Wednesday, August 12, 2026
20.7 C
Belagavi

ಜೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್ ಅವಾರ್ಡ್ – 2026

advertisement

spot_img

ಜೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್ ಅವಾರ್ಡ್ – 2026

ಬೆಂಗಳೂರು : ರಾಜ್ಯದ ಜನರ ಮನೆ ಮಾತಾಗಿರುವ ಜೀ ಕನ್ನಡ ನ್ಯೂಸ್ ಕೇವಲ ಸುದ್ದಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಜನಸೇವೆಗೂ ಸಾಕ್ಷಿ ಆಗುತ್ತಿದೆ. ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಜೊತೆಗೆ ರಾಜ್ಯದಲ್ಲಿ ಇರುವ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಸೇವೆ ಮಾಡಿದೆ.

ಜೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್- 2026 ಎಂಬ ಅವಾರ್ಡ್ ಕಾರ್ಯಕ್ರಮ ನಡೆಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ,ಆರೋಗ್ಯ ಸೇವೆ,ಸಮಾಜ ಸೇವೆ,ಕೃಷಿ ಮತ್ತು ಪರಿಸರ ಸಂರಕ್ಷಣೆ,ಕ್ರೀಡೆ,ಉದ್ಯಮ ಹಾಗೂ ನವೋದ್ಯಮ,ಕಲೆ ಮತ್ತು ಸಂಸ್ಕೃತಿ
ಆಡಳಿತ ಮತ್ತು ಸಾರ್ವಜನಿಕ) ಸೇವೆಯಲ್ಲಿ ಸಾಧನೆ ಮಾಡಿದ ಮೂವತ್ತಕದಕು ಹೆಚ್ಚು ಸಾಧಕರನ್ನು ಗುರುತಿಸಿ ಗೌರವಿಸಿದೆ.

ನಗರದ ಲಲಿತಾ ಅಶೋಕ್ ಹೋಟೆಲ್ ನಲ್ಲಿ ಆಯೋಜನೆ ಆಗಿದ್ದ ಈ ಅವಾರ್ಡ್ ಕಾರ್ಯಕ್ರಮಕ್ಕೆ
BGS & SJBನ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ಶ್ರೀ ಪ್ರಕಾಶನಾಥ ಸ್ವಾಮೀಜಿ, ಹಾಗೂ ಆಧ್ಯಾತ್ಮಿಕ ಚಿಂತಕರಾದ ಶ್ರೀ ವಿನಯ್ ಗುರೂಜಿ ದಿವ್ಯ ಸಾನಿಧ್ಯವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರುಗಳಾದ ಕಿಮ್ಮನೆ ರತ್ನಾಕರ್, ನಟ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ, DRDO ಮಾಜಿ ನರ್ದೇಶಕರಾದ ಡಾ. ರಾಮರಾವ್ ಸೇರಿದಂತೆ ಮಾಜಿ ಕ್ರಿಕೇಟಿಗ ದೊಡ್ಡಗಣೇಶ್ ಆಗಮಿಸಿದ್ರು.

ವಿಶೇಷ ಆಹ್ವಾನಿತರಾಗಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಖ್ಯಾತ‌ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು,ಚಲಚಿತ್ರ ವಾಣಿಜ್ಯಮಂಡಲಿ ಅಧ್ಯಕ್ಷೆ ಹಾಗೂ ಮಾಜಿ ಸಚಿವೆ ನಟಿ ಶ್ರೀಮತಿ ಜಯಮಾಲ ಸೇರಿದಂತೆ ನಟ ಆದಿತ್ಯ ಖ್ಯಾತ ನಟಿ ರೀಷ್ಮಾನಾಣಯ್ಯ ಘನ ಉಪಸ್ಥಿತಿ ಮೆರೆದಿದ್ದರು.ಈ ವೇಳೆ ಘನತೆವೆತ್ತ ಕೆಲ‌ ಆಹ್ವಾನಿತರಿಗೆ
ಹಿರಿಯ ನಟ ಮುಖ್ಯ ಮಂತ್ರಿಚಂದ್ರು, ಹಿರಿಯ ನಿರ್ದೇಶಕರಾದ ಡಾ.‌ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಹಿರಿಯ ಪತ್ರಕರ್ತ ಅನಂತ್ ಚಿನಿವಾರ್ ರವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಜೀ ಕನ್ನಡ ನ್ತೂಸ್ ನ ಸಂಪಾದಕರಾದ ರವಿ ಎಸ್ ಗೌಡ ರವರ ಅಧ್ಯಕ್ಷತೆಯಲ್ಲಿ ನೀಡಿ ಗೌರವಿಸಲಾಯ್ತು.

ಜೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್ -2026ರ ಪ್ರಶಸ್ತಿ ಪುರಸ್ಕೃತರು

1.ಶ್ರೀ ಪ್ರೊ, ರಮೇಶ್ ಬಿ. ಕುಲಪತಿಗಳು, ಡಾ.ಮನಮೋಹನ್ ಸಿಂಗ್ ವಿ.ವಿ.
2.ಶ್ರೀ ಕೃಷ್ಣ ಸಿ. ಉಕ್ಕುಂದ್, ಜಂಟೀ ನಿರ್ದೇಶಕರು, ತೋಟಗಾರಿಕಾ ಇಲಾಖೆ.
3.ಶ್ರೀ ಆರ್. ಬಾಲಾಜಿ ಸಿಂಗ್, ರಾಜಕಾರಣಿ & ಸಮಾಜ ಸೇವಕರು.
4.ಶ್ರೀಮತಿ ಸುಧಾ ಪಿಡಿಓ & ಸಮಾಜ ಸೇವಕರು.
5.ಡಾ. ಚಿನ್ನಪ್ಪ ವೈ, ಚಿಕ್ಕಹಾಗಡೆ. ಸಮಾಜಸೇವಕರು.
6.ಶ್ರೀ ವಿಜಯ್ ನಿಶಾಂತ್, ಮರಗಳ ವೈದ್ಯರು.
7.ಶ್ರೀ ಪಿ.ಜಿ. ಗಿರಿ ( ವೆಂಕಟ ಗಿರಿ) ಶಿಕ್ಷಣ ತಜ್ಞರು.
8.ಶ್ರೀ ನಾಗೇಶ್, ಸಮಾಜ ಸೇವಕರು.
9.ಡಾ. ಅರವಿಂದ್ ಟಿ.ಎಂ, ಪ್ರಗತಿಪರ ರೈತ.
10.ಶ್ರೀ ಅಭಿನಂದನ್ ಕೆ. ಅಧ್ಯಕ್ಷರು, ಬಿಜೆಪಿ ಮಂಡಲ‌ ಹಿರಿಯೂರು.
11.ದಿ. ಎನ್.ಎಸ್. ನಾರಾಯಣ ಮೂರ್ತಿ ನಾಟಿ ವೈದ್ಯರು,ಗೀಳಾಲಗುಂದಿ.
12.ಶ್ರೀ ಮಹೇಶ ಪ್ರಕಾಶ್ ಪೋತದಾರ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.
13.ಶ್ರೀ ಜಿ. ಎಸ್. ಖಾಲಿದ್ ಶರೀಫ್, ಸಮಾಜ ಸೇವಕರು.
14.ಡಾ. ರಾಜು ಗಸ್ತಿ, ಗೌರ್ನಮೆಂಟ್ ಆಫ್ ಇಂಡಿಯಾ ಕನ್ಸೂಮರ್ ರೈಟ್ಸ್
15. ಶ್ರೀ ಮುತ್ತುರಾಜ್,ರಾಜ್ಯಾಧ್ಯಕ್ಷರು, ಅಹಿಂದ ಒಕ್ಕೂಟ ಸಮಿತಿ.
16. ಶ್ರೀ ಹೆಚ್. ಚಂದ್ರಪ್ಪ, ಉದ್ಯಮಿ, ಗಾಯಕರು& ಸಮಾಜ ಸೇವಕರು.
17. ಶ್ರೀಮತಿ ಪ್ರೀತಿ ಚಂದ್ರಶೇಖರ್ ದೊಡ್ಡಮನಿ,ಜಂಟೀ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.
18. ಡಾ. ಆನಂದ ಕುಮಾರ್, ಉದ್ಯಮಿ.
19.ಡಾ. ಎನ್. ಭೂಷಣ್,ಪ್ರಾಂಶುಪಾಲರು, ಬಿಎನ್ ಆರ್ ಪಬ್ಲಿಕ್ ಸ್ಕೂಲ್.
20. ಶ್ರೀ ಮಾಸ್ತಿ ರಮೇಶ್, ಸಮಾಜ ಸೇವಕರು.
21.ಶ್ರೀಮತಿ ನಳಿನಿ ಡೆಸಾ, ಸಂಸ್ಥಾಪಕರು, ಸಹ್ಯಾದ್ರಿ ಎಜ್ಯುಕೇಷನ್ ಸೊಸೈಟಿ.
22. ಶ್ರೀ ರಾಜೇಂದ್ರ ನಾರಾಯಣ ರಾವ್ ಭೋಸಲೆ, ಪ್ರಗತಿಪರ ಚಿಂತಕರು.
23.ಶ್ರೀ ಹರೀಶ್, ಮ್ಯಾನೇಜಿಂಗ್ ಡೈರೆಕ್ಟರ್, ಸ್ವೀಟ್ ಹೋಂ ರಿಯಾಲಿಟಿ.
24.ಹರ್ಷಿತಾ ರಾಮೋಜಿ ಗೌಡ, ಕಾಂಗ್ರೆಸ್ ಮುಖಂಡರು& ಸಮಾಜ ಸೇವಕರು.
25. ಶ್ರೀ ನರಸಿಂಹ ಮೂರ್ತಿ ಕೆ.ಎ. (NCC) ಆರ್ನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ & ಸಮಾಜ ಸೇವಕರು.
26. ಶ್ರೀ ಸಿದ್ದಾರ್ಥ್ ಮರೇದ್,MD ಸ್ಪೂರ್ತಿ ಹರ್ಬಲ್
27. ಶ್ರೀ ಮುನೇಶ್ ಜೋಗಲಕಾಷ್ಠಿ,ಸಮಾಜ ಸೇವಕರು.

