ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಮನಿಹಾಳ-ಸುರೇಬಾನ ಅವಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಸಮೀಪದ ಮನಿಹಾಳ ಗ್ರಾಮ ದೇವತೆ ದ್ಯಾಮವ್ವ ದೇವಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ
ವಿವಿಧ ಸಕಲ ವಾದ್ಯ ವೈಭವ ಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ವಿಶ್ವಕರ್ಮದ ಮಹಿಳೆಯರು ಸುಡು ಬಿಸಿಲಿನಲ್ಲಿ ಕುಂಭ ಹೊತ್ತುಕೊಂಡು ಸುರೇಬಾನ, ರೇವಡಿಕೊಪ್ಪ, ಪ್ರಮುಖ ರಸ್ತೆ ಮೂಲಕ ಕೆಇಬಿ ಪ್ಲಾಟಿಗೆ ಸಂಪನ್ಗೊಂಡಿತು.ವಿಶ್ವಕರ್ಮ ಸಮಾಜದ ಹಿರಿಯರು ಮುಖಂಡರು ಭಾಗಿಯಾಗಿದ್ದರು
ನಂತರ ವಿಶ್ವಕರ್ಮ ಸಮಾಜದಿಂದ ಅನ್ನ ಸಂತರ್ಪಣೆ ನೆರೆವೇರಿತು.
ಇದೇ ವೇಳೆ ಮನಿಹಾಳ-ಸುರೇಬಾನ ರೇವಡಿಕೋಪ್ಪ ಗ್ರಾಮದ ವಿಶ್ವಕರ್ಮ ಸಮಾಜದ ಹಿರಿಯರು ಯುವಕರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Trending Now
