Wednesday, June 10, 2026
26.3 C
Belagavi

ವಿಶ್ವಕರ್ಮರಿಂದ ಮಾತ್ರ ದೇಶ ಕಟ್ಟಲು ಸಾಧ್ಯ:ಬಸವರಾಜ ಬೊಮ್ಮಾಯಿ

advertisement

spot_img

ವಿಶ್ವಕರ್ಮರಿಂದ ಮಾತ್ರ ದೇಶ ಕಟ್ಟಲು ಸಾಧ್ಯ:ಬಸವರಾಜ ಬೊಮ್ಮಾಯಿ

ವಿಶ್ವಕರ್ಮರಿಗೆ ಗೌರವ, ಮನ್ನಣೆ ಸಿಗುವ ಕಾಲ ಬಂದಿದೆ:ಬಸವರಾಜ ಬೊಮ್ಮಾಯಿ

ಹಾವೇರಿ(ಶಿಗ್ಗಾವಿ) ವಿಶ್ವಕರ್ಮರಿಂದ ಮಾತ್ರ ಈ ದೇಶವನ್ನು ಮೂಲಭೂತವಾಗಿ ಕಟ್ಟಲು ಸಾಧ್ಯ ಎಂದು ಪಧಾನಮಂತ್ರಿ ನರೇಂದ್ರ ಮೋದಿಗೆ ಗೊತ್ತಿದೆ. ಹೀಗಾಗಿ ಮತ್ತೆ ನಿಮಗೆ ಗೌರವ, ಮನ್ನಣೆ ಸಿಗುವ ಕಾಲ ಬಂದಿದೆ. ಅದಕ್ಕೆ ಪೂರಕವಾಗಿ ವಿದ್ಯೆಯಲ್ಲಿ, ಕಂಪ್ಯೂಟರ್ ಎಐದಲ್ಲಿ ಮೂಲಭೂತ ಜ್ಞಾನ ಬೆಳೆಸಿಕೊಂಡರೆ ಇವತ್ತಿನ ಸಮಾಜದಲ್ಲಿ ದೇಶ ಕಟ್ಟಲು ಆಧಾರ ಆಗುತ್ತದೆ. ನಿಮ್ಮ ಕುಲಕಸುಬಿಗೆ ಇಡೀ ವಿಶ್ವದಲ್ಲಿ ಮನ್ನಣೆ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ಶ್ರೀ ಸಂಗನಬಸವ ಮಂಗಲ ಭವನದಲ್ಲಿ ಹಾವೇರಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾವೇರಿ ಇದರ ತೃತೀಯ ವಾರ್ಷಿಕೋತ್ಸವ 2026 ನೇ ಸಾಲಿನ ಎಸ್.ಎಸ್‌.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ / ಬಡ್ತಿ ನೌಕರರಿಗೆ ವಿಶ್ವಕರ್ಮ ನೌಕರಶ್ರೀ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವ ಕರ್ಮ ಪರಮಾತ್ಮನ ಒಂದು ವಿಶೇಷವಾಗಿರುವ ಸ್ವರೂಪ, ಜ್ಞಾನ, ಪರಿಶ್ರಮ ಕೌಶಲ್ಯ, ಹಾಗೂ ಏಕಾಗ್ರತೆ ಈ ಎಲ್ಲ ಗುಣಗಳ ಸಮ್ಮಿಳತವಾಗಿದೆ. ವಿಶ್ವ ಕರ್ಮನ ಅವತಾರ ಮಾನವನ ಕಲ್ಯಾಣಕ್ಕೆ ಯಾವ ರೀತಿ ಮಾನವ ಬೇಟೆಯಾಡಿ ಬದುಕು ಪ್ರಾರಂಭ ಮಾಡಿದ, ಬೆಂಕಿ ಕಂಡು ಆಹಾರ ಪದ್ಧತಿ ಕಲಿತ ತದ ನಂತರ ಮನೆ ನಿರ್ಮಾಣ, ಊರು ನಿರ್ಮಾಣ ಎಲ್ಲದರಲ್ಲೂ ವಿಶ್ವಕರ್ಮನ ಅಂಶಗಳು ಬಹಳ ಸ್ಪಷ್ಟವಾಗಿ ಕಂಡು ಬರುತ್ತವೆ. ಪ್ರಾಚೀನ ಮಾನವನ ವಿಕಾಸದಲ್ಲಿ ವಿಶ್ವಕರ್ಮನ ಪಾತ್ರ ಬಹಳ ಮುಖ್ಯ ಇದೆ. ಈಗಿನ ಎಂಜನೀಯರ್‌ಗಳ ಮೂಲ ಸೃಷ್ಟಿಕರ್ತ ವಿಶ್ವಕರ್ಮ. ಸರಳವಾಗಿರುವ ರೇಖೆಗಳನ್ನು ಇಟ್ಟುಕೊಂಡು ಮಾನವನಿಗೆ ಬೇಕಾದ ಎಲ್ಲ ಆಕಾರಗಳನ್ನು ನಿರ್ಮಾಣ ಮಾಡುವುದು ವಿಶ್ವ ಕರ್ಮ. ನಮ್ಮ ಭಾರತದ ಪರಂಪರೆ ದೇವಸ್ಥಾನಗಳನ್ನು ನಿರ್ಮಾಣ ಮಾಡಿರುವ ಜ್ಞಾನಿಗಳು ವಿಶ್ವಕರ್ಮರು ಎಂದು ಹೇಳಿದರು.

