Monday, June 1, 2026
26.1 C
Belagavi

ನಾಸಿಕ್ ಟಿಸಿಎಸ್‍ನಲ್ಲಿ ಸಂಘಟಿತ ಲವ್ ಜಿಹಾದ್ ಪ್ರಕರಣ ಕರ್ನಾಟಕದಲ್ಲಿ ಎಸ್‍ಐಟಿ ರಚಿಸಿ ತನಿಖೆ ಆಗಲಿ: ಸಿ.ಟಿ.ರವಿ

advertisement

spot_img

ನಾಸಿಕ್ ಟಿಸಿಎಸ್‍ನಲ್ಲಿ ಸಂಘಟಿತ ಲವ್ ಜಿಹಾದ್ ಪ್ರಕರಣ

ಕರ್ನಾಟಕದಲ್ಲಿ ಎಸ್‍ಐಟಿ ರಚಿಸಿ ತನಿಖೆ ಆಗಲಿ: ಸಿ.ಟಿ.ರವಿ

ಬೆಂಗಳೂರು: ಮಹಾರಾಷ್ಟ್ರದ ನಾಸಿಕ್‍ನ ಟಿಸಿಎಸ್‍ನಲ್ಲಿ ನಡೆದ ಸಂಘಟಿತ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದ ನಂತರ ಇಂತಹ ಸಂಘಟಿತ ಲವ್ ಜಿಹಾದ್ ಜಾಲ ಕರ್ನಾಟಕದ ಕಾಪೆರ್Çೀರೇಟ್ ಕಂಪನಿಗಳಲ್ಲೂ ವಿಸ್ತತರಿಸಿರುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲೂ ಒಂದು ಎಸ್‍ಐಟಿ ರಚಿಸಿ ತನಿಖೆಯಾಗಬೇಕು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಸಿಕ್ ಪ್ರಕರಣ ಬಹಳ ಗಂಭೀರವಾಗಿದ್ದು, ಕರ್ನಾಟಕದಲ್ಲೂ ಟಿಸಿಎಸ್ ರೀತಿಯ ಅನೇಕ ಬಹುರಾಷ್ಟ್ರೀಯ ಕಂಪೆನಿಗಳಿವೆ. ಉದ್ಯೋಗಕ್ಕಾಗಿ ಬರುವ ಅಸಹಾಯಕ ಹೆಣ್ಣು ಮಕ್ಕಳ ಶೋಷಣೆ, ಲವ್ ಜಿಹಾದ್‍ನಂತಹ ಮತಾಂತರದ ಜಾಲ ಇಲ್ಲೂ ಇರುವ ಸಾಧ್ಯತೆ ಇದೆ. ಆದ್ದರಿಂದ ಇವುಗಳ ಕುರಿತು ಸಮಗ್ರ ತನಿಖೆ ಆಗಬೇಕು ಎಂದರು.
ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‍ಐಟಿ ರಚಿಸಿ ಸಮಗ್ರ ತನಿಖೆ ಮಾಡಬೇಕು. ಆಗ ಸತ್ಯಾಸತ್ಯತೆ ಹೊರಬರಲಿದೆ. ಮತಾಂತರ ಮತ್ತು ಮತಾಂತರದ ನಂತರ ಇಡೀ ದೇಶವನ್ನೇ ದುರ್ಬಲಗೊಳಿಸುವ ಸಂಚು ತಿಳಿಯಲಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಪೂರ್ವಕ ಮನವಿ ಮಾಡಿದರು. ನಾಸಿಕ್ ಪೆÇಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ವಿಶೇಷ ಕಾರ್ಯಪಡೆ ಮಾಡಿ ಉದ್ಯೋಗಿಗಳಾಗಿ ಸೇರಿ ವ್ಯವವಸ್ಥಿತ ಜಾಲವನ್ನು ಬಯಲಿಗೆಳೆದರು. ಈ ರೀತಿ ಸಂಘಟಿತ ಜಾಲ ವಿದೇಶಿ ನೆಟ್‍ವರ್ಕ್ ಹೊಂದಿದೆ ಎಂಬ ಪ್ರಾಥಮಿಕ ವರದಿ ಇದೆ. ಇದು ನಾಸಿಕ್‍ಗೆ ಮಾತ್ರ ಸೀಮಿತವೇ ಅಥವಾ ದೇಶದ ಉದ್ದಗಲಕ್ಕೂ ಹರಡಿದೆಯೇ ಎಂಬ ಬಗ್ಗೆ ತನಿಖೆಯ ಅವಶ್ಯಕತೆ ಇದೆ ಎಂದರು.
ಸರ್ಕಾರ ಈ ನಿಟ್ಟಿನಲ್ಲಿ ಕೈ ಕಟ್ಟಿ ಕೂರಬಾರದು. ಏಕೆಂದರೆ ಸರ್ಕಾರಕ್ಕೆ ಜವಾಬ್ದಾರಿ ಇದೆ. ಈ ಲವ್ ಜಿಹಾದ್ ಪ್ರಕರಣ ಕೇವಲ ನಾಸಿಕ್ ಮತ್ತು ಟಿಸಿಎಸ್ ಗೆ ಸೀಮಿತವಾಗಿದೆ ಎಂದು ಭಾವಿಸಬಾರದು. ಕರ್ನಾಟಕದ ಕಂಪನಿಗಳಲ್ಲಿ ರಾತ್ರಿ, ಹಗಲು ಕೆಲಸ ಮಾಡುವ ಹೆಣ್ಣು ಮಕ್ಕಳು ಇದ್ದಾರೆ. ಉದ್ಯೋಗದ ಅನಿವಾರ್ಯತೆ ನಡುವೆ ಇಂತಹ ಜಾಲದಲ್ಲಿ ಸಿಕ್ಕಿ ಬೀಳುವ ಅಸಹಾಯಕತೆ ಇದೆ ಎಂದರು.
ಕರ್ನಾಟಕದಲ್ಲಿ ಮೂರು ವರ್ಷದಲ್ಲಿ 44,826 ವಯಸ್ಕ ಮಹಿಳೆಯರು, 6894 ಬಾಲಕಿಯರು ನಾಪತ್ತೆಯಾಗಿದ್ದಾರೆ. ಬೆಂಗಳೂರಿನಲ್ಲಿ 2290 ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಲವ್ ಜಿಹಾದ್ ಎಂಬುದು ವ್ಯಕ್ತಿ ವ್ಯಕ್ತಿಗಳ ನಡುವಿನ ಸಮಸ್ಯೆಯಾಗಿ ಈಗ ಉಳಿದಿಲ್ಲ. ಈ ವ್ಯವಸ್ಥಿತ ಜಾಲಕ್ಕೆ ತರಬೇತಿ, ಹಣ ಪೂರೈಕೆ, ಬಲೆಗೆ ಬಿದ್ದವರ ಮತಾಂತರಗೊಳಿಸುವುದು ಎಲ್ಲವೂ ಹಲವು ಪ್ರಕರಣದಲ್ಲಿ ಬೆಳಕಿಗೆ ಬಂದಿದೆ ಎಂದು ವಿವರಿಸಿದರು
ಸಂಘಟಿತ ಅಪರಾಧವನ್ನು ನ್ಯಾಯಾಲಯಗಳೂ ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಇಂತಹ ಕೃತ್ಯಗಳ ಹಿಂದೆ ಕುತಂತ್ರ ಇದೆ. ಮತಾಂತರದ ಷಡ್ಯಂತ್ರ ಇದೆ. ಹಿಂದೂ ಹೆಣ್ಣು ಮಕ್ಕಳನ್ನೇ ಗುರಿಯಾಗಿಸುವ ಜಾಲ ಇದೆ. ವಿದೇಶಿ ಮತೀಯ ಶಕ್ತಿಗಳ ಜೊತೆಗೂ ಕೈ ಜೋಡಿಸಿದ್ದಾರೆ ಅನ್ನೋದನ್ನು ಹಗುರವಾಗಿ ಪರಿಗಣಿಸಬಾರದು ಎಂದರು.

