Monday, August 10, 2026
20.5 C
Belagavi

ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಹಿಂದೆ ಸಂತೋಷ್ ಲಾಡ್ ಮ್ಯಾಜಿಕ್

advertisement

spot_img

ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಹಿಂದೆ ಸಂತೋಷ್ ಲಾಡ್ ಮ್ಯಾಜಿಕ್

ಎರಡೂ ಕ್ಷೇತ್ರಗಳ‌ ಮರಾಠಾ ಹಾಗೂ ಅಹಿಂದ ಮತಗಳನ್ನು ಸೆಳೆಯುವಲ್ಲಿ ಸಂತೋಷ್ ಲಾಡ್ ಮಹತ್ವದ ಪಾತ್ರ

ದೂರದ ತಮಿಳುನಾಡು ಚುನಾವಣೆಯಲ್ಲೂ ಲಾಡ್ ಕಮಾಲ್

ಕೊಲಾಚೆಲ್ ಕ್ಷೇತ್ರಕ್ಕೆ ವೀಕ್ಷಕರಾಗಿದ್ದ ಸಂತೋಷ್ ಲಾಡ್

ಪಕ್ಷ ವಹಿಸೋ ಎಲ್ಲ ಜವಾಬ್ದಾರಿಗಳಿಗೂ ಸಂತೋಷ್ ಲಾಡ್ ರೆಡಿ ಟು ಗೋ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆಯೊಂದಿಗೆ ಕಳೆದ ಮೂರ್ನಾಲ್ಕು ತಿಂಗಳ ಅವಿರತ ರಾಜಕೀಯ ಚಟುವಟಿಕೆಗಳು ತಣ್ಣಗಾಗಿವೆ. ಕರ್ನಾಟಕದಲ್ಲೂ ಭಾರಿ ಹವಾ ಸೃಷ್ಟಿಸಿದ್ದ ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗಳು ಕಾಂಗ್ರೆಸ್‌ ಪಕ್ಷಕ್ಕೆ ಬಂಪರ್ ಗಿಫ್ಟ್ ಗಳಾಗಿ ಒಲಿದಿವೆ.

ಮೇಲ್ನೋಟಕ್ಕೆ ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಗಳ ಗೆಲುವು ಸರಳವೆನಿಸಿದ್ದರೂ, ಕೊಂಚ ಆಯ ತಪ್ಪಿದ್ದರೂ ಎರಡೂ ಕಡೆ ಕಾಂಗ್ರೆಸ್‌ ಪಕ್ಷ ಮುಗುಚಿ ಬೀಳುವುದರಲ್ಲಿತ್ತು. ಈ ಹಂತದಲ್ಲೇ ನಿರ್ಣಾಯಕ ಮತಗಳನ್ನು ಪಕ್ಷಕ್ಕೆ ತಂದುಕೊಡುವಲ್ಲಿ ಕಾಂಗ್ರೆಸ್‌ ನ ಹಲವು ನಾಯಕರು ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ‌.