ಎರಡು ಸಾವಿರ ಮೂರು ಸಾವಿರ ವರ್ಷಗಳ ಹಿಂದೆ ಕಾಡಿನಲ್ಲಿ, ನಾಡಿನಲ್ಲಿ, ಸಮುದದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಆಗಿನ ಕಾಲದಲ್ಲಿ ಸವಲತ್ತುಗಳಿರಲಿಲ್ಲ ಆಗಲೇ ಸಾವಿರಾರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ. ವಿಜಯನಗರ ಸಾಮ್ರಾಜ್ಯ, ಹೊಯ್ಸಳ ಸಾಮ್ರಾಜ್ಯದಲ್ಲಿ ವಿಶ್ವಕರ್ಮರ ಆದ್ಬುತ ಕಲೆ ಕಂಡು ಬರುತ್ತದೆ. ವಿಶ್ವಕರ್ಮರು ಇಲ್ಲದಿದ್ದರೆ ಕರ್ನಾಟಕದ ಶಿಲ್ಪಕಲೆ ಸಾಹಿತ್ಯ ಲೋಕಕ್ಕೆ ಸಿಗುತ್ತಿರಲಿಲ್ಲ. ಕಂಪ್ಯೂಟರ್ ಯುಗದಲ್ಲಿ ಎಐ ಮೂಲ ವಿಶ್ವಕರ್ಮರ ಅಂದಿನ ಯೋಜನೆ ಏನಿತ್ತು ಅದೇ ಇಂದು ಬೆಳೆದು ಬಂದಿದೆ. ಜಗತ್ತಿನ ಒಬ್ಬ ಹೆಣ್ಣಗಳು ಒಂದು ಪುಸ್ತಕ ಬರೆಯುತ್ತಿದ್ದಾಳೆ. ಈ ಭೂಮಂಡಲವನ್ನು ಸಣ್ಣದಾಗಿ ಮಾಡಬೇಕು. ಇನ್ನೊಂದು ಪುಸ್ತಕ ಬರೆದಿದ್ದಾಳೆ ಮೌಂಟೇನ್ ಹೆಡ್ ಅಂತ ಮೆದುಳಿನಲ್ಲಿ ವಿಚಾರಗಳು ಹೇಗೆ ಬರುತ್ತವೆ. ಅದರ ಕಾರ್ಯಗಳೇನು ಎಂದು ಬರೆಯುತ್ತಾಳೆ ಅದನ್ನು ನೋಡಿದರೆ ನಮ್ಮ ವಿಶ್ವಕರ್ಮರ ಕಲೆಯ ಬಗ್ಗೆ ಇದೆ. ಗುಡಿ ಕಟ್ಟಿದ ಮೇಲೆ ಕಳಸ ಇಡುವಾಗ ನೀವು ತಯಾರು ಮಾಡಿರುವ ನಕ್ಷೆ, ಕಲ್ಪನೆ ಎಲ್ಲವೂ ಸಾಕಾರಗೊಂಡಾಗ ಕಟ್ಟಡ ಕಟ್ಟಿದವರೂ ಇರುವುದಿಲ್ಲ. ಮಾಲಕರು ನಾನು ಕಟ್ಟಿಸಿದೆ ಎನ್ನುತ್ತಾರೆ. ಆದರೆ, ವಿಶಾಲವಾಗಿ ನೋಡಿದಾಗ ಈ ಭೂಮಿ ಯಾರದು, ನಾವು ಹೋದ ಮೇಲೆ ಭೂಮಿ, ದೇವಸ್ಥಾನ ಇರುತ್ತದೆ. ಹೀಗಾಗಿ ಅದನ್ನು ಕಟ್ಟಿದ ಶಿಲ್ಪಿ ಹಾಗೂ ಕಾರ್ಮಿಕ ಶಾಸ್ವತವಾಗಿರುತ್ತಾರೆ. ನಮ್ಮನ್ನು ನಾವು ನಾವು ಎಂದು ಸಣ್ಣವರಾಗುತ್ತಿದ್ದೇವೆ ಎಂದು ಹೇಳಿದರು.ಒಳ್ಳೆಯ ಕಾಲ ಬರುತ್ತದೆ
ವಿಶ್ವಕರ್ಮರು ಎಲ್ಲವನ್ನೂ ಮಾಡಿಯೂ ಮಾಡದಂತಿರುವ ಸಮಾಜ. ಇವತ್ತಿನ ನಮ್ಮ ದೇಶದಲ್ಲಿ ಮತ್ತೆ ನಿಮಗೆ ಒಳ್ಳೆಯ ಕಾಲ ಬರುತ್ತಿದೆ. ಮೊದಲು ನಾವು ಜನಸಂಖೆ ಶಾಪ ಎನ್ನುತ್ತಿದ್ದೇವು. ಈಗ ಜನಸಂಖ್ಯೆ ವರವಾಗಿದೆ. ಕೌಶಲ್ಯ ಹಾಗೂ ನೈಪುಣ್ಯತೆ ಇರುವ ಜನರಿಂದ ದೇಶ ಕಟ್ಟಲು ಸಾಧ್ಯ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೌಶಲ್ಯಾಭಿವೃದ್ಧಿ ಇಲಾಖೆ ಆರಂಭಿಸಿದರು. ವಿಶ್ವಕರ್ಮ ಎನ್ನುವ ವಿಶೇಷ ಯೋಜನೆ ಜಾರಿಗೆ ತಂದಿದ್ದಾರೆ. ವಿಶ್ವಕರ್ಮರಿಂದ ಮಾತ್ರ ಈ ದೇಶವನ್ನು ಮೂಲಭೂತವಾಗಿ ಕಟ್ಟಲು ಸಾಧ್ಯ ಎಂದು ಪಧಾನಮಂತಿಗೆ ಗೊತ್ತಿದೆ. ಈ ದೇಶದ ಸಾಮಾನ್ಯ ಜನತೆಗೂ ಗೊತ್ತಾಗಿದೆ. ಹೀಗಾಗಿ ಮತ್ತೆ ನಿಮಗೆ ಗೌರವ ಸಿಗುವ, ಮನ್ನಣೆ ಸಿಗುವ ಕಾಲ ಬಂದಿದೆ. ವಿದ್ಯೆಯಲ್ಲಿ, ಕಂಪ್ಯೂಟರ್, ಎಐದಲ್ಲಿ ಮೂಲಭೂತ ಜ್ಞಾನ ಬೆಳೆಸಿಕೊಂಡರೆ ಇವತ್ತಿನ ಸಮಾಜದಲ್ಲಿ ದೇಶ ಕಟ್ಟಲು ಆಧಾರ ಆಗುತ್ತದೆ. ನಿಮ್ಮ ಕುಲಕಸುಬಿಗೆ ಇಡೀ ವಿಶ್ವದಲ್ಲಿ ಮನ್ನಣೆ ಸಿಗುತ್ತದೆ. ಆ ಕೆಲಸ ಈ ಸಮಾಜದಿಂದ ಆಗಬೇಕು, ವಿಶ್ವಕರ್ಮ ಯೋಜನೆಯ ಸದುಪಯೋಗ ಆಗಬೇಕು ಎಂದು ಹೇಳಿದರು.

