Saturday, June 13, 2026
28.2 C
Belagavi

ಕರ್ನಾಟಕದ ಬಾನಂಗಳದ ಹಿರಿಮೆ ಮತ್ತಷ್ಟು ವಿಸ್ತಾರ!

advertisement

spot_img

ಕರ್ನಾಟಕದ ಬಾನಂಗಳದ ಹಿರಿಮೆ ಮತ್ತಷ್ಟು ವಿಸ್ತಾರ!
ಜಾಗತಿಕ ಮಟ್ಟದ ಏರ್ ಬಸ್ ಇಂಡಿಯಾ ತಂತ್ರಜ್ಞಾನ ಕೇಂದ್ರದ 2ನೇ ಅತಿ ದೊಡ್ಡ GCC ಬೆಂಗಳೂರಿನಲ್ಲಿ ಉದ್ಘಾಟನೆ

ಜಾಗತಿಕ ವಿಮಾನೋದ್ಯಮ ದಿಗ್ಗಜ Airbus ತನ್ನ “ಏರ್ ಬಸ್ ಇಂಡಿಯಾ ತಂತ್ರಜ್ಞಾನ ಕೇಂದ್ರ (Airbus India Technology Centre) ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಇದರೊಂದಿಗೆ ಕರ್ನಾಟಕದ ಬಾನಂಗಳದ ಹಿರಿಮೆ ಮತ್ತಷ್ಟು ವಿಸ್ತಾರಗೊಂಡಿದೆ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ AirBus ಜಾಗತಿಕ ಮಟ್ಟದ ಎರಡನೇ ಅತಿದೊಡ್ಡ ‘ಏರ್ ಬಸ್ ಇಂಡಿಯಾ ಟೆಕ್ನಾಲಜಿ ಸೆಂಟರ್‘ (ATC) ಅನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಕಿಂಜರಾಪು ರಾಮ್ ಮೋಹನ್ ನಾಯ್ಡು (ವರ್ಚುವಲ್ ಮೂಲಕ) ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಏರ್ ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಹಾಗೂ ಎಂಡಿ ಶ್ರೀ Jurgen Westermeier, ಬೆಂಗಳೂರಿನ ಫ್ರೆಂಚ್ ಕಾನ್ಸಲ್ ಜನರಲ್ ಶ್ರೀ Marc Lamy, ಜರ್ಮನ್ ಜರ್ಮನ್ ಕಾನ್ಸುಲೇಟ್ ನ ಡೆಪ್ಯುಟಿ ಕಾನ್ಸಲ್ ಜನರಲ್ ಶ್ರೀಮತಿ Annett Bässler ಮತ್ತು ಏರ್ಬಸ್ ನ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದು ಭಾರತದ ವಿಶೇಷವಾಗಿ ಕರ್ನಾಟಕದ ತಾಂತ್ರಿಕ ಸಾಮರ್ಥ್ಯಕ್ಕೆ ಜಗತ್ತೇ ನೀಡಿರುವ ಗೌರವ. ಸುಮಾರು 8.8 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ, 5,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುವ ಈ ಕೇಂದ್ರ ವಿಮಾನೋದ್ಯಮದ ಇಂಜಿನಿಯರಿಂಗ್, ಡಿಜಿಟಲ್ ತಂತ್ರಜ್ಞಾನ, ಗ್ರಾಹಕ ಸೇವೆ ಹಾಗೂ ಸಂಶೋಧನೆಯ ಜಾಗತಿಕ ಕೇಂದ್ರವಾಗಲಿದೆ.ಇಲ್ಲಿ ಭಾರತೀಯ ಎಂಜಿನಿಯರ್ ಗಳ ಬುದ್ಧಿಮತ್ತೆ ಜಾಗತಿಕ ವಿಮಾನಗಳ ವಿನ್ಯಾಸದಿಂದ ಆರಂಭಿಸಿ ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ತನಕ ಮಹತ್ವದ ಪಾತ್ರ ವಹಿಸಲಿದೆ. ಇದು “Make in India” ಸಾಧನೆ ಅಲ್ಲ; “Design in India, Innovate for the World” ಎಂಬ ಹೊಸ ಅಧ್ಯಾಯದ ಆರಂಭ.

