ಇಂದು ಖಾನಾಪೇಠದ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ವತಿಯಿಂದ ಕಾರ್ಖಾನೆಯ ಶೇರುದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವು ಗಚ್ಚಿನ ಹಿರೇಮಠ, ಕಿಲ್ಲಾ ತೊರಗಲ್‌ನ ಶ್ರೀ ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಕಾರ್ಖಾನೆಯ ಅಧ್ಯಕ್ಷ ಮಹದೇವಪ್ಪ ಯಾದವಾಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಸ್. ಬೆಳವಣಿಗೆ ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಸಿಬ್ಬಂದಿ ಹಾಗೂ ಶೇರುದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಖಾನೆಯ ವತಿಯಿಂದ ಶೇರುದಾರರಿಗೆ 2026ರ ಆಗಸ್ಟ್ 5ರಿಂದ ಆಗಸ್ಟ್ 20ರವರೆಗೆ, ಭಾನುವಾರವನ್ನು ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲಾಗುವುದು ಎಂದು ತಿಳಿಸಲಾಯಿತು.ರಿಯಾಯಿತಿ ದರದಂತೆ ‘ಅ’ ವರ್ಗದ ಶೇರುದಾರರಿಗೆ ₹2,400 ಹಾಗೂ ‘ಡ’ ವರ್ಗದ ಶೇರುದಾರರಿಗೆ ₹1,200 ದರದಲ್ಲಿ ಸಕ್ಕರೆ ನೀಡಲಾಗುತ್ತದೆ. ನಿಗದಿತ ದಿನಾಂಕ ಹಾಗೂ ಸಮಯದೊಳಗೆ ಶೇರುದಾರರು ಆಗಮಿಸಿ ತಮ್ಮ ಪಾಲಿನ ಸಕ್ಕರೆಯನ್ನು ಪಡೆದುಕೊಳ್ಳುವಂತೆ ಕಾರ್ಖಾನೆ ಆಡಳಿತ ಮಂಡಳಿ ಮನವಿ ಮಾಡಿದೆ.
ಈ ಯೋಜನೆಯು ಶೇರುದಾರರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಶೇರುದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Trending Now



