Monday, June 1, 2026
26.1 C
Belagavi

ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

advertisement

spot_img

ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

ತಾಯಂದಿರು ಭಯ ಮುಕ್ತವಾಗಿ ಬದುಕಬೇಕೆಂದರೆ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು:ಬಸವರಾಜ ಬೊಮ್ಮಾಯಿ

ಬಾಗಲಕೋಟೆ: ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ. ನೇಹಾ ಹಿರೇಮಠ್ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ನಡೆದಿದೆ. ಪ್ರತಿ ಊರಿನಲ್ಲಿಯೂ ಇದು ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತ ಇಲ್ಲವೋ ಅದು ಒಂದು ರಾಜ್ಯ, ವ್ಯವಸ್ಥೆ ಅಂತ ಕರೆಯಲು ಸಾಧ್ಯವಿಲ್ಲ. ಎಲ್ಲಾ ತಾಯಂದಿರು ಭಯ ಮುಕ್ತವಾಗಿ ಬದುಕಬೇಕೆಂದರೆ ಸರ್ಕಾರವನ್ನು ಆದಷ್ಡು ಬೇಗ ಕಿತ್ತೊಗೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಾಗಲಕೋಟೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಹಿಳಾ ಮೋರ್ಚಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾಯಂದಿರು ಅತಿ ಹೆಚ್ಚು ಮನೆಗಳಿಗೆ ಹೋಗಿ ಚುನಾವಣೆಯಲ್ಲಿ ಗೆಲ್ಲಿಸುವ ಶಕ್ರಿ ನಿಮಗಿದೆ. ಚುನಾವಣೆ ಪರಿವರ್ತನೆ ಮಾಡುವ ಶಕ್ತಿ ತಾಯಂದಿರಿಗಿದೆ‌ ಆ ಕೆಲಸ ನೀವು ಮಾಡಬೇಕು. ಕಾಂಗ್ರೆಸ್ ನವರು ಹೆಣ್ಣುಮಕ್ಕಳ ಮೇಲೆ ನಂಬಿಕೆ ಇಲ್ಲ. ಸಿಎಂ ಅಕ್ಕಿ ಕೊಟ್ಟು ಗೃಹ ಲಕ್ಷ್ಮೀ ಕೊಟ್ಡಿದ್ದೆವೆ. ಅವರು ಮತ ಹಾಕುತ್ತಾರೆ ಎನ್ನುವ ನಂಬಿಕೆಯಲ್ಲಿದ್ದಾರೆ‌. ಭಾರತ ದೇಶದಲ್ಲಿ ಒಂದು ಮನೆಯಲ್ಲಿ ಕನಿಷ್ಟ ಮೂರರಿಂದ ಐದಿ ಜನ ಮಹಿಳೆಯರಿದ್ದಾರೆ. ಈಗ ಗೃಹ ಲಕ್ಷ್ಮೀ ಹಣ ಕೊಟ್ಟಿದ್ದು ಒಬ್ಬರಿಗೆ ಉಳಿದವರಿಗೆ ಕೊಡದೇ ಮನೆಯಲ್ಲಿ ಜಗಳ ಹಚ್ಚಿದ್ದಾರೆ. ಮನೆ ಒಡೆದಿದ್ದಾರೆ. ಬಸ್ ನಲ್ಲಿ ಜಡಿ ಹಿಡಿದು ಹೊಡೆದಾಡಲು ಸಿದ್ದರಾಮಯ್ಯ ಅವರೇ ನೇರ ಕಾರಣ. ವಯಸ್ಸಾದವರು, ಆರೋಗ್ಯ ಸರಿ ಇಲ್ಲದವರಿಗೆ ಹತ್ತಲು ಅವಕಾಶ ಕೊಡುವುದಿಲ್ಲ ಎಷ್ಟೊ ಕಡೆ ಕಂಡಕ್ಟರ್ ಗೆ ಒಳಗೆ ಬಿಟ್ಟಿಲ್ಲ ಎಂದು ಹೇಳಿದರು.ಬಿಜೆಪಿಯಿಂದ ಮಹಿಳೆಯರಿಗೆ ನ್ಯಾಯ
ಮಹಿಳೆಯಿಮರಿಗೆ ಶೇ 33% ರಷ್ಟು ಮೀಸಲಾತಿ ಕೊಡಬೇಕೆಂದು ನಲವತ್ತು ವರ್ಷದಿಂದ ಹೇಳುತ್ತ ಬಂದಿದ್ದರು. ಸೋನಿಯಾ ಗಾಂಧಿ ಸಂಸತ್ತಿನಲ್ಲಿ ಮಾತನಾಡಿದ್ದರು ಅವರದೇ ಅಧಿಕಾರ ಇದ್ದರೂ ಮೀಸಲಾತಿ ಜಾರಿ ಮಾಡಲಿಲ್ಲ. ಒಬ್ಬ ವ್ಯಕ್ತಿ ಹೇಳಿದ ಕೆಲಸ ಮಾಡುವ ಛಲ್ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರಿಗೆ ಅನ್ಯಾಯ ಆಗುತ್ತಿದೆ ಅಂತ ತ್ರಿಪಲ್ ತಲಾಖ್ ರದ್ದು ಪಡಿಸಿದ್ದರು. ಯಾವುದೇ ಸಮಾಜ ಇರಲಿ ಮಹಿಳೆಯರಿಗೆ ಅನ್ಯಾಯ ಆಗಬಾರದು ಎಂದು ತೀರ್ಮಾನ ಮಾಡಿದ್ದಾರೆ. ಸಮಾಜದಲ್ಲಿ ಮಹಿಳೆಯರಿಗೆ ಗೌರವ ಸುರಕ್ಷತೆ ಇರಬೇಕು ಎಂದು ಮಾಡಿದರು. ಮಹಿಳೆಯರಿಗೆ ಸಂಜಿವಿನಿ ಯೋಜನೆ ಜಾರಿ ಮಾಡಿದರು. ನಾನು ಸಿಎಂ ಇದ್ದಾಗ ಸ್ತ್ರೀ ಸಾಮರ್ಥ್ಯ ಯೋಜನೆ ಮಾಡಿ ಪ್ರತಿ ಮಹಿಳಾ ಸಂಘಕ್ಕೆ 5 ಲಕ್ಷ ರೂ. ಕೊಡುತ್ತಿದ್ದೆ. ಬದ್ದತೆಯಿಂದ ಮಾಡಿರುವುದು ಬಿಜೆಪಿ ಮೋದಿ ಸರ್ಕಾರ ಎಂದು ಹೇಳಿದರು

