Sunday, August 9, 2026
20.1 C
Belagavi

ಬೆಂಗಳೂರು ಪೊಲೀಸ್ ಕಮೀಷನರ್ ಅವರೊಂದಿಗೆ ಗೃಹ ಸಚಿವರ ಸಭೆ

advertisement

spot_img

*ಬೆಂಗಳೂರು ಪೊಲೀಸ್ ಕಮೀಷನರ್ ಅವರೊಂದಿಗೆ ಗೃಹ ಸಚಿವರ ಸಭೆ*
*ಸಂಚಾರ ದಟ್ಟಣೆ ನಿಯಂತ್ರಣ*
*ಸೈಬರ್ ಅಪರಾಧಗಳ ತಡೆಗೆ ಖಾಸಗಿ ಸಹಭಾಗಿತ್ವ*
*ಮಾದಕ ದ್ರವ್ಯ (ಡ್ರಗ್ಸ್) ಮುಕ್ತ ಬೆಂಗಳೂರು*

ರಾಜ್ಯದ ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಇಲಾಖೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ, ಹಿರಿಯ ಅಧಿಕಾರಿಗಳೊಂದಿಗೆ ವಿಸ್ತೃತ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ, ಸೈಬರ್ ಅಪರಾಧ, ಮಹಿಳಾ ಸುರಕ್ಷತೆ ಹಾಗೂ ಮಾದಕ ದ್ರವ್ಯ (ಡ್ರಗ್ಸ್) ನಿಯಂತ್ರಣದ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು

ಸಭೆಯ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
• ಬೆಂಗಳೂರು ಮೊಬಿಲಿಟಿ ಮಿಷನ್ (ಸಂಚಾರ ದಟ್ಟಣೆ ನಿಯಂತ್ರಣ): ಬೆಂಗಳೂರು ನಗರದ ಪ್ರಮುಖ ಸಮಸ್ಯೆಯಾದ ಟ್ರಾಫಿಕ್ ದಟ್ಟಣೆಯನ್ನು ಕೇವಲ ಮೂಲಸೌಕರ್ಯ ಬದಲಾವಣೆಯಿಂದಲ್ಲದೆ, ವ್ಯವಸ್ಥಿತ ಲೋಪದೋಷಗಳನ್ನು (Systemic Deficiencies) ಸರಿಪಡಿಸುವ ಮೂಲಕ ನಿರ್ವಹಿಸಲು ನಿರ್ಧರಿಸಲಾಗಿದೆ ಇದಕ್ಕಾಗಿ ಬಿಎಂಟಿಸಿ (BMTC), ಬಿಎಂಆರ್‌ಸಿಎಲ್ (BMRCL) ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ‘ಬೆಂಗಳೂರು ಅರ್ಬನ್ ಮೊಬಿಲಿಟಿ ಮಿಷನ್’ ತಂಡವನ್ನು ರಚಿಸಲಾಗುವುದು. ಇದರ ಸಂಪೂರ್ಣ ನೀಲಿ ನಕ್ಷೆಯನ್ನು ಮುಂದಿನ 2-3 ದಿನಗಳಲ್ಲಿ ಪ್ರಕಟಿಸಲಾಗುವುದು

• ರೌಡಿಸಂ ವಿರುದ್ಧ ಕಠಿಣ ಕ್ರಮ: ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ (Anti-Rowdy Squad) ರಚಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೆಳಹಂತದ ಪೊಲೀಸ್ ಅಧಿಕಾರಿಗಳು ರೌಡಿಗಳ ಜನ್ಮದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಊಟಕ್ಕೆ ಹೋಗುವುದು ಅಥವಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತಹ ಕೃತ್ಯಗಳಲ್ಲಿ ತೊಡಗಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಇಂತಹ ಲೋಪಗಳು ಕಂಡುಬಂದಲ್ಲಿ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು.

