Tuesday, February 10, 2026
29.1 C
Belagavi

ಶಿಗ್ಗಾವಿ ಸವಣೂರು ಕ್ಷೇತ್ರದ ತಾಯಂದಿರು ನನಗೆ ಕೊಟ್ಟಿರುವ ರೊಟ್ಟಿ, ನವಣಕ್ಕಿ ಅನ್ನದ ಋಣ ಹೃದಯದೊಳಗೆ ಶಾಸ್ತ್ರತ ಸ್ಥಾನ ಮಾಡಿದೆ:ಬಸವರಾಜ ಬೊಮ್ಮಾಯಿ

advertisement

spot_img

ಶಿಗ್ಗಾವಿ ಸವಣೂರು ಕ್ಷೇತ್ರದ ತಾಯಂದಿರು ನನಗೆ ಕೊಟ್ಟಿರುವ ರೊಟ್ಟಿ, ನವಣಕ್ಕಿ ಅನ್ನದ ಋಣ ಹೃದಯದೊಳಗೆ ಶಾಸ್ತ್ರತ ಸ್ಥಾನ ಮಾಡಿದೆ:ಬಸವರಾಜ ಬೊಮ್ಮಾಯಿ

ಎಲ್ಲರನ್ನು ಪ್ರೀತಿಯಿಂದ ಕಾಣುವ ನಾಯಕ ಇದ್ದರೆ ಸಾತ್ವಿಕವಾಗಿ ಕ್ಷೇತ್ರದ ಅಭಿವೃದ್ಧಿ ಸಾಧ್ಯ:ಬಸವರಾಜ ಬೊಮ್ಮಾಯಿ

