Wednesday, July 22, 2026
21.9 C
Belagavi

ಕೇವಲ ‘ಗುರಾಯಿಸಿದ’ ಆಕ್ರೋಶಕ್ಕೆ ಮರ್ಡರ್.. ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರಕ್ತಚರಿತ್ರೆ!

advertisement

spot_img

ಕೇವಲ ‘ಗುರಾಯಿಸಿದ’ ಆಕ್ರೋಶಕ್ಕೆ ಮರ್ಡರ್.. ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರಕ್ತಚರಿತ್ರೆ!

ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಕೊಲೆ, ಸುಲಿಗೆಗಳು ನಡೆಯುತ್ತಿರುವುದು ಹೊಸದೇನಲ್ಲ. ಆದರೆ ಇಲ್ಲೊಂದು ಕಡೆ ಕೇವಲ “ನನ್ನನ್ನು ಯಾಕೆ ಗುರಾಯಿಸಿ ನೋಡಿದೆ?” ಎಂಬ ಒಂದೇ ಒಂದು ಸಣ್ಣ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕನಕಪುರ ರಸ್ತೆಯ ಜಾರಗನಹಳ್ಳಿ ಬಳಿ ತಡರಾತ್ರಿ ನಡೆದಿರೋ ಈ ಶಾಕಿಂಗ್ ಘಟನೆಯಲ್ಲಿ ಮದ್ಯದ ಅಮಲಿನಲ್ಲಿ ಇಬ್ಬರು ಯುವಕರು ಮಾಡಬಾರದ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಕೇವಲ ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನ ಭೀಕರ ಹತ್ಯೆ!

ಸಿಲಿಕಾನ್ ಸಿಟಿಯಲ್ಲಿ ಮದ್ಯದ ಅಮಲಿನಲ್ಲಿ ಮತ್ತೊಂದು ಭೀಕರ ರಕ್ತಪಾತ ನಡೆದಿದೆ. ಬೆಂಗಳೂರಿನ ಕನಕಪುರ ರಸ್ತೆಯ ಜಾರಗನಹಳ್ಳಿ ಬಳಿ ತಡರಾತ್ರಿ ಉದಯ್ ಕುಮಾರ್ ಎಂಬ ಯುವಕನನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚೆಲುವ ಮತ್ತು ತೇಜ ಎಂಬ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿ ಆಘಾತಕಾರಿ ವಿಷಯವೇನೆಂದರೆ, ಹತ್ಯೆಗೀಡಾದ ಉದಯ್ ಕುಮಾರ್ ಹಾಗೂ ಆರೋಪಿಗಳ ನಡುವೆ ಈ ಮುಂಚೆ ಯಾವುದೇ ರೀತಿಯ ವೈಷಮ್ಯ ಅಥವಾ ಕನಿಷ್ಠ ಪರಿಚಯವೂ ಇರಲಿಲ್ಲ! ಕೇವಲ ಮದ್ಯದ ಅಮಲಿನಲ್ಲಿ ಜಗಳ ಶುರುವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿದೆ.ನಿನ್ನೆ ರಾತ್ರಿ ಜಾರಗನಹಳ್ಳಿಯ ಸ್ಥಳೀಯ ಬಾರ್ ಒಂದರಲ್ಲಿ ಉದಯ್ ಕುಮಾರ್ ಮತ್ತು ಆರೋಪಿಗಳಾದ ಚೆಲುವ ಹಾಗೂ ತೇಜ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಉದಯ್ ಕುಮಾರ್ ತಮ್ಮ ಕಡೆಗೆ ಗುರಾಯಿಸಿ ನೋಡುತ್ತಿದ್ದಾನೆ ಎಂದು ಆರೋಪಿಸಿ ಇಬ್ಬರು ಆರೋಪಿಗಳು ಗಲಾಟೆ ತೆಗೆದಿದ್ದಾರೆ. ಬಾರ್ ಒಳಗಡೆಯೇ ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ತದನಂತರ ಬಾರ್‌ನಿಂದ ಹೊರಬಂದ ಉದಯ್‌ನನ್ನು ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ. ರಸ್ತೆಯಲ್ಲಿ ಒಂಟಿಯಾಗಿ ಸಿಕ್ಕ ಉದಯ್‌ನನ್ನು ತಡೆದು ನಿಲ್ಲಿಸಿ, ಮೊದಲು ಬಿಯರ್ ಬಾಟಲಿಯಿಂದ ತಲೆಗೆ ಜೋರಾಗಿ ಹೊಡೆದಿದ್ದಾರೆ. ಉದಯ್ ತಲೆ ಸುತ್ತಿ ಬೀಳುತ್ತಿದ್ದಂತೆ, ತಾವೇ ತಂದಿದ್ದ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ.