ಬೆಂಗಳೂರು ಈಗಾಗಲೇ ಐಟಿ ರಾಜಧಾನಿಯಾಗಿದೆ. ಜಾಗತಿಕ ಏರೋಸ್ಪೇಸ್ ಮತ್ತು ನವೀನತೆಯ ಕೇಂದ್ರವಾಗಿಯೂ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಭಾರತದ ಯುವ ಪ್ರತಿಭೆಗೆ ಇದು ಹೊಸ ಆಕಾಶದ ಬಾಗಿಲು ತೆರೆಯುವ ಘಟ್ಟ.

ಕರ್ನಾಟಕದ ಬುದ್ಧಿಶಕ್ತಿ ಜಗತ್ತಿನ ಆಕಾಶವನ್ನು ರೂಪಿಸುತ್ತಿದೆ!

Hot this week

ಖಾಯಂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಖಾಯಂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ...

ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಗಲಾದ ಕರವೇ ಸ್ವಾಭಿಮಾನಿ ಬಣ ಉಚಿತ ಪುಸ್ತಕ ವಿತರಿಸಿ ದಾನಿಗಳಿಗೆ ಸನ್ಮಾನ

ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಗಲಾದ ಕರವೇ ಸ್ವಾಭಿಮಾನಿ ಬಣ...

ಮಕ್ಕಳ ವರ್ತನೆಯಲ್ಲಿ ಈ ಬದಲಾವಣೆ ಕಾಣ್ತಿದೆಯಾ?: ಸೈಕಾಲಜಿಸ್ಟ್ ಏನಂತಾರೆ..?

ಮಕ್ಕಳ ವರ್ತನೆಯಲ್ಲಿ ಈ ಬದಲಾವಣೆ ಕಾಣ್ತಿದೆಯಾ?: ಸೈಕಾಲಜಿಸ್ಟ್ ಏನಂತಾರೆ..? ಬೆಂಗಳೂರು: ಶಾಲೆ ಅಥವಾ...

Topics

ಖಾಯಂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಖಾಯಂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ...

ಮಕ್ಕಳ ವರ್ತನೆಯಲ್ಲಿ ಈ ಬದಲಾವಣೆ ಕಾಣ್ತಿದೆಯಾ?: ಸೈಕಾಲಜಿಸ್ಟ್ ಏನಂತಾರೆ..?

ಮಕ್ಕಳ ವರ್ತನೆಯಲ್ಲಿ ಈ ಬದಲಾವಣೆ ಕಾಣ್ತಿದೆಯಾ?: ಸೈಕಾಲಜಿಸ್ಟ್ ಏನಂತಾರೆ..? ಬೆಂಗಳೂರು: ಶಾಲೆ ಅಥವಾ...

ಬಾಗಲಕೋಟೆಯಲ್ಲಿ ರೌಡಿಸಂ ನಿಗ್ರಹ ದಳ ರಚನೆ.

ಬಾಗಲಕೋಟೆಯಲ್ಲಿ ರೌಡಿಸಂ ನಿಗ್ರಹ ದಳ ರಚನೆ. ರೌಡಿಸಂ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ಮಹತ್ವದ...

ಡಾ.ಯತೀಂದ್ರ ಸಿದ್ದರಾಮಯ್ಯಗೆ ಕಲಾತ್ಮಕ ಹಣ್ಣಿನ ಕೆತ್ತನೆಯ ಉಡುಗೊರೆ ನೀಡಿದ ಕಲಾವಿದ

ಡಾ.ಯತೀಂದ್ರ ಸಿದ್ದರಾಮಯ್ಯಗೆ ಕಲಾತ್ಮಕ ಹಣ್ಣಿನ ಕೆತ್ತನೆಯ ಉಡುಗೊರೆ ನೀಡಿದ ಕಲಾವಿದ ಬೆಂಗಳೂರು: ಹಣ್ಣು-ತರಕಾರಿಗಳ...

ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಲು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ಕರೆ

ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಲು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಸಿಎಂ...
spot_img

Related Articles

Popular Categories

spot_img