“ಜೀವಮಾನ ಸಾಧನೆ ಪ್ರಶಸ್ತಿ”ಗೆ ಪಾತ್ರರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಆತ್ಮೀಯ ಎಲ್ಲಾ ಕನ್ನಡ ಮನಸುಗಳಿಗೆ ಶುಭ ಕೋರಿದ್ರು. ಜೀ ಕನ್ನಡ ನ್ಯೂಸ್ ನ ಸಂಪಾದಕರಾದ ರವಿಯವರು ಮಾಡ್ತಿರೋ ಈ ಕಾರ್ಯ ತುಂಬಾ ಒಳ್ಳೆ ಕೆಲಸ, ಜೀವನದಲ್ಲಿ ಎಲೆಮರಿಕಾಯಿಗಳಂತೆ‌ ಸಾಧನೆ ಮಾಡ್ತಿರೋ ಸಾಧಕರಿಗೆ ಸನ್ಮಾನ ಮಾಡ್ತಿರೋದು ನನಗೆ ಸಂತಸವಿದೆ. ರಾಜ್ಯದಲ್ಲಿ ಪ್ರಸ್ತುತ ಮೂರು ಮುಖ್ಯ ಮಂತ್ರಿಗಳಿದ್ದಾರೆ, ಮೊನ್ನೆ ತಾನೆ ಒಬ್ಬರು ರಾಜೀನಾಮೆ ಕೊಟ್ರು, ಈ ಇಬ್ಬರು ಅಧಿಕಾರ ಸ್ವೀಕರಿಸಿದ್ದಾರೆ. ಮೂರನೇ ಮುಖ್ಯಮಂತ್ರಿ ಅಂದ್ರೆ ಅದು ನಾನು. ಜೀವಮಾನದ ಉದ್ದಕ್ಕೂ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದೇನೆ ಅದು ನನಗೆ ಖುಷಿ ಇದೆ. ರಂಗಭೂಮಿ, ಟಿವಿ, ಸಿನಿಮಾ, ರಾಜಕೀಯ ಎಲ್ಲದರಲ್ಲೂ ಗುರ್ತಿಸಿಕೊಳ್ಳುವ ಕೆಲಸ ಮಾಡ್ತಿದ್ದೇನೆ.‌ ಇದು ನನಗೆ ಸಿಕ್ಕ ಸೇವೆ ಅಂತ ಶ್ರದ್ಧಾಭಕ್ತಿಯಿಂದ ಕೆಲಸ ಮಾಡ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನನ್ನು ಕರೆಸಿ ಜೀವಮಾನ ಸಾಧನೆ ಪ್ರಶಸ್ತಿ ಕೊಟ್ಟಿದ್ದಕ್ಕೆ ತುಂಬಾ ಸಂತಾವಿದೆ ಅಂತಲೇ ಕೆಲ ನಗೆ ಚಟಾಕಿಗಳಿಂದ ನೆರೆದಿದ್ದ ಗಣ್ಯರನ್ನ ಸಂತಸದ ಕಡಲಲ್ಲಿ ತೇಲಿಸಿದ್ರು.ದಿವ್ಯ ಸಾನಿಧ್ಯ ವಹಿಸಿದ್ದ ವಿನಯ್ ಗುರೂಜಿ ನೆರೆದಿದ್ದ ಗಣ್ಯರಿಗೆ ಕೆಲ ಗುರುವಚನ ಮಾಡಿದ್ರು. ನಿಮ್ಮನ್ನೆಲ್ಲಾ‌ ನೋಡಿ ನನಗೆ ಖುಷಿ ಆಯ್ತು.‌ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡ್ತಿರೋ ನಿಮ್ಮನ್ನು ಗೌರವಿಸುತ್ತಿರೋ ಜೀ ಕನ್ನಡ ನ್ಯೂಸ್ ಸಂಪಾದಕ ರವಿಯವರ ಕೆಲಸ ಸಣ್ಣದಲ್ಲ ಅದು ಬಹಳ ಶ್ರಮ ಪಟ್ಟಿದ್ದಾರೆ. ಪ್ರಶ್ತಿ ಕೊಟ್ಟವರಿಗೆ, ಪ್ರಶಸ್ತಿ ತೆಗೆದುಕೊಂಡವರಿಗೆ ಅವರದ್ದೆ ಆದ ಶ್ರಮ ಇದೆ. ನಮ್ಮ‌ ಆಶ್ರಮಕ್ಕೆ ಬಂದು ಆಹ್ವಾನ ಕೊಟ್ಟ ಕೂಡಲೇ ನಾನು ಒಪ್ಪಿಕೊಂಡು ಬಂದಿದ್ದೇನೆ. ಇಲ್ಲಿ ಬಂದು ನೋಡಿದಾಗ ಇದು ಸಣ್ಣ ಪುಟ್ಟ ಕೆಲಸ ಅಲ್ಲ ಎಲ್ಲರು ಎದ್ದು ನಿಂತು ಗೌರವಿಸುವ ಕೆಲಸ ಗೊತ್ತಾಯ್ತು.‌ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶೀರ್ವಚನ ಮಾಡಿದ್ರು.

