Wednesday, June 10, 2026
26.3 C
Belagavi

ಸಚಿವ ಎಂ ಬಿ ಪಾಟೀಲರ ಮನೆಗೆ ಸಿದ್ಧಗಂಗಾ ಶ್ರೀ ಭೇಟಿ, ಆಶೀರ್ವಾದ

advertisement

spot_img

ಸಚಿವ ಎಂ ಬಿ ಪಾಟೀಲರ ಮನೆಗೆ ಸಿದ್ಧಗಂಗಾ ಶ್ರೀ ಭೇಟಿ, ಆಶೀರ್ವಾದ

ಬೆಂಗಳೂರು:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ ಅವರ ಇಲ್ಲಿನ ಸದಾಶಿವ ನಗರದ ನಿವಾಸಕ್ಕೆ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಗುರುವಾರ ಆಗಮಿಸಿ, ಸಚಿವರ ಕುಟುಂಬ ಪರಿವಾರಕ್ಕೆ ಆಶೀರ್ವಚನ ಮಾಡಿ, ಹರಸಿದರು.

ಬೆಳಿಗ್ಗೆಯಿಂದಲೇ ಶಾಸಕರು, ಕಾರ್ಯಕರ್ತರು, ಅಧಿಕಾರಿಗಳ ಆಗಮನ ಮತ್ತು ಅಭಿಮಾನಿಗಳ ಕಲರವದಿಂದ ತುಂಬಿದ್ದ ಸಚಿವರ ಸ್ವಂತ ನಿವಾಸಕ್ಕೆ ಆಗಮಿಸಿದ ಶ್ರೀಗಳನ್ನು ಸಚಿವರ ಕುಟುಂಬ ಪರಿವಾರ ಗೌರವದಿಂದ ಬರಮಾಡಿಕೊಂಡಿತು.ನಂತರ ಎಂ ಬಿ ಪಾಟೀಲ, ಅವರ ಪತ್ನಿ ಆಶಾ ಪಾಟೀಲ, ಮಕ್ಕಳಾದ ಬಸಂತ್ ಮತ್ತು ಧ್ರುವ ಪಾಟೀಲ ಎಲ್ಲರೂ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ಅವರೆಲ್ಲರ ಭಕ್ತಿಯನ್ನು ಸ್ವೀಕರಿಸಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕೆಲ ಹೊತ್ತು ಲೋಕಾಭಿರಾಮವಾಗಿ ಮಾತನಾಡಿ, ಬಳಿಕ ಆಶೀರ್ವಚನಗೈದು, ಒಳಿತನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಸಚಿವ ಪಾಟೀಲರು ಕೂಡ ತಮ್ಮ ಇದುವರೆಗಿನ ಸಾಧನೆಗಳ ನೆನಪಿನೊಂದಿಗೆ, ಇನ್ನು ಮುಂದೆಯೂ ಶ್ರೀಗಳ ಸಲಹೆ, ಮಾರ್ಗದರ್ಶನ ತಮಗೆ ಇರಬೇಕೆಂದು ಕೋರಿದರು.

