ಬಾಂಗ್ಲಾವಲಸಿಗರ ದಾಖಲೆ ಪರಿಶೀಲನೆ ಪ್ರಕರಣ – ಪುನೀತ್ ಕೆರೆಹಳ್ಳಿಗೆ ಆನೇಕಲ್ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು!
ಅಕ್ರಮ ಬಾಂಗ್ಲಾವಲಸಿಗರ ನಿಂದನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಪುನೀತ್ ಕೆರೆಹಳ್ಳಿ ಮತ್ತು ಬೆಂಬಲಿಗರಿಗೆ ಆನೇಕಲ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಆನೇಕಲ್‌ನ 3ನೇ ಹೆಚ್ಚುವರಿ ಕಿರಿಯ ವಿಭಾಗದ ಸಿವಿಲ್ ಕೋರ್ಟ್, ಆರೋಪಿಗಳಿಗೆ ಜಾಮೀನು ನೀಡಲು ಒಪ್ಪಿಗೆ ಸೂಚಿಸಿದೆ. ತಲಾ 10 ಸಾವಿರ ರೂಪಾಯಿ ನಗದು ಶೂರಿಟಿ ಹಾಗೂ ವೈಯಕ್ತಿಕ ಬಾಂಡ್ ಒದಗಿಸುವಂತೆ ಸೂಚಿಸಲಾಗಿದೆ. ನ್ಯಾಯಾಲಯವು ವಿಧಿಸಿರುವ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಮುಂದಿನ ತನಿಖೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಆನೇಕಲ್‌ನಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾವಲಸಿಗರ ದಾಖಲೆ ಪರಿಶೀಲನೆ ವೇಳೆ ನಿಂದಿಸಿದ ಆರೋಪ ಪುನೀತ್ ಕೆರೆಹಳ್ಳಿ ಮತ್ತು ತಂಡದ ಮೇಲಿತ್ತು. ಈ ಸಂಬಂಧ ದಾಖಲಾದ ದೂರಿನ ಅನ್ವಯ ಪೊಲೀಸರು ಇವರನ್ನು ಬಂಧಿಸಿದ್ದರು. ಜಾಮೀನಿನಿಂದಾಗಿ ಪುನೀತ್ ಕೆರೆಹಳ್ಳಿ ತಂಡಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆದರೆ, ತನಿಖೆ ಮುಂದುವರಿಯಲಿದ್ದು, ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸುವಂತೆ ಕೋರ್ಟ್ ಸೂಚಿಸಿದೆ. ಈ ಆದೇಶ ಬೆಂಬಲಿಗರಲ್ಲಿ ಸಮಾಧಾನ ತಂದಿದೆ.



