ರಾಮದುರ್ಗ ಪೊಲೀಸ್ ಠಾಣಾ ಆವರಣದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ಏರ್ಪಡಿಸಲಾಗಿತ್ತು ಈ ಸಭೆಯ ಅಧ್ಯಕ್ಷತೆಯನ್ನು ರಾಮದುರ್ಗ ಉಪವಿಭಾಗದ ಡಿವೈಎಸ್ಪಿ ಚಿದಂಬರ್ ಮಡಿವಾಳರ ಅವರು ವಹಿಸಿಕೊಂಡಿದ್ದರು ಸಿಪಿಐ ವಿನಾಯಕ ಬಡಿಗೇರ್ ಪಿಎಸ್ಐ ಸವಿತಾ ಮುನ್ಯಾಳ ವೇದಿಕೆಯನ್ನು ಹಂಚಿಕೊಂಡಿದ್ದರು. ಡಿವೈಎಸ್ಪಿ ಚಿದಂಬರ್ ಮಡಿವಾಳರ ಮಾತನಾಡಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಆಚರಣೆ ಸಂಸ್ಕೃತಿ ವಿಶೇಷತೆ ಇರುತ್ತದೆ
ಆದ್ದರಿಂದ ಹಬ್ಬಗಳನ್ನು ಆಚರಿಸುವ ಸಮಯದಲ್ಲಿ ಕೋಮು ಭಾವನೆಗೆ ಧಕ್ಕೆ ಆಗದಂತೆ ಸಾರ್ವಜನಿಕರು ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಿಪಿಐ ವಿನಾಯಕ ಬಡಿಗೇರ ಮಾತನಾಡಿ ಮೊಹರಂ ಆಚರಿಸುವ ಎಲ್ಲಾ ಕಮಿಟಿಯ ಸದಸ್ಯರುಗಳು ಅರ್ಜಿ ಸಲ್ಲಿಸಿ ಪೋಲಿಸ್ ಇಲಾಖೆಗೆ ಸೂಕ್ತ ಮಾಹಿತಿ ನೀಡಬೇಕು ನಾವು ಬಂದುಬಸ್ತೆಯನ್ನು ಒದಗಿಸುತ್ತೇವೆ ಎಂದು ತಿಳಿಸಿದರು ಎಸ್ ಐ ಸವಿತಾ ಮುನ್ಯಾಳ ಮಾತನಾಡಿ ರಾಮದುರ್ಗ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸುಮಾರು 134 ಸ್ಥಳಗಳಲ್ಲಿ ದೇವರನ್ನ ಸ್ಥಾಪಿಸಿ ಮೊಹರಂ ಆಚರಿಸಲಾಗುತ್ತದೆ ಸರ್ವ ಸಮುದಾಯದವರು ಶಾಂತಿಯಿಂದ ಹಬ್ಬ ಆಚರಿಸುವಂತೆ ತಿಳಿಸಿದರು. ಈ ಶಾಂತಿ ಸಭೆಯಲ್ಲಿ ರಾಮದುರ್ಗ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿಂದೂ ಮುಸ್ಲಿಂ ಬಾಂಧವರು ಯುವಕರು ಉಪಸ್ಥಿತರಿದ್ದರು
Trending Now



