ಕರ್ನಾಟಕ ರಕ್ಷಣಾ ವೇದಿಕೆ ರಾಮದುರ್ಗ ತಾಲೂಕಾ ಘಟಕದಿಂದ ಪ್ರತಿಭಟನೆ ಮಾಡುವ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಲೂಕ ದಂಡಾಧಿಕಾರಿಗಳ ಮುಖಾಂತರ ಮನವಿ. ಕನ್ನಡ, ನಾಡು, ನುಡಿ, ನೆಲ, ಜಲ, ವಿಷಯದಲ್ಲಿ ಪದೇ ಪದೇ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿರುವ ಎಮ್ ಇ ಎಸ್ ನ ಗುಂಡಾ ರೌಡಿ ಶುಭಂ ವಿಕ್ರಾಂತ ಶೇಳಕೆ ಇತನು ಬೆಳಗಾವಿಯಲ್ಲಿ ಇತನ ಕುಮ್ಮಕ್ಕಿನಿಂದ ಪದೇ ಪದೇ ಎಮ್ ಇ ಎಸ್ ನ ನಾಲಾಯಕು
ಕನ್ನಡ ನಾಡು ನುಡಿ ವಿಚಾರದಲ್ಲಿ ಹಾಗೂ ಕನ್ನಡ ಹೋರಾಟಗಾರರ ವಿಚರದಲ್ಲಿ ಪ್ರಚೋದನೆ ಹೇಳಿಕೆ ನೀಡಿಕೊಂಡು ಕನ್ನಡ ಮತ್ತು ಮರಾಠಿ ಜನರಲ್ಲಿ ದ್ವೇಷದ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಎಮ್ ಇ ಎಸ್ ನ ಪುಂಡ ಶುಭಂ ವಿಕ್ರಾಮತ ಶೇಳಕೆ ಇತನ ಮೇಲೆ ರೌಡಿ ಶೀಟರ ಕೇಸ ದಾಖಲು ಮಾಡಿ ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತವೆ ಇಲ್ಲವಾದರೆ ಇಡಿ ರಾಜ್ಯದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕ ಅಧ್ಯಕ್ಷ ವಿಜಯಕುಮಾರ ರಾಠೊಡ ಉಪಾಧ್ಯಕ್ಷ ಗಣೇಶ್ ದೊಡ್ಡಮನಿ ಗೌರವಾಧ್ಯಕ್ಷ ಜಹೂರ್ ಹಾಜಿ ಪ್ರಧಾನ ಕಾರ್ಯದರ್ಶಿ ಆನಂದ ಜಾದವ ಮಹಿಳಾ ಘಟಕದ ಅಧ್ಯಕ್ಷ ರೂಪ ಅರಮನಿ ಗಾಯತ್ರಿ ದೇವಿ ದೇವಾಂಗ ಮಠ ದೀಪಾ ತಿಳಗಂಜಿ. ಪದಾಧಿಕಾರಿಗಳಾದ ಹನುಮಂತ ಕುಲಗೋಡ ಕೃಷ್ಣ ರಾಥೋಡ್ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು .




