ರಾಮದುರ್ಗ- ಜಿಲ್ಲಾ ಪಂಚಾಯತಿ ಬೆಳಗಾವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕ ಪಂಚಾಯಿತಿ ರಾಮದುರ್ಗ ತಾಲೂಕ ವೈದ್ಯಾಧಿಕಾರಿಗಳು ರಾಮದುರ್ಗ ಹಾಗೂ ಇನ್ನರ್ ವೀಲ್ ಕ್ಲಬ್ ರಾಮದುರ್ಗ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನಪಾನ ಸಪ್ತಾಹಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ತಾಲೂಕ ವೈದ್ಯಧಿಕಾರಿ ಡಾ. ನವೀನ್ ಕುಮಾರ್ ನಿಜಗುಲಿ ಹಾಗೂ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ಶ್ರೀಮತಿ ಸುಲೋಚನಾ ಬಸವರಾಜ್ ಯಾದವಾಡ ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ತಾಯಿಯ ಎದೆ ಹಾಲಿನ ಮಹತ್ವದ ಕುರಿತು ಮಹಿಳೆಯರಿಗೆ ಬಾಣಂತಿಯರಿಗೆ ಅರಿವು ಮೂಡಿಸಲಾಯಿತು. ಕಾರ್ಯದರ್ಶಿಗಳಾ ವಿಶಾಲಾಕ್ಷಿ ಚಿಕ್ಕೋಡಿ,ಮಾಜಿ ಅಧ್ಯಕ್ಷರಾದ ನಿರ್ಮಲಾ ಹಂಜಿ ವೈದ್ಯೆ ಸೌಮ್ಯ ಮೆಳ್ಳಿಕೇರಿ, ಪದಾಧಿಕಾರಿ ಲೀಲಾವತಿ ಆರಿಬೆಂಚಿ, ಉಮಾ ನೇಮಗೌಡರ ಕಮಲಾ ಕುಂಬಾರ ಹೇಮಲತಾ ಕಲ್ಯಾಣಿ ,ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು
Trending Now