ಅಂತಹ ನಾಯಕರ ಪೈಕಿ ಕಾರ್ಮಿಕ ಸಚಿವ ಹಾಗೂ ಕರ್ನಾಟಕ ಮರಾಠಾ ಹಾಗೂ ಅಹಿಂದ ವರ್ಗಗಳ ಭರವಸೆಯ ಲೀಡರ್ ಸಂತೋಷ್ ಲಾಡ್ ಪಾತ್ರ ತುಂಬಾ ಪ್ರಮುಖವಾಗಿತ್ತು.ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಅನುಕಂಪದ ಅಲೆ ಇದ್ರೂ ಕೂಡ ವೀರಣ್ಣ ಚರಂತಿಮಠರಂತಹ ಪಳಗಿದ ಹುಲಿಯ ಮುಂದೆ ಸೆಣಸುವುದು ಉಮೇಶ್ ಮೇಟಿಯಂತಹ ಹೊಸಬರಿಗೆ ಹಗುರವಾಗಿರಲಿಲ್ಲ. ಈ ಕ್ಷೇತ್ರದಲ್ಲಿ ಉಮೇಶ್ ಮೇಟಿ ತಂದೆಯವರಾದ ದಿವಂಗತ ಹೆಚ್ ವೈ ಮೇಟಿಯವರೇ ತ್ರಾಸದಾಯಕವಾಗಿ ಗೆದ್ದಿದ್ದರು. ಅಂತದ್ರಲ್ಲಿ ಏನೂ ಅನುಭವವಿರದ ಉಮೇಶ್ ಮೇಟಿಯವರನ್ನ ಗೆಲ್ಲಿಸಿಕೊಂಡು ಬರೋದು ತುಂಬ ಸವಾಲಿನ ಕೆಲಸವಾಗಿತ್ತು. ಬಾಗಲಕೋಟೆಯಲ್ಲಿ ಮರಾಠಾ ಹಾಗೂ ಅಹಿಂದ ಮತಗಳು ತುಂಬ ನಿರ್ಣಾಯಕ ಪಾತ್ರ ವಹಿಸುತ್ತವೆ. ಲಿಂಗಾಯಿತ ಬೆಲ್ಟ್ ಮತಗಳನ್ನು ಸೆಳೆಯೋಕೆ ಬೇರೆಯದೇ ಟೀಮ್ ಕೆಲಸ ಮಾಡುತ್ತಿತ್ತು. ಆದ್ರೆ ಒಮ್ಮೊಮ್ಮೆ ಚದುರಿಬಿಡಬಲ್ಲ ಮರಾಠಾ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಹಿಡಿದಿಡೋಕೆ ಚತುರ ಸಂಘಟಕರೇ ಬೇಕು ಅನ್ನೋದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೆ ಗೊತ್ತಿಲ್ಲದ್ದೇನಲ್ಲ. ಹೀಗಾಗಿಯೇ ಅವರು ಸಂತೋಷ್ ಲಾಡ್ ಅವರಿಗೆ ಕರೆದು ಜವಾಬ್ದಾರಿ ಕೊಟ್ಟಿದ್ದರು. ಪಕ್ಷ ವಹಿಸಿದ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿರ್ವಹಿಸಿದ ಸಂತೋಷ್ ಲಾಡ್, ಬಾಗಲಕೋಟೆಯ ಸುಡುವ ಬಿಸಿಲಿನ ನಡುವೆಯೂ ಮನೆ ಮನೆಗಳಿಗೆ ತೆರಳಿ, ಹಲವು ಸಭೆಗಳನ್ನು ಮಾಡಿ, ಮುಖ್ಯಮಂತ್ರಿಗಳ ಪ್ರಚಾರ ಸಭೆಗಳ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ಪಕ್ಷದ ಅಭ್ಯರ್ಥಿಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಅದರಲ್ಲೂ ಮರಾಠಾ ಸಮುದಾಯದ ಮತಗಳನ್ನು ಕಾಂಗ್ರೆಸ್‌ ಪಕ್ಷದ ಬುಟ್ಟಿಗೆ ತಂದು ಕೊಟ್ಟಿದ್ದರಲ್ಲಿ ಲಾಡ್ ಪಾತ್ರ ಮರೆಯುವಂತಿಲ್ಲ.

ಇನ್ನು ದಾವಣಗೆರೆ ಅತಿ ಹೆಚ್ಚು ಸದ್ದು ಮಾಡಿದ ಕ್ಷೇತ್ರ. ಇಲ್ಲಿಯೂ ಕೂಡ 3 ದಿನಗಳ ಕಾಲ ಅವಿರತ ಪ್ರಚಾರ ನಡೆಸಿ, ಗಣನೀಯ ಸಂಖ್ಯೆಯಲ್ಲಿರುವ ಮರಾಠ ಸಮುದಾಯಗಳ ಮತಗಳನ್ನು ಹಿಡಿದಿಟ್ಟುಕೊಂಡು, ಸ್ಥಳೀಯ ಬಿಜೆಪಿ ಮರಾಠಾ ನಾಯಕರ ಹಿಡಿತವನ್ನು ತಪ್ಪಿಸಿ, ಕಾಂಗ್ರೆಸ್‌ ಗೆ ಮತಗಳನ್ನು ಸೆಳೆದಿದ್ದು ಕಡಿಮೆ ಸಾಧನೆಯೇನಲ್ಲ. ಹಾಗೆಯೇ ತಮ್ಮ ಯಂಗ್ & ಎನರ್ಜೆಟಿಕ್, ಫ್ರೆಂಡ್ಲಿ ವ್ಯಕ್ತಿತ್ವದ ಮೂಲಕ ಸಿಟ್ಟಾಗಿದ್ದ ಮುಸ್ಲೀಂ ಸಮುದಾಯದ ಯುವ ಮತದಾರರನ್ನು ಸಮಾಧಾನಪಡಿಸಿದ್ದು, ಅಹಿಂದ ವರ್ಗಗಳ ಮತಗಳು ಬಿಜೆಪಿಗೆ ಹೋಗದಂತೆ ತಡೆದು ಪಕ್ಷಕ್ಕೆ ಲಾಭ ಮಾಡಿಕೊಟ್ಟಿದ್ದು ಸಂತೋಷ್ ಲಾಡ್ ತಾಕತ್ತನ್ನು ತೋರಿಸುತ್ತದೆ.

