ಈಜಲು ಹೋಗಿದ್ದ ಬಾಲಕರು ನೀರುಪಾಲು
ಮುಗಿಲು ಮುಟ್ಟಿದ ಆಕ್ರಂದನ
ಇಳಕಲ್ : ಬಿಸಿಲಿನ ಬೇಗೆಯನ್ನು ತಪ್ಪಿಸಿಕೊಳ್ಳಲು ಗೆಳೆಯರೊಂದಿಗೆ ಈಜಲು ತೆರಳಿದ್ದ ಮೂವರು ಬಾಲಕರಲ್ಲಿ ಇಬ್ಬರು ಬಾಲಕರು ನೀರುಪಾಲಾದ ಘಟನೆ ಎಪ್ರಿಲ್ ೨೧ ಮಂಗಳವಾರ ನಡೆದಿದೆ.
ಹೊರವಲಯದ ಹನಮನಾಳ ಗ್ರಾಮದ ಸಮೀಪ ಗ್ರಾನೈಟ್ ಕ್ವಾರಿಯಲ್ಲಿ ಈಜುಲು ತೆರಳಿದ್ದ ಬಾಲಕರು ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನಗರದ ಅಲಂಪೂಪೇಟೆಯ ನಿವಾಸಿಗಳಾದ ವಿಜಯಮಹಾಂತೇಶ ನಾಗಪ್ಪ ವಾಲಿಕಾರ (೧೬), ವಿನಾಯಕ ಭೀಮಣ್ಣ ಗೋಲ್ಲರ (೧೨) ಮೃತಪಟ್ಟ ಬಾಲಕರು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಹಾಗೂ ಮೀನುಗಾರರು ಸತತ ೪ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರಗಡೆ ತೆಗೆದರು.ಬಾಲಕರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು. ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಸತ್ತಿಗೌಡರ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ನಡೆಸಿದ್ದಾರೆ