ಮನೆ ಒಡೆಯುವ ಕೆಲಸ
ಮಹಿಳೆಯರಿಗೆ ಮನೆ ಒಡೆಯುವ ಕೆಲಸ ಮಾಡಿರುವ ಸಿದ್ದರಾಮಯ್ಯ ಗೆ ಮತ ಹಾಕದಂತೆ ಮಹಿಳೆಯರು ಸ್ಪಷ್ಟವಾಗಿ ಹೇಳಬೇಕು. ಏಪ್ರಿಲ್ 16, 17, 18 ರಂದು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಚರ್ಚೆಯಾಗುತ್ತದೆ. ನಾವು ಅಲ್ಲಿ ಕೈ ಎತ್ತಿದಾಗ ಜಾರಿಗೆ ಬರುತ್ತದೆ. ಸುಮಾರು 80 ಜನರು ಮಹಿಳೆಯರು ವಿಧಾನಸಭೆಗೆ ಬರುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಮಹಿಳೆ ಯರು ಸುರಕ್ಣಿತವಾಗಿಲ್ಲ ಎನ್ನುವುದನ್ನು ಟಿವಿಯಲ್ಲಿ ಪ್ರತಿದಿನ ದೌರ್ಜನ್ಯ, ಅತ್ಯಾಚಾರ ಮಹಿಳೆಯರ ವಿಚಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಇಲಾಖೆ ಸರ್ಕಸರವೇ ಇಲ್ಲ. ನೇಹಾ ಹಿರೇಮಠ್ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ನಡೆದಿದೆ. ಪ್ರತಿ ಊರಿನಲ್ಲಿಯೂ ಇದು ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಮಹಿಳೆಯರು ಸುರಕ್ಣಿತ ಇಲ್ಲವೋ ಅದು ಒಂದು ರಾಜ್ಯ, ವ್ಯವಸ್ಥೆ ಅಂತ ಕರೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ದಲ್ಲಿ ಮಹಿಳೆಯರನ್ನು ಸುರಕ್ಷಿತವಾಗಿ ಇಡಲು ಆಗದವರು ಅಯೋಗ್ಯರು. ಇಂತಹ ಸರ್ಕಾರ ಇದೆ. ಯಾವುದಾದರು ಮಹಿಳೆ ಸಂಜೆ ಆಗುವುದರೊಳಗೆ ಮನೆ ಸೇರಬೇಕು. ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ. ಎಲ್ಲಾ ತಾಯಂದಿರು ಬಯ ಮುಕ್ತವಾಗಿ ಬದುಕಬೇಕೆಂದರೆ ಸರ್ಕಾರವನ್ನು ಆದಷ್ಡು ಬೇಗ ಕಿತ್ತೊಗೆಯಬೇಕಿದೆ. ದಿನನಿತ್ಯ ಪ್ರಕರಣಗಳು ನಡೆಯುತ್ತಿವೆ. ಈ ಸರ್ಕಾರ ಕಿತ್ತೊಗೆಯುವ ಸೌಭಾಗ್ಯ ಬಾಗಲಕೋಟೆ ಜನರಿಗೆ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಆರಿಸಿ ತಂದರೆ ಸಿದ್ದರಾಮಯ್ಯ ಸರ್ಕಾರದ ಕೌಂಟ್ ಡೌನ್ ಶುರುವಾಗುತ್ತದೆ. ಈ ಬಾರಿ ಬಾಗಲಕೋಟೆಯಲ್ಲಿ ಕಮಲ ಅರಳುತ್ತದೆ. ಸಿದ್ದರಾಮಯ್ಯ ಸರ್ಕಾರದ ಕೌಂಟ್ ಡೌನ್ ಶುರುವಾಗುತ್ತದೆ‌. ಇನ್ನು ನಾಲ್ಕು ದಿನ ಹಲಗು ರಾತ್ರಿ ಓಡಾಡಬೇಕು. ಮಹಿಳೆಯರು ನಾಲ್ಕು ದಿನ ಧಾರಾವಾಹಿ ನೋಡುವುದನ್ನು ಬಿಡಿ ಮನೆ ಮನೆಗೆ ಹೋಗಿ ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ, ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ, ಜಿಲ್ಲಾಧ್ಯಕ್ಷರಾದ ಶಾಂತಗೌಡ ಪಾಟೀಲ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀ ಮತಿ ಮಂಜುಳಾ, ಶ್ರೀಮತಿ ಸುಮೇಧಾ ಮಾನೆ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img