ಕಟ್ಟಡ ಕಟ್ಟಲು ಸಂಸದರ ಕ್ಷೇಮಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಕೊಡುತ್ತೇನೆ. ನಿಮ್ಮ ಬೇಡಿಕೆ ಅತ್ಯಂತ ಸಮಂಜಸವಾಗಿದೆ. ಜಾಗವನ್ನೂ ಮಂಜೂರಾತಿ ಮಾಡಿಸಲು ಪ್ರಯತ್ನ ಮಾಡುತ್ತೇನೆ. ಕಟ್ಟಡಕ್ಕೆ ದೊಡ್ಡ ಪ್ರಮಾಣದ ಸಹಾಯ ಮಾಡುತ್ತೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು, ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠ ಕಾಶೀಮಠ, ವಡ್ಡನಹಾಳ, ಶ್ರೀ ಮೌನೇಶ್ವರ ಸ್ವಾಮಿಗಳು, ಮೌನೇಶ್ವರ ಮಠ, ಹುಲಗೂರ, ಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳು, ವಿರಕ್ತಮಠ, ಶಿಗ್ಗಾಂವ, ಶ್ರೀ ಮೌನೇಶ್ವರ ಆಚಾರ್ಯರು, ರಾಣೆಬೆನ್ನೂರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ವಾಸ್ತು ತಜ್ಞರಾದ ಆರ್.ವಿ.ಕಮ್ಮಾರ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ರಾಮಣ್ಣ ಬಡಿಗೇರ, ಹಾವೇರಿ ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷರಾದ ಈರಪ್ಪ ಎಸ್ ಪಂಚಾನನ, ಸಮಾಜದ ಮುಖಂಡರುಗಳಾದ ಪ್ರೋ ಲಿಂಗರಾಜ ಕಮ್ಮಾರ, ವಿಠ್ಠಲಾಚಾರ ಬಡಿಗೇರ, ಗಣೇಶಪ್ಪ ಕಮ್ಮಾರ, ಸುರೇಶ ಕಮ್ಮಾರ, ಡಾ. ಕೆ. ಪ್ರೇಮಕುಮಾರ, ರಾಜೇಂದ್ರ ರಿತ್ತಿ, ಚಿದಾನಂದ ಬಡಿಗೇರ, ಶ್ರೀ ಕಾಳಪ್ಪ ಬಡಿಗೇರ, ನಿಂಗಪ್ಪ ಕಮ್ಮಾರ, ಸುಭಾಶ್ಚಂದ್ರ ವಿಶ್ವಬ್ರಾಹ್ಮಣ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು

Hot this week

ಹಿರಿಯ ದಲಿತ ನಾಯಕ ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಲು ಅಥಣಿಯಲ್ಲಿ ಮುಖಂಡರ ಆಗ್ರಹ

ಹಿರಿಯ ದಲಿತ ನಾಯಕ ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಲು ಅಥಣಿಯಲ್ಲಿ...

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ...

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದುರಂತ...

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ...

2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ ತುಂಬಿ: ಸಿಎಂ ಡಿ.ಕೆ. ಶಿವಕುಮಾರ್

2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ...

Topics

ಹಿರಿಯ ದಲಿತ ನಾಯಕ ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಲು ಅಥಣಿಯಲ್ಲಿ ಮುಖಂಡರ ಆಗ್ರಹ

ಹಿರಿಯ ದಲಿತ ನಾಯಕ ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಲು ಅಥಣಿಯಲ್ಲಿ...

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ...

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದುರಂತ...

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ...

2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ ತುಂಬಿ: ಸಿಎಂ ಡಿ.ಕೆ. ಶಿವಕುಮಾರ್

2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ...

ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ. ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ

ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ. ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ನನ್ನ...

ನಾಡಿನ ಸಾರಥಿಗೆ ಭವ್ಯ ಸ್ವಾಗತ, ಸ್ವಕ್ಷೇತ್ರದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಗಾರ, ಉಕ್ಕಿ ಹರಿದ ಅಭಿಮಾನದ ಹೊಳೆ

ನಾಡಿನ ಸಾರಥಿಗೆ ಭವ್ಯ ಸ್ವಾಗತ, ಸ್ವಕ್ಷೇತ್ರದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಗಾರ, ಉಕ್ಕಿ...
spot_img

Related Articles

Popular Categories

spot_img