• ಸೈಬರ್ ಅಪರಾಧಗಳ ತಡೆಗೆ ಖಾಸಗಿ ಸಹಭಾಗಿತ್ವ: ಬೆಂಗಳೂರು ಜಾಗತಿಕ ಮಟ್ಟದಲ್ಲಿ 4ನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿರುವುದರಿಂದ ಇಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಸೈಬರ್ ಅಪರಾಧಿಗಳನ್ನು ಮಟ್ಟಹಾಕಲು ಗೃಹ ಇಲಾಖೆ, ಐಟಿ-ಬಿಟಿ ಮತ್ತು ಇ-ಆಡಳಿತ ಇಲಾಖೆಗಳನ್ನು ಒಗ್ಗೂಡಿಸಿ ಸಮಗ್ರ ನೀತಿಯನ್ನು ತರಲಾಗುವುದು. ಮುಂದಿನ ವಾರ ಖಾಸಗಿ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ‘ಸೇಫ್ಟಿ ಗಾರ್ಡ್ ರೈಲ್ಸ್’ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.

• ಮಾದಕ ದ್ರವ್ಯ (ಡ್ರಗ್ಸ್) ಮುಕ್ತ ಬೆಂಗಳೂರು: ಮಾದಕ ದ್ರವ್ಯ ಜಾಲದ ವಿರುದ್ಧ ಗೃಹ ಇಲಾಖೆ ಸಮರ ಸಾರಿದೆ. ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದ ಸಣ್ಣ ಪ್ರಮಾಣದಲ್ಲಿ ಬರುವ ಮಾತ್ರೆಗಳು ಹಾಗೂ ಸೈಕೋಟ್ರೋಪಿಕ್ ಪದಾರ್ಥಗಳನ್ನು ಪತ್ತೆಹಚ್ಚಲು ಗಡಿಭಾಗಗಳಲ್ಲಿ ಹೆಚ್ಚಿನ ಟೆಸ್ಟಿಂಗ್ ಕಿಟ್‌ಗಳನ್ನು ಒದಗಿಸಲಾಗುವುದು. ವಿದೇಶಿ ಪ್ರಜೆಗಳ ಕಾನೂನುಬಾಹಿರ ವಾಸ್ತವ್ಯ ಹಾಗೂ ಡಿಪೋರ್ಟೇಶನ್ (ಗಡಿಪಾರು) ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚಿಸಲಾಗುವುದು. ಈ ಇಡೀ ನಿಯಂತ್ರಣ ಪ್ರಕ್ರಿಯೆಗೆ ಜಾಗತಿಕ ಮಟ್ಟದ ಅತ್ಯುತ್ತಮ ಮಾದರಿಗಳನ್ನು (Best Practices) ಅಧ್ಯಯನ ಮಾಡಿ, ಮುಂದಿನ ಎರಡು ವಾರಗಳಲ್ಲಿ ಸಮಗ್ರ ನೀಲಿ ನಕ್ಷೆ (Blue Print) ಸಿದ್ಧಪಡಿಸಲಾಗುವುದು.

• ದೋಷಾರೋಪಣೆ ಪಟ್ಟಿ (Charge Sheet) ಸಲ್ಲಿಕೆಯಲ್ಲಿ ವಿಳಂಬಕ್ಕೆ ಬ್ರೇಕ್: ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಪ್ರಕರಣ ದಾಖಲಾದ ನಂತರ ಚಾರ್ಜ್ ಶೀಟ್ ಸಲ್ಲಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಅಥವಾ ಪ್ರಾಸಿಕ್ಯೂಷನ್‌ನಲ್ಲಿ ತಾರತಮ್ಯ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಮುಂಬರುವ ದಿನಗಳಲ್ಲಿ ಈ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು.

Hot this week

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

Topics

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ ರಾಮದುರ್ಗ: ಕಿತ್ತೂರು ರಾಣಿ ಚನ್ನಮ್ಮ...

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ ಬೊಮ್ಮಾಯಿ

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ...

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ - 1,500 ಉದ್ಯೋಗ...
spot_img

Related Articles

Popular Categories

spot_img