ಅಂಬೇಡ್ಕರ್ ಕನಸು ನನಸು ಮಾಡಿದ ಮೋದಿ…
ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಮುಂದಾಗಿರುವ ಮೋದಿ ಸರ್ಕಾರಕ್ಕೆ ಅಭಿನಂದನೆಗಳು. ಮಹಿಳೆಯರಿಗೂ ಸಮಾನತೆ ಸಿಗಬೇಕು ಎಂಬ ಕನಸನ್ನು ಮೋದಿ ಅವರಿಗಿಂತಲೂ ಮೊದಲು ಅಂಬೇಡ್ಕರ್ ಅವರು ಕಂಡಿದ್ದರು. ಈಗ ಬಾಬಾ ಸಾಹೇಬರ ಕನಸನ್ನು ಮೋದಿ ಅವರು ನನಸು ಮಾಡುತ್ತಿದ್ದಾರೆ. ನಮ್ಮ ಪುರಾಣದಲ್ಲೂ ಮಹಿಳೆಯರಿಗೆ ಆದ್ಯತೆ ನೀಡಲಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಹೆಚ್ಚಳ…
ಕ್ಷೇತ್ರ ಮರುವಿಂಗಡಣೆಯನ್ನು ಹಿಂದೆ ಇದ್ದ ನಿಯಮವನ್ನು ಅಳವಡಿಸಿಕೊಂಡೇ ಮಾಡುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಹೆಚ್ಚಳವಾಗುತ್ತಿದೆ. ಸಾಂಸ್ಥಿಕ ಬದಲಾವಣೆ ತರುವ ಐತಿಹಾಸಿಕ ಮಸೂದೆಯನ್ನು ವಿವೇಚನೆ ಇರುವವರು ವಿರೋಧಿಸುವುದಿಲ್ಲ. ಕಪೆÇೀಲ ಕಲ್ಪಿತ ಆರೋಪ ಮಾಡುವವರು ವಿರೋಧಿಸುತ್ತಾರೆ ಎಂದರು. ಮೊದಲು ಅನುಮಾನ ಹುಟ್ಟು ಹಾಕುವುದು, ಆಮೇಲೆ ಆರೋಪ ಮಾಡುವುದು. ಆಮೇಲೆ ಎತ್ತಿಕಟ್ಟುವುದು ಮಾಡುತ್ತಾರೆ ಎಂದು ಹೇಳಿದರು.
ಎಲ್ಲಾ ರಾಜ್ಯಗಳಲ್ಲಿ ಪ್ರತಿಶತ ಐವತ್ತು ಕ್ಷೇತ್ರಗಳು ಹೆಚ್ಚಳವಾಗಲಿದೆ. ಅನ್ಯಾಯ ಎಲ್ಲೂ ಆಗಲ್ಲ. ಸುಳ್ಳು ಆರೋಪ ಮಾಡಿದ್ದಕ್ಕೆ ಮುಖ್ಯಮಂತ್ರಿಗಳು ಕ್ಷಮೆಯಾಚನೆ ಮಾಡಬೇಕು. ಬದಲಿಗೆ ವಿರೋಧ ಮಾಡ್ತಾ ಇದ್ದೀರಿ ಎಂದರೆ ನೀವು ಸುಧಾರಣೆ ವಿರೋಧಿಗಳು, ಅಂಬೇಡ್ಕರ್ ಅವರ ವಿಚಾರಗಳ ವಿರೋಧಿಗಳು, ಸಂವಿಧಾನದ ನೈಜ ಆಶಯಕ್ಕೆ ವಿರೋಧಿಗಳು ಎಂದೇ ಅರ್ಥ ಎಂದು ಮತ್ತೊಂದು ಪ್ರಶ್ನೆಗೆ ಹೇಳಿದರು.
ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ಭಾವಿಸುವುದಾದರೆ ಇದನ್ನು ನರೇಂದ್ರ ಮೋದಿ ಅವರು ಮಾಡಿದ್ದಲ್ಲ. ಈ ಹಿಂದೆ ನೆಹರು ಮತ್ತು ಇಂದಿರಾ ಗಾಂಧಿ ಅವರೇ ಅನ್ಯಾಯ ಮಾಡಿರಬೇಕು. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಅನ್ಯಾಯ ನಡೆದಿರಬೇಕು. ಕರಡು ಬರುವ ಮೊದಲೇ ಆಪಾದನೆ ಮಾಡಿದಿರಿ. ಈಗ ಚರ್ಚೆ ನಡೆಯುತ್ತಾ ಇದೆ ಕೇಳಿಸಿಕೊಳ್ಳಿ. ಅದರ ಮೇಲೂ ಅನುಮಾನ ಇದ್ದರೆ ಅದು ನಿಮ್ಮ ರೋಗ ಎಂದರು.
ಕಾಂಗ್ರೆಸ್ ಮಹಿಳಾ ಘಟಕದವರು ಮಸೂದೆ ಬೆಂಬಲಿಸಿ ಸಿಹಿ ಹಂಚಬೇಕು, ಆದರೆ ಅವರು ವಿರೋಧಿಸುತ್ತಾರೆ ಎಂದರೆ ಸರಿಯಲ್ಲ. ಈ ಹಿಂದೆ ರಾಜ್ಯದಲ್ಲಿ ಕ್ಷೇತ್ರ ಮರುವಿಂಗಡಣೆ ಆದಾಗ ಹಲವು ಕ್ಷೇತ್ರಗಳು ಕಳೆದುಹೋದವು. ಬೆಂಗಳೂರಿನಲ್ಲಿ ಹೆಚ್ಚು ಕ್ಷೇತ್ರಗಳು ಆದವು ಎಂದು ಹೇಳಿದರು.
ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಮುಂದುವರಿಯಬೇಕು ಎಂಬ ಕಾರಣಕ್ಕೆ ಕೆ.ಎನ್.ರಾಜಣ್ಣ, ಡಾ. ಗೋವಿಂದರಾಜು, ನಸೀರ್ ಅಹಮದ್, ಜಬ್ಬಾರ್ ಅವರನ್ನು ಬಲಿ ಕೊಟ್ಟರು. ತಾನು ಅಧಿಕಾರಕ್ಕೆ ಬರಲು ನೆರವಾದ ಎಲ್ಲರನ್ನೂ ಬಲಿಕೊಟ್ಟಾದರೂ ತಾನು ಮುಂದುವರಿಯಬೇಕು ಎಂದು ಸಿಎಂ ಬಯಸಿದ್ದಾರೆ. ಅವರು ಬಹಳ ಚತುರ, ಯಾರನ್ನು ಯಾವಾಗ ಬಳಸಬೇಕು, ಯಾವಾಗ ಬಲಿ ಕೊಡಬೇಕು ಎಂಬುದು ತಿಳಿದಿದೆ. ಅಹಿಂದ ಎಂಬುದು ರಾಜಕೀಯ ಅಧಿಕಾರ ಹಿಡಿಯುವ ನಾಟಕದ ಕಥೆ ಎಂಬುದು ಸ್ಪಷ್ಟ ಎಂದು ನುಡಿದರು

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img