Monday, June 1, 2026
26.1 C
Belagavi

ಅಥಣಿ :ಪುಣ್ಯ ಸಂಪಾದನೆಗೆ ಕಾಯಕ ದಾಸೋಹ ಮಾಡಿರಿ

advertisement

spot_img

ಪುಣ್ಯ ಸಂಪಾದನೆಗೆ ಕಾಯಕ ದಾಸೋಹ ಮಾಡಿರಿ
ಅಥಣಿ : ನಿಷ್ಠಾವಂತ ಕಾಯಕದ ಮೂಲಕ ಸಂಪತ್ತು ಸಂಪಾದಿಸಿರಿ, ನಿಸ್ವಾರ್ಥ ದಾಸೋಹದ ಮೂಲಕ ಸಮಾಜಕ್ಕೆ ಅರ್ಪಣೆ ಮಾಡಿರಿ. ಕಾಯಕ ಹಾಗೂ ದಾಸೋಹ ನಮ್ಮನ್ನು ಪುಣ್ಯದ ಮಾರ್ಗದ ಕಡೆಗೆ ತೆಗೆದುಕೊಂಡು ಹೋಗುವ ಸಾಧನಗಳಾಗಿವೆ ಎಂದು ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾಯಿ ನಗರದ ಬಸವ ಉದ್ಯಾನ ವನದಲ್ಲಿ ಬಸವ ಜಯಂತಿ ಅಂಗವಾಗಿ ಜರಗುತ್ತಿರುವ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಪಾಪಿಯ ಧನ ಪ್ರಾಯಶ್ಚಿತ್ತಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ ಎಂಬ ಶರಣರ ವಾಣಿ ಅರ್ಥ ಪೂರ್ಣವಾಗಿದೆ. ಪ್ರಾಮಾಣಿಕತೆಯಿಂದ ಬಂದ ಸಂಪತ್ತಿನಲ್ಲಿಯೇ ಪರೋಪಕಾರ ಮಾಡಬೇಕು. ಸತ್ಕಾರ್ಯಗಳಿಗೆ ದಾನ ಮಾಡುವ ಗುಣ ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ನಿಸ್ವಾರ್ಥದಿಂದ ಸೇವೆ ಮಾಡಿದರೆ ಮುಂದೊಂದು ದಿನ ಗುರು ಹಿರಿಯರ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಿದೆ. ಬಸವ ತತ್ವಪಾಲನೆ ಮಾಡುವವರು ನಿರಂತರ ಕಾಯಕ ದಾಸೋಹ ಜೀವಿಗಳಾಗಿ ಬಾಳಿ ಬದುಕಬೇಕೆಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಅಭಿಯಂತರ ರಾಜಶೇಖರ ಟೋಪಿಗಿ, ನ್ಯಾಯವಾದಿ ಶಂಕರ ಮಟ್ಟೆಪ್ಪನವರ, ಬಸಪ್ಪ ಬಳವಾಡ, ಅಶೋಕ ಡಾಬಳ್ಳಿ, ಲಾಯಪ್ಪ ಮಾಳಶೆಟ್ಟಿ, ಮಚೇಂದ್ರ ಭೋಸಲೆ, ಸಿದರಾಯ ಪುಟಾಣಿ, ರಾಜು ಬಿಸುಗುಪ್ಪಿ, ಡಾ. ಸುರೇಶ ಬಂಡಗಾರ, ಯೋಗ ಶಿಕ್ಷಕ ಶ್ರೀಶೈಲ ಪಾಟೀಲ, ಡಾ. ಸುರೇಶ ಮೈಗೂರ, ಭರತ ಕಾಂಬಳೆ, ಬಸಗೊಂಡ ಕಾರಜಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೆಂಪಟ್ಟಿ ಹಾಗೂ ದೇಸಾಯಿ ಸಂಗೀತ ಬಳಗ ವಚನ ಪ್ರಾರ್ಥನೆ ಮಾಡಿದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದಾಸೋಹ ಸೇವೆ ಸಲ್ಲಿಸಿದ ವಿವಿಧ ದಾನಿಗಳನ್ನು ಗೌರವಿಸಿ ಸತ್ಕರಿಸಲಾಯಿತು.

ಅಥಣಿ ಪಟ್ಟಣದ ಸಾಯಿ ನಗರದಲ್ಲಿ ಜರುಗಿದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಜನವಾಡ ಅಲ್ಲಮ ಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img