ದಿ. ಮಹಾಂತೇಶ ಅರ್ಬನ್ ಕೋ – ಆಫ್ ಕ್ರೆಡಿಟ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ.
ಸೊಸೈಟಿಯು ಕಳೆದ ನಾಲ್ಕು ವರ್ಷಗಳಿಂದ ನೀಟ್ ಹಾಗೂ ಸಿಇಟಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಇಂಜಿನಿಯರಿಂಗ್ ಪ್ರವೇಶ ಪಡೆದ ಸೊಸೈಟಿಯ ಶೇರುದಾರರ ಮಕ್ಕಳಿಗೆ ಸಹಾಯಧನ ನೀಡುತ್ತಾ ಬಂದಿದ್ದು ಈ ವರ್ಷವೂ ಕೂಡ ನಮ್ಮ ಸೊಸೈಟಿಯ ಶೇರುದಾರರ ಮಕ್ಕಳಾದ ಕುಮಾರಿ ಅಶ್ವಿನಿ ಶಿ ಪಾಟೀಲ ಹರ್ಷಿಣಿ ಮಲ್ಲಿಕಾರ್ಜುನ ಕೊಟ್ರನ್ನವರ ಹಾಗೂ ಗಣೇಶ ಲೋಕಪ್ಪ ಬೆನ್ನೂರ ಇವರಿಗೆ ತಲಾ 25 ಸಾವಿರ ರೂಪಾಯಿಗಳ ಚೆಕ್ ನೀಡಿ ಸನ್ಮಾನಿಸಿ ಸತ್ಕರಿಸಲಾಯಿತು.ನಮ್ಮ ಸೊಸೈಟಿಯ ಷೇರುದಾರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಸಾಮಾಜಿಕ ಕಾಳಜಿ ಜವಾಬ್ದಾರಿಯನ್ನು ಹೊಂದಿರುವುದು ಅತ್ಯಂತ ಸಂತೋಷದ ಸಂಗತಿ ಪ್ರೋತ್ಸಾಹ ಧನ ಪಡೆದ ಮಕ್ಕಳು ಇಂಜಿನಿಯರಿಂಗ್ ಕೋರ್ಸ್ ನಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತಮ ಉದ್ಯೋಗವನ್ನು ಪಡೆದುಕೊಂಡು ನಂತರ ನಮ್ಮ ಸೊಸೈಟಿಯ ಶಿಕ್ಷಣ ನಿಧಿಗೆ ಹಣಕಾಸಿನ ನೆರವು ನೀಡುವ ಮೂಲಕ ಶೇರುದಾರ್ ಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗಬೇಕೆಂದು ಸೊಸೈಟಿಯ ಅಧ್ಯಕ್ಷರಾದ ಶ್ರೀ ಎಸ್ ಜಿ ಮಾಳವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ ಯಾದವಾಡ ಮಾತನಾಡಿ ಪ್ರೋತ್ಸಾಹ ಧನ ಪಡೆದ ವಿದ್ಯಾರ್ಥಿಗಳು ಭವಿಷ್ಯ ಉಜ್ವಲ ವಾಗಲಿ ಎಂದು ಹಾರೈಸಿದರು ಅಂಜಲಿ ಹಂಪಣ್ಣವರ ವಚನ ಪ್ರಾರ್ಥನೆ ಮಾಡಿದರು ನಿರ್ದೇಶಕ ಶ್ರೀ ದಡೆದವರು ಸ್ವಾಗತಿಸಿದರು ಪ್ರೊಫೆಸರ್ ಎಸ್ ಎನ್ ಸಕ್ರಿ ಕಾರ್ಯಕ್ರಮ ನಿರೂಪಿಸುವ ಮೂಲಕ ಪ್ರಾಥಮಿಕ ನುಡಿಗಳ ನಾಡಿದರು ದೀಪಕ್ ಹರಿಬೆಂಚಿ ವಂದನಾರ್ಪಣೆ ಮಾಡಿದರು ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಮಹದೇವಪ್ಪ ಕಲಾಲ್ ಜಗದೀಶ್ ಲಾಹೋಟಿ ಮನೋಹರ್ ಹೊನ್ನೊಂಗರ್ ಕೃಷ್ಣ ವೇದಾರ ಸೊಸೈಟಿಯ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Trending Now