ಚಾಕು ಇರಿತದ ರಭಸಕ್ಕೆ ರಕ್ತದ ಮಡುವಿನಲ್ಲಿ ಬಿದ್ದ ಉದಯ್ ಕುಮಾರ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕೃತ್ಯ ಎಸಗಿದ ಬೆನ್ನಲ್ಲೇ ಆರೋಪಿಗಳಾದ ಚೆಲುವ ಮತ್ತು ತೇಜ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಇಬ್ಬರು ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಯಾವುದೇ ಹಳೇ ಹಗೆತನವಿಲ್ಲದೆ, ಕೇವಲ ಕ್ಷಣಿಕ ಆವೇಶ ಹಾಗೂ ಮದ್ಯದ ಅಮಲಿನಲ್ಲಿ ನಡೆದ ಈ ಕೊಲೆ ಜಾರಗನಹಳ್ಳಿ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ಪರಾರಿಯಾಗಿರುವ ಹಂತಕರು ಪೊಲೀಸರ ಕೈಗೆ ಯಾವಾಗ ಸಿಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Hot this week

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ಅನಿವಾರ್ಯ: ಸಿಎಂ ಡಿ.ಕೆ.ಶಿವಕುಮಾರ್

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ಅನಿವಾರ್ಯ: ಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಎಲ್ ನ...

ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ಎಲ್ಲರೂ ಸಹಕರಿಸಿ:-ಮುಖ್ಯ ಚುನಾವಣಾ ಅಧಿಕಾರಿ ವಿ.ಅನ್ಬುಕುಮಾರ್

ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ಎಲ್ಲರೂ ಸಹಕರಿಸಿ: -ಮುಖ್ಯ ಚುನಾವಣಾ ಅಧಿಕಾರಿ ವಿ.ಅನ್ಬುಕುಮಾರ್ ಧಾರವಾಡ...

ರಾಮದುರ್ಗ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನವೀಕೃತ ಕೊಠಡಿ ಹಾಗೂ ನಾಮಫಲಕ ಅನಾವರಣ

ರಾಮದುರ್ಗ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನವೀಕೃತ ಕೊಠಡಿ ಹಾಗೂ ನಾಮಫಲಕ ಅನಾವರಣ ರಾಮದುರ್ಗ...

15 ಸಾವಿರ ಶಾಲಾ ಶಿಕ್ಷಕರ ನೇಮಕ: ಸಿಎಂ ಡಿ ಕೆ ಶಿವಕುಮಾರ್

15 ಸಾವಿರ ಶಾಲಾ ಶಿಕ್ಷಕರ ನೇಮಕ: ಸಿಎಂ ಡಿ ಕೆ ಶಿವಕುಮಾರ್ ಕೆಪಿಎಸ್...

15 ದಿನದಲ್ಲಿ ಕೇಂದ್ರಕ್ಕೆ ಸಲ್ಲಿಸಲು ಬರ ಪರಿಸ್ಥಿತಿ ವರದಿ ಸಿದ್ಧಪಡಿಸಿ: ಅಧಿಕಾರಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ನಿರ್ದೇಶನ

15 ದಿನದಲ್ಲಿ ಕೇಂದ್ರಕ್ಕೆ ಸಲ್ಲಿಸಲು ಬರ ಪರಿಸ್ಥಿತಿ ವರದಿ ಸಿದ್ಧಪಡಿಸಿ: ಅಧಿಕಾರಿಗಳಿಗೆ...

Topics

ರಾಮದುರ್ಗ ಮಾಜಿ ಸೈನಿಕರಿಗೆ ಗೌರವ ಡಾಕ್ಟರೆಟ್

ಮಾಜಿ ಸೈನಿಕರಿಗೆ ಗೌರವ ಡಾಕ್ಟರೆಟ್ ರಾಮದುರ್ಗ : ಅಖಿಲ ಕರ್ನಾಟಕ ಮಾಜಿ ಸೈನಿಕರ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...
spot_img

Related Articles

Popular Categories

spot_img