ದಾವಣಗೆರೆಯಲ್ಲಿ ಸಂತೋಷ್ ಲಾಡ್ ನಡೆಸಿದ ರೋಡ್ ಶೋ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಬೃಹತ್ ಸಭೆಗಳು ಹೆಚ್ಚಿನ ಮತಗಳು ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ ಪರವಾಗಿ ಬೀಳುವುದಕ್ಕೆ ಸಹಕಾರಿ ಆದವು.

ಇನ್ನು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಕೊಲಾಚೆಲ್ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಸಂತೋಷ್ ಲಾಡ್ ಮಾಡಿದ ಕೆಲಸವನ್ನು ಯಾರೂ ಮರೆಯುವಂತಿಲ್ಲ. ಕೊಲಾಚೆಲ್ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ತಾರಾಹೈ ಕುತ್ ಬರ್ಟ್ ಅವರ ಗೆಲುವಿಗಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಅಲ್ಲಿನ ಸ್ಥಳೀಯ ಮುಖಂಡರು, ನಾಯಕರು, ಟಿಕೆಟ್ ವಂಚಿತರನ್ನೆಲ್ಲ ಒಟ್ಟಾಗಿಸಿ ಪಕ್ಷದ ಗೆಲುವಿಗೆ ಸಹಕಾರಿಯಾಗುವಂತೆ ನೋಡಿಕೊಂಡರು. ಇನ್ನು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಭಾಗವಹಿಸಿದ್ದ ಬೃಹತ್ ಪ್ರಚಾರ ಸಭೆಯ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಸಂತೋಷ್ ಲಾಡ್ ಹೆಚ್ಚುಗಾರಿಕೆ. ಕಾಂಗ್ರೆಸ್, ಟಿವಿಕೆ ಹಾಗೂ ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಇದ್ದ ಈ ಕೊಲಾಚೆಲ್ ಕ್ಷೇತ್ರದಲ್ಲಿ ಕೊನೆಯವರೆಗೂ ಹಾವು ಏಣಿ ಆಟವೇ ನಡೆದು ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದನ್ನು ನೋಡಿದರೆ ಇಲ್ಲಿ ಒಂದೊಂದು ಮತವೂ ಎಷ್ಟೊಂದು ನಿರ್ಣಾಯಕವಾಗಿತ್ತು ಅನ್ನೋದರ ಅರಿವಾಗುತ್ತದೆ.

ಹೀಗೆ, ಸಂತೋಷ್ ಲಾಡ್ ಪಕ್ಷದ ಶಿಸ್ತಿನ ಕಟ್ಟಾಳುವಾಗಿ, ನಿಷ್ಟಾವಂತ ಕಾರ್ಯಕರ್ತನಾಗಿ ಹಾಗೂ ಜನರನ್ನು ಸೆಳೆದು ಮತಗಳನ್ನಾಗಿಸುವ ಸಾಮರ್ಥ್ಯ ಇರುವ ನಾಯಕರಾಗಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿರೋದು, ಹಲವಾರು ಹೊಸ ತಲೆಮಾರಿನ ಯುವ ನಾಯಕರಿಗೆ ಯಾವತ್ತಿಗೂ ಮಾದರಿಯಾಗಲಿದೆ.

Hot this week

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

Topics

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ ರಾಮದುರ್ಗ: ಕಿತ್ತೂರು ರಾಣಿ ಚನ್ನಮ್ಮ...

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ ಬೊಮ್ಮಾಯಿ

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ...

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ - 1,500 ಉದ್ಯೋಗ...
spot_img

Related Articles

Popular Categories

spot_img