ಭಾರತದ ರಾಷ್ಟ್ರೀಯ ಜನಗಣತಿ 2027
ದಿನಾಂಕ:04.04.2026ರಂದು ರಾಮದುರ್ಗ ನಗರದ ಶ್ರೀಮತಿ ಆಯ್.ಎಸ್.ಯಾದವಾಡ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಭಾರತದ ರಾಷ್ಟ್ರೀಯ ಜನಗಣತಿ 2027 ನೇದ್ದರ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ, ತಹಶೀಲ್ದಾರರಾದ ಶ್ರೀ ಪ್ರಕಾಶ ಹೊಳೆಪ್ಪಗೋಳ ಇವರು ಮಾತನಾಡಿ,ದಿನಾಂಕ:04.04.2026 ರಿಂದ ದಿನಾಂಕ:12.04.2026ರ ವರೆಗೆ ಒಟ್ಟು 09 ದಿನಗಳ ಕಾಲ ನಡೆಯಲಿರುವ ಈ ತರಬೇತಿ ಕಾರ್ಯಗಾರದಲ್ಲಿ ರಾಮದುರ್ಗ ಗ್ರಾಮೀಣ ವ್ಯಾಪ್ತಿಯ 451 ಗಣತಿದಾರರು ಹಾಗೂ 80 ಮೇಲ್ವಿಚಾರರಕರು ಮತ್ತು ರಾಮದುರ್ಗ ನಗರ ವ್ಯಾಪ್ತಿಯ 74 ಗಣತಿದಾರರು ಹಾಗೂ 13 ಮೇಲ್ವಿಚಾರಕರು ಸೇರಿ, ಒಟ್ಟು 705 ಗಣತಿದಾರರಿಗೆ ಹಾಗೂ 93 ಜನ ಮೇಲ್ವಿಚಾರಕರು ತರಬೇತಿಯನ್ನು ಪಡೆಯುತ್ತಿದ್ದು, ಮಾಸ್ಟರ್ ಟ್ರೇನರ್ʼರವರ ಮೂಲಕ ಉತ್ತಮ ತರಬೇತಿಯನ್ನು ಪಡೆದುಕೊಂಡು, 2027ರ ಭಾರತದ ಜನಗಣತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು. ಅಲ್ಲದೇ ಭಾರತದ ಭವಿಷ್ಯದ 10 ವರ್ಷಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಈ ಜನಗಣತಿಯ ದತ್ತಾಂಶವು ಅತೀ ಅವಶ್ಯವಿರುವ ಕಾರಣ, ಯಾವುದೇ ಮನೆಗಳು/ಕುಟುಂಬಗಳು ಬಿಟ್ಟು ಹೋಗದಂತೆ ಜಾಗ್ರತಿ ವಹಿಸಿ ಗಣತಿ ಕಾರ್ಯವನ್ನು ನಿರ್ವಹಿಸುವಂತೆ ತಿಳಿಸಿದರು.
ರಾಮದುರ್ಗ ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀ ಆಯ್.ಕೆ.ಗುಡದಾರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ ಮಾಸ್ಟರ್ ಟ್ರೇನರ್ʼಗಳಾದ ಶ್ರೀ ಎ.ವಿ.ಪಾಟೀಲ, ಶ್ರೀ ಸುರೇಶ ಅಣ್ಣಿಗೇರಿ, ಡಾ||ಪ್ರಕಾಶ ತೆಗ್ಗಿಹಳ್ಳಿ, ಶ್ರೀಮತಿ ಮಂಜುಳಾ, ಶ್ರೀ ಎಮ್ೆನ್.ಭಜಂತ್ರಿ ಹಾಗೂ ಶ್ರೀಮತಿ ಎಸ್.ಆಯ್.ಹೊಸೂರ ಇವರು ಉಪಸ್ಥಿತರಿದ್ದರು. ಸುರೇಬಾನ (ರಾಮದುರ್ಗ) ಕಂದಾಯ ನಿರೀಕ್ಷಕರಾದ ಶ್ರೀ ಮಹೇಶ ಟೆಂಗಿನಕಾಯಿ ಇವರು ನಿರೂಪಿಸಿದರು.
Trending Now