ರಾಜ್ಯದ ಸ್ಥಿತಿಗತಿ, ಮಳೆ-ಬೆಳೆ ಇತ್ಯಾದಿಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡ ಶ್ರೀಗಳು, ತಾವು ಸಕುಟುಂಬ ಪರಿವಾರ ಸಮೇತರಾಗಿ ಸಿದ್ಧಗಂಗೆಯ ಶ್ರೀಮಠಕ್ಕೆ ಆಗಮಿಸಬೇಕೆಂದು ಆಹ್ವಾನ ನೀಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.ಇದೇ ಸಂದರ್ಭದಲ್ಲಿ ಶ್ರೀಗಳು ಸಚಿವರ ಪುತ್ರರಾದ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ ಅವರು ತೆಗೆದಿರುವ ವನ್ಯ ಜೀವಿ ಪ್ರಾಣಿಗಳ ಛಾಯಾಚಿತ್ರಗಳನ್ಜು ನೋಡಿ ಮೆಚ್ವುಗೆ ವ್ಯಕ್ತಪಡಿಸಿದರು. ಅವರ ಪರಿಸರ ಕಾಳಜಿ ಕೇಳಿಯೂ ಹರ್ಷ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಎಂ ಬಿ ಪಾಟೀಲ ಅವರು ಮೊದಲಿನಿಂದಲೂ ಶ್ರೀಮಠದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡು ಬಂದಿದ್ದಾರೆ. ವಿಶೇಷವಾಗಿ ಮಠದ ಕಾಯಕ ಪರಂಪರೆ, ಶಿಕ್ಷಣ ಪ್ರಸಾರ ಮತ್ತು ಅನ್ನ ದಾಸೋಹಗಳನ್ನು ಸಚಿವರು ಮೆಚ್ಚಿಕೊಂಡಿರುವುದನ್ನು ಇಲ್ಲಿ ನೆನೆಯಬಹುದು.

ಏತನ್ಮಧ್ಯೆ ಸಚಿವರ ನಿವಾಸಕ್ಕೆ ಸಾವಿರಾರು ಅಭಿಮಾನಿಗಳು ಲಗ್ಗೆ ಇಟ್ಟಿದ್ದರು. ಅದರಲ್ಲೂ ಸಚಿವರು ತವರು ಜಿಲ್ಲೆ ವಿಜಯಪುರದಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿಗೆ ಬಂದಿಳಿದ್ದಿದ್ದು ಎದ್ದು ಕಾಣುತ್ತಿತ್ತು. ಸಚಿವರು ತಮ್ಮ ತವರಿನ ಜನರ ಜತೆ ಲವಲವಿಕೆಯಿಂದ ಓಡಾಡುತ್ತ, ಕೈ ಕುಲುಕುತ್ತ, ಅವರಿಗೆ ಆತಿಥ್ಯ ನೀಡುತ್ತ ಚಟವಟಿಕೆಯಿಂದಿದ್ದರು. ಇನ್ನೊಂದು ಕಡೆಯಲ್ಲಿ ಅಧಿಕಾರಿಗಳ ದಂಡು ಕೂಡ ಸಚಿವರ ಭೇಟಿ ಬಯಸಿ ಬಂದಿಳಿಯುತ್ತಿತ್ತು.ಹರಿಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಚಿವರು

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಸಚಿವ ಎಂ.ಬಿ.ಪಾಟೀಲ ಅವರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರ ಸಹೋದರರೂ ಆದ ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ ಅವರೂ ಇದ್ದರು.

Hot this week

ಹಿರಿಯ ದಲಿತ ನಾಯಕ ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಲು ಅಥಣಿಯಲ್ಲಿ ಮುಖಂಡರ ಆಗ್ರಹ

ಹಿರಿಯ ದಲಿತ ನಾಯಕ ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಲು ಅಥಣಿಯಲ್ಲಿ...

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ...

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದುರಂತ...

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ...

2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ ತುಂಬಿ: ಸಿಎಂ ಡಿ.ಕೆ. ಶಿವಕುಮಾರ್

2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ...

Topics

ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ. ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ

ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ. ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ನನ್ನ...

ನಾಡಿನ ಸಾರಥಿಗೆ ಭವ್ಯ ಸ್ವಾಗತ, ಸ್ವಕ್ಷೇತ್ರದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಗಾರ, ಉಕ್ಕಿ ಹರಿದ ಅಭಿಮಾನದ ಹೊಳೆ

ನಾಡಿನ ಸಾರಥಿಗೆ ಭವ್ಯ ಸ್ವಾಗತ, ಸ್ವಕ್ಷೇತ್ರದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಗಾರ, ಉಕ್ಕಿ...
spot_img

Related Articles

Popular Categories

spot_img