Wednesday, July 15, 2026
21.2 C
Belagavi

ತೀರ್ಥಹಳ್ಳಿಯ ಗುಮ್ಮನಮಕ್ಕಿಯಲ್ಲಿ ಐದೂರು ದೇವತೆಗಳ ಭವ್ಯ ಸಮಾಗಮ

advertisement

spot_img

ತೀರ್ಥಹಳ್ಳಿ:ತೀರ್ಥಹಳ್ಳಿ ತಾಲೂಕಿನ ಗುಮ್ಮನಮಕ್ಕಿ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ಈ ಭಾಗದ ಪ್ರಸಿದ್ಧ ಐದೂರು ದೇವತೆಗಳ ಸಮಾಗಮಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು ಪುನೀತರಾದರು.ಮಾಳೂರು ಗಾಳಿಮಾರಮ್ಮ, ಸಮಕಾನಿ ದುರ್ಗಾಪರಮೇಶ್ವರಿ, ಆಲಬಳ್ಳಿ ಚಾಮುಂಡೇಶ್ವರಿ, ಗುತ್ತಿ ಎಡೇಹಳ್ಳಿ ಗುತ್ಯಮ್ಮ ಹಾಗೂ ಸೋಮವಾರಸಂತೆ ದುರ್ಗಾಪರಮೇಶ್ವರಿ ಅಮ್ಮನವರು ಮತ್ತು ಕುಮಾರಸ್ವಾಮಿ ದೇವರುಗಳ ಪಲ್ಲಕ್ಕಿಗಳು ವಾಲಗ, ವಾದ್ಯ ಹಾಗೂ ಡೋಲುಗಳ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಸಮಾಗಮಗೊಂಡ ದೃಶ್ಯ ಭಕ್ತರ ಗಮನ ಸೆಳೆಯಿತು. ವಿವಿಧ ಸೀಮೆಗಳಲ್ಲಿ ನೆಲೆಸಿರುವ ಈ ದೇವಿಯರು ವರ್ಷಕ್ಕೊಮ್ಮೆ ತಮ್ಮ ತವರು ಮನೆಯಂತಿರುವ ಗುಮ್ಮನಮಕ್ಕಿಯಲ್ಲಿ ಒಟ್ಟಿಗೆ ಸೇರಿ, ಭಕ್ತರ ಇಷ್ಟಾರ್ಥಗಳನ್ನು ಪೂರೈಸಿ ಮರಳಿ ತಮ್ಮ ಸೀಮೆಗಳಿಗೆ ತೆರಳುತ್ತಾರೆ ಎಂಬುದು ಇಲ್ಲಿನ ವಿಶೇಷ ನಂಬಿಕೆಯಾಗಿದೆ.

ಜಾತ್ರೆಯ ಅಂಗವಾಗಿ ಮೈದಾನದಲ್ಲಿ ಆಟಿಕೆಗಳ ಮಳಿಗೆಗಳು ಹಾಗೂ ವಿವಿಧ ಖಾದ್ಯಗಳ ಸ್ಟಾಲ್‌ಗಳು ತುಂಬಿಕೊಂಡಿದ್ದವು . ಸಂಜೆ ವೇಳೆಗೆ ಹೆದ್ದೂರಿನಲ್ಲಿ ಹೊಸಹಳ್ಳಿ ಸೋಮವಾರ ಗುತ್ಯಮ್ಮ ದೇವಿಯ ಅದ್ದೂರಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ತೆಪ್ಪದಲ್ಲಿ ದೇವಿಯ ಮೆರವಣಿಗೆಯನ್ನು ಕೊರೆಯುವ ಚಳಿಯ ನಡುವೆಯೂ ನೂರಾರು ಭಕ್ತರು ಕಣ್ತುಂಬಿಕೊಂಡರು. ಇದೇ ಸಂದರ್ಭದಲ್ಲಿ ಸಮಕಾನಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವತಿಯಿಂದ ಬೆಜ್ಜವಳ್ಳಿಯ ಅಂತ್ರೊಳ್ಳಿ ಕೆರೆ ಬಳಿ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಿಡಿಮದ್ದು ಪ್ರದರ್ಶನ ಜನಮನ ಗೆದ್ದಿತು.

ಜಾತ್ರಾ ಸಮಿತಿಯ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅವಧೂತ ವಿನಯ್ ಗುರೂಜಿ ಅವರು ಆಗಮಿಸಿ ದರ್ಶನ ಪಡೆದದ್ದು ವಿಶೇಷವಾಗಿತ್ತು.

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img