್ತದೆ.

ಮುಂದೆ ಉದ್ಯೋಗಕ್ಕೆ ಹೋದಾಗ ಬಾಸ್ ಸ್ವಲ್ಪ ದನಿ ಎತ್ತರಿಸಿದರೂ ಹೆದರುತ್ತಾರೆ. ಸಹೋದ್ಯೋಗಿಗಳ ಸಾಮಾನ್ಯ ತಮಾಷೆಯನ್ನೂ ಟೀಕೆ ಎಂದು ಭಾವಿಸುತ್ತಾರೆ. “ನಾನು ಏನಾದರೂ ತಪ್ಪು ಮಾಡಿಬಿಡುವೆನೇ?”, “ಜನ ಏನು ಅಂದುಕೊಳ್ಳುತ್ತಾರೆ?” ಎಂಬ ಆತಂಕದಲ್ಲೇ ಬದುಕಲು ಆರಂಭಿಸುತ್ತಾರೆ.

ಮಕ್ಕಳಿಗೆ ಉತ್ತಮ ಶಿಕ್ಷಣ, ಆಹಾರ, ವಸತಿ ಮತ್ತು ಆಸ್ತಿ ಎಷ್ಟು ಮುಖ್ಯವೋ, ಮಾನಸಿಕ ಸುರಕ್ಷತೆ, ಭಾವನಾತ್ಮಕ ಬೆಂಬಲ ಮತ್ತು ಆತ್ಮವಿಶ್ವಾಸವೂ ಅಷ್ಟೇ ಮುಖ್ಯ.

ನಿಮ್ಮ ಸಮಯೋಚಿತ ಬೆಂಬಲ, ನಿಮ್ಮ ಮಗುವಿನ ಇಡೀ ಭವಿಷ್ಯವನ್ನು ಬದಲಾಯಿಸಬಹುದು.

ನೆನಪಿಡಿ: ಮಕ್ಕಳಿಗೆ ನಾವು ಕೊಡಬಹುದಾದ ದೊಡ್ಡ ಆಸ್ತಿ ಎಂದರೆ ಭಯವಿಲ್ಲದೆ ಬದುಕುವ ಧೈರ್ಯ.

( ಇದೇ ರೀತಿಯ‌ ಶಾಲಾ ಕಾಲೇಜಿನಲ್ಲಿ ಸತತ ಬೆದರಿಕೆಗೆ ಒಳಗಾಗಿ ಭಯವಿಟ್ಟುಕೊಂಡ ಬೆಳೆದು ಆಂಕ್ಸೈಟಿಯಿಂದ ಕೆಲಸದಲ್ಲಿ ಎಲ್ಲಿಯೂ ಒಂದೆಡೆ ನೆಲೆಸಲಾಗದೇ ಖಿನ್ನತೆಗೆ ಜಾರಿದ ಹುಡುಗನೊಬ್ಬನನ್ನು ಜೊತೆ ಮಾತಾಡಿದ ನಂತರ ಇದನ್ನು ಬರೆಯಬೇಕನಿಸಿತು)

ಡಾ. ರೂಪಾ ರಾವ್ (Dr. Ruupa Rao, ಸೈಕಾಲಜಿಸ್ಟ್ ಬೆಂಗಳೂರು

Hot this week

ಪೌರ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ : ಸಚಿವ ಡಾ.ಯತೀಂದ್ರ ಭರವಸೆ..

ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಗೃಹ...

ರಾಮದುರ್ಗ |ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರ

ರಾಮದುರ್ಗ |ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರ ಅಂತರಾಷ್ಟ್ರೀಯ ಯೋಗ ದಿನಾಚರಣೆ...

ಸಿಐಡಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸೂಚನೆ

ಸಿಐಡಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಸವಾಲುಗಳನ್ನು ಸಮರ್ಥವಾಗಿ...

ಬಿಡದಿ ಟೌನ್‌ ಶಿಪ್ ಸರಕಾರಿ ರಿಯಲ್ ಎಸ್ಟೇಟ್ ಯೋಜನೆ ಎಂದ ಹೆಚ್.ಡಿ. ಕುಮಾರಸ್ವಾಮಿ

ಬಿಡದಿ ಟೌನ್‌ ಶಿಪ್ ಸರಕಾರಿ ರಿಯಲ್ ಎಸ್ಟೇಟ್ ಯೋಜನೆ ಎಂದ ಹೆಚ್.ಡಿ....

Topics

ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್

ಸಿಎಂ ಡಿ ಕೆ ಶಿವಕುಮಾರ್ ಅವರ ಮಾಧ್ಯಮ ಹೇಳಿಕೆ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ...

ಪರಿಹಾರದ ವಿಚಾರದಲ್ಲಿ ತಾರತಮ್ಯ ಆರೋಪ: ಪ್ರಾಧಿಕಾರ ಕಚೇರಿಯಲ್ಲಿ ಸಿಬ್ಬಂದಿಗೆ ಚಪ್ಪಲಿ ಏಟು

ಪರಿಹಾರದ ವಿಚಾರದಲ್ಲಿ ತಾರತಮ್ಯ ಆರೋಪ: ಪ್ರಾಧಿಕಾರ ಕಚೇರಿಯಲ್ಲಿ ಸಿಬ್ಬಂದಿಗೆ ಚಪ್ಪಲಿ ಏಟು ಬಾಗಲಕೋಟೆ,  ಪರಿಹಾರ...
spot_img

Related Articles

Popular Categories

spot_img