ಪ್ರಕಾಶನಾಥ ಸ್ವಾಮೀಜಿ ಆಶೀವರ್ಚನದ ಮೂಲಕ ಮಾತನಾಡಿದ್ದು, ಜೀ ಕನ್ನಡ ನ್ಯೂಸ್ ನ ರಿಯಲ್ ಸ್ಟಾರ್ ಅವಾರ್ಡ್ ಕರೆದ ಕೂಡಲೇ ಬೇರೆ ಕೆಲಸಗಳನ್ನ ಬಿಟ್ಟು ಬಂದಿದ್ದೇನೆ. ನೆರೆದಿದ್ದ ಎಲ್ಲಾ ಸಾಧಕರನ್ನ ನೋಡಿ ಒಂದಿಷ್ಟು ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ರು. ನಿಮ್ಮಂತೆ ನಾವು ವೇದಿಕೆ ಮುಂದೆ ಕೂತು ಮತ್ತೊಬ್ಬರ ಬಳಿ ಪ್ರಶ್ತಿ ಪಡೆದುಕೊಳ್ತಿದ್ವಿ, ಈಗ ನಾವು ನಮ್ಮದೇ ಶ್ರಮದ ಮೂಲಕ ಈ ಮಟ್ಟಕ್ಕೆ ಬೆಳೆಯೋದಕ್ಕೆ ಸಾಧ್ಯ ಆಗಿದೆ. ನಮ್ಮ ಹಾಗೆ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದು ನಮ್ಮ ಆಶಯ. ಜೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್ ಅವಾರ್ಡ್ ಕೊಡ್ತಿರೋ ಸಂಪಾದಕ ರವಿಯವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸೋ‌ ಮೂಲಕ ಇನ್ನಷ್ಟು ಸಾಧಕರನ್ನ ಗುರ್ತಿಸೋ ಕೆಲಸ ಆಗಲಿ ಅಂತ ಆರೈಸಿದರು.ಹಿರಿಯ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ನಮ್ಮ ನಾಡಿನಲ್ಲಿರೋ ಮೂಲೆ ಮೂಲೆಯಲ್ಲಿರೋ ಎಲೆಮರಿಕಾಯಿಗಳಂತೆ ಇರೋರನ್ನ ಗುರ್ತಿಸಿ ಒಂದು ವೇದಿಕೆ ಮೂಲಕ ಸಾಧಕ ಪ್ರಶಸ್ತಿಕೊಡ್ತಿರೋದು ಜೀ ಕನ್ನಡ ನ್ಯೂಸ್ ನ ಕೆಲಸ ಸಣ್ಣದಲ್ಲ. ಇದನ್ನ ಕಣ್ಣಾರೆ ನೋಡಿದ ನನಗೆ ತುಂಬಾ ಖುಷಿ ಆಗ್ತಿದೆ. ಪ್ರಸ್ತುತ ಕನ್ನಡ ಸಿನಿಮಾ ಕ್ಷೇತ್ರದ ಅಳಿವು ಉಳಿವಿನ ಪರಿಸ್ಥಿತಿಯನ್ನ ನೋವಿನ ಮೂಲಕ ಅಭಿಪ್ರಾಯವನ್ನ ಹೊರ ಹಾಕಿದ ಅವರು, ಕನ್ನಡ ಸಿನಿಮಾವನ್ನ ಉಳಿಸಿ ಬೆಳೆಸಬೇಕಿರೋದು ಕನ್ನಡಿಗರು ಅಂತ ವೇದಿಕೆ ಮೂಲಕ ಮನವಿ ಮಾಡಿದ್ರು.‌ ಇನ್ನುಳಿದಂತೆ ಜೀ ಕನ್ನಡ ನ್ಯೂಸ್ ವತಿಯಿಂದ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸೇವೆ ಗುರ್ತಿಸಿ ಜೀವಮಾನ ಪ್ರಶಸ್ತಿಕೊಟ್ಟು ಗೌರವಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಕಿಮ್ಮನೆ ರತ್ನಾಕರ್ ರವರು ಮಾತನಾಡಿ, ಇಲ್ಲಿ ಅವಾರ್ಡ್ ತೆಗೆದುಕೊಳ್ಳುತ್ತಿರೋ ಪ್ರತಿಯೊಬ್ಬ ಸಾಧಕರಿಗೆ ಸಂದೇಶವನ್ನ ಸಾರಿದರು. ಕಷ್ಟದಲ್ಲಿದ್ದವರಿಗೆ ತಮ್ಮ‌ ಕೈಲಾದ ಸಹಾಯವನ್ನ ಮಾಡಿ. ಇವತ್ತು ನೀವು ಮಾಡಿದ ಸಹಾಯ ಮುಂದೊಂದು ದಿನ ನಿಮ್ಮ ಸಾಧನೆಗೆ ಸಹಕಾರಿಯಾಗುತ್ತದೆ. ಜೀ ಕನ್ನಡ ನ್ಯೂಸ್ ಚಾನಲ್ ನವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರ್ತಿಸಿ ಗೌರವಿಸಿದ್ದು ನನಗೆ ತುಂಬಾ ಹೆಮ್ಮೆ ಇದೆ. ಸ್ವಾಲಂಬಿ ಜೀವನ ನಡೆಸಬೇಕು ಎಂದ್ರೆ ಶಿಕ್ಷಣ ಎಷ್ಟು ಅಗತ್ಯ ಅನ್ನೋದು ಕೂಡ ಕೆಲ ಸ್ಪೂರ್ತಿದಾಯಕ ಮಾತುಗಳ ಮೂಲಕ ನೆರೆದಿದ್ದವರಿಗೆ

