ವಿದ್ಯಾರ್ಥಿಗಳು ಜ್ಞಾನ ಪಡೆದುಕೊಂಡರೆ ಜಗತ್ತು ಆಳಬಹುದು: ಬಸವರಾಜ ಬೊಮ್ಮಾಯಿ
ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಹೆಚ್ಚಿನ ಗೌರವ ಇದೆ: ಬಸವರಾಜ ಬೊಮ್ಮಾಯಿ
ಹಾವೇರಿ: 21 ನೇ ಶತಮಾನ ಜ್ಞಾನದ ಶತಮಾನ ವಿದ್ಯಾರ್ಥಿಗಳು ಜ್ಞಾನ ಪಡೆದುಕೊಂಡರೆ ಜಗತ್ತು ಆಳಬಹುದು ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಹೆಚ್ಚಿನ ಗೌರವ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಡಿ.ಎಂ. ಸಾಲಿಯವರು ಹೋರಾಟಗಾರರು ಯಾವಾಗಲು ಸಾಮಾಜಿಕ ಹಿತ ಚಿಂತನೆಯಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡುವ ನಾಯಕ ಅವರ ಪ್ರಯತ್ನದಿಂದ ಪ್ರಿಯದರ್ಶಿನಿ ಸಂಸ್ಥೆ ನಡೆಯುತ್ತಿದೆ. ನಿಮಗೆಲ್ಲರಿಗೂ ಅಭಿನಂದನೆ
ಗ್ರಾಮಿಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭವಲ್ಲ ಆದರೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಸಾಲಿಯವರು ಮಾಡಿತ್ತಿದ್ದಾರೆ. ಸಮಗ್ರ ಶಿಕ್ಷಣ ಅಂದರೆ ಆಟ ಪಾಠ ಕಲೆ, ಸಂಸ್ಕೃತಿ ಮತ್ತು ನಿಮ್ಮ ಭವಿಷ್ಯ ನಿರ್ಮಿಸುವ ಕೆಲಸ ಮಾಡುತ್ತಾರೆ ಎಂದರು.
ಜೀವನದಲ್ಲಿ ಒಮ್ಮೆ ವಿದ್ಯಾರ್ಥಿ ಆದರೆ ಕೊನೆಯವರೆಗೂ ವಿದ್ಯಾರ್ಥಿ ಶಾಲಾ ಕಾಲೆಜುಗಳಲ್ಲಿ ಪಠ್ಯವಿರುತ್ತದೆ. ಮೊದಲು ಪಾಠ ಇರುತ್ತದೆ. ಆ ಮೇಲೆ ಪರೀಕ್ಷೆ ಇರುತ್ತದೆ. ಬದುಕಿನಲ್ಲಿ ಮೊದಲು ಪರೀಕ್ಷೆ ನಂತರ ಪಾಠ, ಪ್ರತಿದಿನ ಪರೀಕ್ಷೆ ಇರುತ್ತದೆ. ಇಲ್ಲಿ ಗುರುಗಳು ಪಾಠ ಹೇಳಿತ್ತಾರೆ. ಜೀವನದಲ್ಲಿ ನಮಗೆ ಅನುಭವ ಪಾಠ ಹೇಳುತ್ತದೆ. ನಿರಂತರ ಕಲಿಯುವ ಪ್ರಯತ್ನ ಮಾಡಬೇಕು ಎಂದರು.
ಒಂದು ಕಾಲದಲ್ಲಿ ಅತಿ ಹೆಚ್ಚು ಭೂಮಿ ಇರುವವರು ಜಗತ್ತು ಅಳಿದರು. ನಂತರ ದುಡ್ಡಿದ್ದವರು ಆಳಿದರು. ಈಗ ಜ್ಣಾನ ಇರುವವರು ಜಗತ್ತು ಅಳುತ್ತಿದ್ದಾರೆ. ಮೊದಲು ವಿದೇಶಿ ಪ್ರಧಾನಿಗಳು ದೆಹಲಿಗೆ ಬರುತ್ತಿದ್ದರು, ಈಗ ಬೆಂಗಳೂರಿಗೆ ಬರುತ್ತಾರೆ. ಯಾಕೆಂದತೆ ಅಲ್ಲಿ ಜ್ಣಾನ ಇದೆ. ನೀವು ಜ್ಞಾನ ಪಡೆದುಕೊಂಡರೆ ಜಗತ್ತು ಆಳಬಹುದು. ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಗೌರವ ಇದೆ. ತಾಯಂದಿರು ವಿದ್ಯಾವಂತರಾದರೆ ಅಂತ ಊರು ದೇಶ ವಿದ್ಯಾವಂತ ಆಗುತ್ತದೆ ಅಂತಹ ಕೆಲಸವನ್ನು ಪ್ರಿಯದರ್ಶಿನಿ ವಿದ್ಯಾ ಸಂಸ್ಥೆ ಮಾಡುತ್ತಿದೆ. ಈ ಸಂಸ್ಥೆ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಂ ಸಾಲಿ ಸೇರಿದಂತೆ ಹಲವಾರು ಪ್ರಮುಖರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



