ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ
ಇಂದು ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ನಿಖಿಲ್ ಮಲ್ಲವರಪು ಅವರೊಂದಿಗೆ ಫಲಪ್ರದ ಸಭೆ ನಡೆಸಲಾಯಿತು.
ಇನ್ವೆಸ್ಟ್ ಕರ್ನಾಟಕ ಕಾನ್ ಕ್ಲೇವ್ – 2026ರಲ್ಲಿ ಸಹಿ ಮಾಡಲಾದ ₹500 ಕೋಟಿ ಹೂಡಿಕೆ ಒಪ್ಪಂದದ ಅನುಷ್ಠಾನದ ಪ್ರಗತಿ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. 2026-27ರಿಂದ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಈ ಹೂಡಿಕೆ ಜಾರಿಯಾಗಲಿದ್ದು, ಸುಮಾರು 1,500 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ & ಏರೋಸ್ಪೇಸ್ ಪಾರ್ಕ್ ನಲ್ಲಿರುವ ತಮ್ಮ ಘಟಕದಲ್ಲಿ ಸೆಪ್ಟೆಂಬರ್‌ನಿಂದ ನಿರ್ಮಾಣ ಕಾರ್ಯ ಆರಂಭಿಸಿ, ಅತ್ಯಾಧುನಿಕ ಏರೋಸ್ಪೇಸ್ ಎಲೆಕ್ಟ್ರಾನಿಕ್ಸ್, ರಕ್ಷಣಾ ಎಲೆಕ್ಟ್ರಾನಿಕ್ಸ್, ರಡಾರ್ ವ್ಯವಸ್ಥೆಗಳು ಹಾಗೂ ಎಲೆಕ್ಟ್ರಾನಿಕ್ ವಾರ್ಫೇರ್ ತಂತ್ರಜ್ಞಾನಗಳ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಸಂಸ್ಥೆ ಮುಂದಾಗಿರುವುದು ಸಂತಸದ ವಿಚಾರ.
ರಕ್ಷಣಾ, ಬಾಹ್ಯಾಕಾಶ ಹಾಗೂ ಉನ್ನತ ತಂತ್ರಜ್ಞಾನ ಉತ್ಪಾದನೆಯಲ್ಲಿ ಕರ್ನಾಟಕವನ್ನು ದೇಶದ ಮುಂಚೂಣಿ ಕೇಂದ್ರವನ್ನಾಗಿ ರೂಪಿಸುವ ನಮ್ಮ ಸಂಕಲ್ಪಕ್ಕೆ ಇಂತಹ ಹೂಡಿಕೆಗಳು ಮತ್ತಷ್ಟು ಬಲ ನೀಡಲಿವೆ.