ಹಿರಿಯ ನಟಿ ಜಯಮಾಲ ರವರು ಮಾತನಾಡಿದ್ದು, ಜೀ ಕನ್ನಡ ನ್ಯೂಸ್ ನ ರಿಯಲ್ ಸ್ಟಾರ್ ಅವಾರ್ಡ್ ಕೊಡ್ತಿರೋದು ನನಗೆ ಸಂತಸವಿದೆ. ಇಲ್ಲಿ ನೆರೆದಿರೋ ಎಲ್ಲಾ ಸಾಧಕರನ್ನು ರಾಜ್ಯದ ವಿವಿಧ ಕ್ಷೇತ್ರಗಳಿಂದ ಕರೆತಂದಿರೋ ಜೀ ಕನ್ನಡ ನ್ಯೂಸ್ ನ ಸಂಪಾದಕ ರವಿಯವರಿಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೇ ಎಲ್ಲಾ ಸಾಧಕರು ಇನ್ನಷ್ಟು ಸೇವಾಕಾರ್ಯಗಳನ್ನ ಮುಂದುವರೆಸಿಕೊಂಡು ಹೋಗಿ ಅಂತ ಆಶಯ ವ್ಯಕ್ತಪಡಿಸಿದರು. ಕೊನೆಯದಾಗಿ ಕನ್ನಡ ಸಿನಿಮಾವನ್ನು ಉಳಿಸಿ ಬೆಳೆಸಿ ಎಂದು ಜೀ ಕನ್ನಡ ನ್ಯೂಸ್ ವೇದಿಕೆ ಮೂಲಕ ಇಡೀ ಕನ್ನಡ ನಾಡಿನ ಏಳು ಕೋಟಿ ಜನರನ್ನು ಮನವಿ ಮಾಡಿದರು

ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ರವರು ಮಾತನಾಡಿ. ನನ್ನನ್ನು ಉಳಿಸಿ ಬೆಳೆಸಿದ್ದು ಮಾಧ್ಯಮಗಳು. ಇಲ್ಲಿವರೆಗೂ ನನ್ನನ್ನು ಬೆಳಸುತ್ತಾ ಬರ್ತಿರೋದು ಮಾಧ್ಯಮಗಳು.‌ ದೇಶ ವಿದೇಶಗಳಲ್ಲಿ ಕ್ರಿಕೆಟ್ ಆಡಿದ್ದೇನೆ.‌ ನನ್ನನ್ನು ತುಳಿದವರು ಇದ್ದಾರೆ ಬೆಳೆಸಿಕೊಂಡು ಬರ್ತಿರೋರು ಇದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಅಂತ ಆಶಿಸಿದರು.

ಒಟ್ನಲ್ಲಿ ಜನರ ಮನೆ ಮಾತಾಗಿರುವ ಜೀ ಕನ್ನಡ ನ್ಯೂಸ್.. ಇಂತಹ ಸಾಧಕರನ್ನು ಗುರ್ತಿಸಿ ನೀಡಲಾದ ರಿಯಲ್‌ ಸ್ಟಾರ್ ಅವಾರ್ಡ್ ಗೆ ನೆರೆದಿದ್ದ ಎಲ್ಲ ಗಣ್ಯರಿಂದ ಹಾಗೂ ಪ್ರಶಸ್ತಿಪಡೆದ ಸಾಧಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

Hot this week

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ - ಸರ್ವಜ್ಞನಗರದಲ್ಲಿ ಕೆಪಿಟಿಸಿಎಲ್...

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ...

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

Topics

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ - ಸರ್ವಜ್ಞನಗರದಲ್ಲಿ ಕೆಪಿಟಿಸಿಎಲ್...

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ...

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...
spot_img

Related Articles

Popular Categories

spot_img