Wednesday, June 10, 2026
26.3 C
Belagavi

ರಾಜ್ಯದ ಪ್ರಗತಿಗೆ ದೇವರಾಜ ಅರಸು ಅವರಿಂದ ಅಡಿಪಾಯ: ಸಿಎಂ ಡಿ.ಕೆ. ಶಿವಕುಮಾರ್

advertisement

spot_img

ರಾಜ್ಯದ ಪ್ರಗತಿಗೆ ದೇವರಾಜ ಅರಸು ಅವರಿಂದ ಅಡಿಪಾಯ: ಸಿಎಂ ಡಿ.ಕೆ. ಶಿವಕುಮಾರ್

ಭೂಸುಧಾರಣೆ ಕಾಯ್ದೆಯಿಂದ ಇಡೀ ದೇಶದಲ್ಲಿ ಕ್ರಾಂತಿ

ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಅರಸು ಅವರೇ ಕಾರಣ

ಬೆಂಗಳೂರು, ಜೂ. 06:

“ದೇವರಾಜ ಅರಸು ಅವರು ನಮ್ಮ ರಾಜ್ಯದ ಪ್ರಗತಿಗೆ ಅಡಿಪಾಯ ಹಾಕಿದ್ದಾರೆ. 100 ವರ್ಷವಾದರೂ ಸಾಧನೆಗಳ ಮೂಲಕ ಅವರು ಜೀವಂತವಾಗಿರುತ್ತಾರೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಮಾಜಿ ಸಿಎಂ ದೇವರಾಜು ಅರಸು ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.“ದೇವರಾಜ ಅರಸು ಅವರು ನಮ್ಮನ್ನು ಅಗಲಿ 45 ವರ್ಷಗಳಾಗಿವೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಅವರ ಭಾಷಣಗಳನ್ನು ಕೇಳಿದ್ದೇನೆ. ಅವರು ರಾಜಿನಾಮೆ ಕೊಟ್ಟಾಗ ಮಾಡಿದ ಕೊನೇ ಭಾಷಣ ನನ್ನ ಕಿವಿಯಲ್ಲಿ ಹಾಗೆ ಉಳಿದಿದೆ. ಅವರು ಯಾವ ಭಾವನೆಯೊಂದಿಗೆ ರಾಜಕಾರಣ, ಅಧಿಕಾರ ನಡೆಸಿದ್ದರು ಎಂದು ಅವರು ಹೇಳಿದ್ದರು. ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಅರಸು ಅವರ ನಾಯಕತ್ವದಲ್ಲಿ ಉಳುವವನಿಗೆ ಭೂಮಿ ನೀಡಬೇಕು ಎಂದು ತಂದ ಭೂ ಸುಧಾರಣಾ ಕಾಯ್ದೆ ದೇಶಕ್ಕೆ ಒಂದು ಮಾದರಿ. ಅದೊಂದು ಕ್ರಾಂತಿ. ಅರಸು ಅವರೊಬ್ಬ ಧೀಮಂತ ನಾಯಕ. ಅವರು ಎಲ್ಲಾ ಜನಾಂಗದವರನ್ನು ಬೆಳೆಸಿ, ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಿಂದುಳಿದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಸಲು ಅವರು ಕ್ರಮ ಕೈಗೊಂಡರು.” ಎಂದು ಸ್ಮರಿಸಿದರು.

ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಅರಸು ಅವರೇ ಕಾರಣ

“ಅಂದಿನ ಕಾಲದಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಅಡಿಪಾಯ ಹಾಕಿದ ಧೀಮಂತ ನಾಯಕ. ರೈತರು ಮಾತ್ರವಲ್ಲ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರು ಕೊಡುಗೆಯನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಎಲ್ಲಾ ನಾಯಕರಿಗೆ ನಮನ ಅರ್ಪಿಸಿದ್ದೆ, ಇಂದು ಅರಸು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ” ಎಂದು ತಿಳಿಸಿದರು.

Hot this week

ಹಿರಿಯ ದಲಿತ ನಾಯಕ ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಲು ಅಥಣಿಯಲ್ಲಿ ಮುಖಂಡರ ಆಗ್ರಹ

ಹಿರಿಯ ದಲಿತ ನಾಯಕ ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಲು ಅಥಣಿಯಲ್ಲಿ...

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ...

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದುರಂತ...

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ...

2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ ತುಂಬಿ: ಸಿಎಂ ಡಿ.ಕೆ. ಶಿವಕುಮಾರ್

2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ...

Topics

ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ. ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ

ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ. ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ನನ್ನ...

ನಾಡಿನ ಸಾರಥಿಗೆ ಭವ್ಯ ಸ್ವಾಗತ, ಸ್ವಕ್ಷೇತ್ರದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಗಾರ, ಉಕ್ಕಿ ಹರಿದ ಅಭಿಮಾನದ ಹೊಳೆ

ನಾಡಿನ ಸಾರಥಿಗೆ ಭವ್ಯ ಸ್ವಾಗತ, ಸ್ವಕ್ಷೇತ್ರದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಗಾರ, ಉಕ್ಕಿ...
spot_img

Related Articles

Popular Categories

spot_img