Wednesday, August 12, 2026
20.7 C
Belagavi

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸ್ವಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಕೊಟ್ಟ ಸಿಎಂ ಡಿ.ಕೆ.ಶಿವಕುಮಾರ್

advertisement

spot_img

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸ್ವಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಕೊಟ್ಟ ಸಿಎಂ ಡಿ.ಕೆ.ಶಿವಕುಮಾರ್

ಭೂಮಿ ಮಾರಬೇಡಿ- ವ್ಯವಸಾಯ ಬಿಡಬೇಡಿ ಸಿಎಂ ಕಿವಿಮಾತು

ಕನಕಪುರ, 

“ಕ್ಷೇತ್ರದ ಬಡವರಿಗೆ ತಲೆ ಮೇಲೆ ಸೂರು, ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಡ್ಡಾಯ. ಮೆಡಿಕಲ್‌ ಕಾಲೇಜು ಶೀಘ್ರ ಪ್ರಾರಂಭ. ಸಮಸ್ಯೆಗಳನ್ನು ಆಲಿಸಲು ಅಧಿಕಾರಿ ನೇಮಕ” – ಹೀಗೆ ಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ನೀಡಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭಾನುವಾರ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

“ನನ್ನ ಕ್ಷೇತ್ರದ ಜನರಿಗೆ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ನಿಮ್ಮ ಸೇವೆಗೆ ಇರುವವನು. ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದೇ‌‌ನೆ. ನನ್ನ ಕ್ಷೇತ್ರಕ್ಕೆ ಕಾಲಿಟ್ಟ ಕ್ಷಣದಿಂದ ನಾನು ಜನರ ಸೇವಕ. ಜಿಲ್ಲಾ ಪಂಚಾಯತಿ, ಟಿಎಪಿಸಿಎಂಎಸ್ ಮೂಲಕ ನನ್ನ ರಾಜಕೀಯ ಪ್ರಾರಂಭ ಮಾಡಿದೆ. ಪಕ್ಷಬೇಧ ಮರೆತು ನನ್ನನ್ನು ಬೆಳೆಸಿದ್ದೀರಿ” ಎಂದರು.

ಮೆಡಿಕಲ್ ಕಾಲೇಜು ನನ್ನ ಕನಸಾಗಿತ್ತು

ತುಂಗಣಿ ಗ್ರಾಮದಲ್ಲಿ ಮಾತನಾಡಿದ ಅವರು, “ಅಕ್ಷರ, ಆಶ್ರಯ, ಆರೋಗ್ಯ ಹುಡುಕಿಕೊಂಡು ವಲಸೆ ಹೋಗಬೇಡಿ. ಅದೆಲ್ಲವೂ ಇಲ್ಲಿಯೇ ದೊರೆಯಲಿದೆ. ಕನಕಪುರದಲ್ಲಿ ದೊಡ್ಡ ಮೆಡಿಕಲ್ ಕಾಲೇಜು ಆಗಬೇಕು ಎನ್ನುವುದು ನನ್ನ ಕನಸಾಗಿತ್ತು. ಇಡೀ ರಾಜ್ಯದಲ್ಲಿ ತಾಲ್ಲೂಕು ಮಟ್ಟದಲ್ಲಿ ಮೆಡಿಕಲ್ ಕಾಲೇಜು ಇದ್ದರೆ ಅದು ಈ ಕ್ಷೇತ್ರದಲ್ಲಿ ಮಾತ್ರ. ಯಡಿಯೂರಪ್ಪ ಅವರು ನಮಗೆ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡಿದ್ದರು. ನಾನು ಛಲಬಿಡದೇ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದಿದ್ದೇನೆ” ಎಂದರು.ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ

“ಕ್ಷೇತ್ರದಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು.‌ ನನ್ನ ಕ್ಷೇತ್ರದ ಜನ ವಲಸೆ ಹೋಗುವುದನ್ನು ತಪ್ಪಿಸಲು ಕೆಲಸ ಮಾಡಲಾಗುತ್ತಿದೆ. ದೊಡ್ಡಆಲಳ್ಳಿ, ಹೊಸದುರ್ಗಗಳಲ್ಲಿ ಸಿಎಸ್ ಆರ್ ಅನುದಾನ ಬಳಸಿ ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಲ್ಲಿ ದೊರೆಯುವ ಶಿಕ್ಷಣ ಇಲ್ಲಿಯೇ ದೊರೆಯಬೇಕು. ನಿಮಗೆ ಆಶ್ರಯ, ಆರೋಗ್ಯ, ಅಕ್ಷರ ನೀಡುವುದು ನನ್ನ ಮೊದಲ ಆದ್ಯತೆ.‌ ಇದೇ ವೇಳೆ ಭೂಮಿ ಮಾರಬೇಡಿ- ವ್ಯವಸಾಯ ಬಿಡಬೇಡಿ” ಎಂದು ಕಿವಿಮಾತು ಹೇಳಿದರು.

Hot this week

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ - ಸರ್ವಜ್ಞನಗರದಲ್ಲಿ ಕೆಪಿಟಿಸಿಎಲ್...

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ...

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

Topics

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...
spot_img

Related Articles

Popular Categories

spot_img