ಆನ್ಲೈನ್ ಗೇಮಿಂಗ್ ನಿಷೇಧಕ್ಕೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದ ಕಾನೂನು ಎತ್ತಿ ಹಿಡಿದಿರುವ ಸುಪ್ರೀಂ ಕೊರ್ಟ್
ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ ಸಂಸದ ಬಸವರಾಜ ಬೊಮ್ಮಾಯಿ
ಬೆಂಗಳೂರು:ನನ್ನ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಆನ್ಲೈನ್ ಗೇಮಿಂಗ್ ನಿಷೇಧಿಸುವ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಆನ್ಲೈನ್ ಗೇಮಿಂಗ್ ತಡೆಯುವ ನಮ್ಮ ಉದ್ದೇಶಕ್ಕೆ ಜಯ ಸಿಕ್ಕಂತಾಗಿದ್ದು, ಸುಪ್ರೀಂ ಕೊರ್ಟ್ನ ಈ ಆದೇಶವನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತು ಆರ್. ಮಹದೇವನ್ ಅವರ ಡಬಲ್ ಬೆಂಚ್ ನನ್ನ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸರ್ಕಾರ ಆನ್ಲೈನ್ ಗ್ಯಾಂಬ್ಲಿಂಗ್ ವಿರುದ್ಧ ತಂದಿರುವ ಕಾನೂನನ್ನು ಎತ್ತಿ ಹಿಡಿದಿದ್ದಾರೆ. ನನ್ನ ಸರ್ಕಾರ ಇದ್ದಾಗ ಕರ್ನಾಟಕ ಪೊಲಿಸ್ ಅಮೆಂಡ್ಮೆಂಟ್ ಆಕ್ಟ್ 2021 ತಂದಿದ್ದು, ಅದರಲ್ಲಿ ಕನಾಟಕ ಪೊಲಿಸ್ ಆಕ್ಟ್ 1963ಗೆ ಹಲವಾರು ಬದಲಾವಣೆ ತಂದು ಗ್ಯಾಂಬ್ಲಿಂಗ್ ವ್ಯಾಖ್ಯಾನ ವಿಸ್ತರಣೆ ಮಾಡಿ ಆನ್ಲೈನ್ ಗೇಮಿಂಗ್ನ್ನು ಜಾಮೀನು ರಹಿತ ಅಪರಾಧ ಅಂತ ಕಾನೂನು ತಿದ್ದುಪಡಿ ತಂದು ಆನ್ಲೈನ್ಗೆ ಸಂಪೂರ್ಣ ಕಡಿವಾಣ ಹಾಕಲು ಕಾನೂನು ತಂದಿದ್ದೇವು. ಅದಕ್ಕೆ ಹೈಕೋರ್ಟ್ ತಡೆ ನೀಡಿತ್ತು ಅದರ ವಿರುದ್ಧ ನಾವು ಸುಪ್ರೀಂ ಕೊರ್ಟ್ಗೆ ಹೋಗಿದ್ದೇವು. ಈಗ ಸುಪೀಂ ಕೋರ್ಟ್ ನಮ್ಮ ಕಾನೂನು ಮತ್ತು ತಮಿಳುನಾಡಿನ ಕಾನೂನು ಎತ್ತಿ ಹಿಡಿಯುವ ಮೂಲಕ ಆನ್ಲೈನ್ ಗೇಮಿನಿಂದ ಹಲವಾರು ಜನರು ಮತ್ತು ಬಡವರು ಆರ್ಥಿಕವಾಗಿ ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶಕ್ಕೆ ಜಯಸಿಕ್ಕಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತ ಮಾಡುತ್ತೇನೆ. ಈಗಿರುವ ಕರ್ನಾಟಕ ಸರ್ಕಾರ ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಆನ್ಲೈನ್ ಗೆಮಿಂಗ್ ತಡೆಗಟ್ಟಿ ಹಲವಾರು ಸಂಸಾರಗಳು ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.