ಹಾವೇರಿ:(ಸವಣೂರು) ಜನ ಸಾಮಾನ್ಯರನ್ನು ಪ್ರೀತಿಸುವಂತಹ ನಾಯಕರು ಬೇಕು. ಜಾತಿ ಮತ ಪಂಥಗಳಿಂದ ವಿಂಗಡಿಸಿ, ದುರ್ಬಿನಿನಿಂದ ನೋಡುವ ನಾಯಕರು ಸಿಕ್ಕರೆ ಅದು ಮಾರಕವಾಗುತ್ತದೆ. ಎಲ್ಲರನ್ನು ಪ್ರೀತಿಯಿಂದ ಕಾಣುವ ನಾಯಕ ಇದ್ದರೆ ಆ ಕ್ಷೇತದ ಅಭಿವೃದ್ಧಿ ಸಾತ್ವಿಕವಾಗಿ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಇಂದು ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವರಾಜ ಬೊಮ್ಮಾಯಿರವರ ಅಭಿಮಾನಿಗಳ ಬಳಗದ ವತಿಯಿಂದ ಪೌರ ಕಾರ್ಮಿಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ಸನ್ಮಾನಿಸಿ ಮಾತನಾಡಿದರು. ಈ ತಾಲೂಕಿನ ಸೇವೆ ಮಾಡುವಂತಹ ಅವಕಾಶವನ್ನು ಈ ತಾಲೂಕಿನ ಮಹಾ ಜನತೆ ನನಗೆ ಮಾಡಿಕೊಟ್ಟಿದ್ದಾರೆ. ನಾನು ಈ ಜನರ ಋಣ ತೀರಿಸಲು ಸಾಧ್ಯವಿಲ್ಲ. ಕೇವಲ ಮತಗಳ ಸಂಬಂಧವಿಲ್ಲ. ಮತಗಳ ಮೀರಿದ ಸಂಬಂಧ ಇದೆ. ಅತ್ಯಂತ ಆತ್ಮೀಯ ಸಂಬಂಧ ಇದೆ. ನಾನು ಸಂಸದ ಆಗಿದ್ದರೂ, ಶಿಗ್ಗಾವಿ ಸವಣೂರು ತಾಲೂಕಿಗೆ ಬಂದಾಗ ಸಿಗುವ ಸಂತೋಷ ಎಲ್ಲಿಯೂ ಸಿಗುವುದಿಲ್ಲ. ನಿಮ್ಮ ಜೊತೆ ಒಡನಾಟ, ಕೆಲಸ, ಕಾರ್ಯ, ಜಗಳ, ನಿಮ್ಮ ಮನೆಗೆ ಬಂದಾಗ ತೋರಿಸುವ ಪ್ರೀತಿ ಗೌರವ ಮರೆಯಲು ಸಾಧ್ಯವಿಲ್ಲ. ತಾಯಂದಿರು ನನಗೆ ಕೊಟ್ಟಿರುವ ರೊಟ್ಟಿ, ನವಣಕ್ಕೆ ಅನ್ನ, ಮಜ್ಜಿಗಿ ಸಾರು, ಹುಗ್ಗಿ, ಹೋಳಗಿ, ಅನ್ನದ ಕಾಳಿನ ಋಣ ನನ್ನ ಹೊಟ್ಟೆಯೊಳಗೆ ಹೊಕ್ಕಿದೆ ಅದು ನನ್ನ ಹೃದಯದೊಳಗೆ ಶಾಸ್ತ್ರತ ಸ್ಥಾನ ಮಾಡಿದೆ ಎಂದು ಹೇಳಿದರು.ನಾನು ಹುಟ್ಟಿದಾಗ ನಮ್ಮ ತಂದೆಯವರು ವಕೀಲಿಕೆ ಮಾಡುತ್ತಿದ್ದರು. ಅವರು ನಾನು ಹುಟ್ಟಿದ ಎರಡು ವರ್ಷಕ್ಕೆ ಚುನಾವಣೆ ಮಾಡಿದ್ದರು. ಆಗಿನಿಂದಲೂ ಚುನಾವಣೆಯ ವಾತಾವರಣದಲ್ಲಿ ಬೆಳೆದಿದ್ದೇನೆ. ಹೀಗಾಗಿ ಜನ ಸಂಪರ್ಕ ಮಾಡುವುದು ನಿತ್ಯ ನಿರಂತರವಾಗಿದೆ. ನಮ್ಮ ತಂದೆಗೆ 24 ಜನ ಜೂನಿಯರ್ ವಕೀಲರಿದ್ದರು. ನಾನು ಸಣ್ಣವನಿದ್ದಾಗ ಶಾಲೆಗೆ ಹೋಗುವಾಗ ನೂರಾರು ಜನ ಕಕ್ಷಿದಾರರು ಬರುತ್ತಿದ್ದರು. ಅವರನ್ನು ಸರಿಸಿ ನಾನು ಶಾಲೆಗೆ ಹೋಗುತ್ತಿದ್ದೆ. ಅಂತಹ ವಕೀಲಿಕೆ ಬಿಟ್ಟು ರಾಜಕಾರಣಕ್ಕೆ ಬರಲು ಒಂದು ಕಾರಣ ಇತ್ತು. ಕುಂದಗೋಳ ತಾಲೂಕಿನಲ್ಲಿ ಸುಮಾರು 3 ಸಾವಿರ ಎಕರೆ ಜಮೀನನ್ನು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿ ರೈತರಿಗೆ ಬಿಡಿಸಿ ಕೊಟ್ಟಿದ್ದರು. ಆ ಕಾರಣದಿಂದ ಜನರು ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಿಸಿ ಕಳುಹಿಸಿದ್ದರು. ನಮ್ಮೂರು ಇರುವುದು ಕುಂದಗೋಳ ತಾಲೂಕಿನಲ್ಲಿ ನೀವು ಪ್ರೀತಿಯಿಂದ ಇಲ್ಲಿಗೆ ಕರೆದು ನನ್ನನ್ನು ನಾಲ್ಕು ಬಾರಿ ಆರಿಸಿ ಕಳುಹಿಸಿದ್ದೀರಿ ನಿಮ್ಮ ಋಣದಲ್ಲಿ ನಾನಿದ್ದೇನೆ. ನಿಮ್ಮ ಸೇವೆ ಮಾಡುವುದು ನನ್ನ ಕರ್ತವ್ಯ‌. ನಿಮ್ಮ ಆದೇಶ. ಸೇವೆ ಮಾಡಲು ನೀವು ನೇಮಿಸಿದ್ದೀರಿ ನಾನು ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡಿದ್ದೇನೆ ಎಂದು ಹೇಳಿದರು.

ನಿಮ್ಮ ಪ್ರೀತಿ ದೊಡ್ಡದು

ಕೃಷ್ಣ ಪರಮಾತ್ಮ ತನ್ನನ್ನು ಅತಿ ಹೆಚ್ಚು ಯಾರು ಪೀತಿ ಮಾಡುತ್ತಾರೆ ಎಂದು ಪರೀಕ್ಷೆ ಮಾಡಿದಾಗ ಸತ್ಯಭಾಮ ತನ್ನ ಮೈಮೇಲೆ ಇರುವ ಎಲ್ಲ ಆಭರಣಗಳನ್ನು ತಕ್ಕಡಿಯಲ್ಲಿ ಹಾಕಿದಳು. ಅರಮನೆಯಲ್ಲಿರುವ ಎಲ್ಲ ವಜ್ರ ವೈಡೂರ್ಯಗಳನ್ನು ಹಾಕಿದರೂ ಕೃಷ್ಣನ ತಕ್ಕಡಿ ಎಳಲಿಲ್ಲ. ಆದರೆ, ರುಕ್ಮಿಣಿ ಮೂರು ತುಳಸಿ ಎಲೆ ಪೂಜಿಸಿ ಕೃಷ್ಣನ ತಕ್ಕಡಿಯಲ್ಲಿ ಇಟ್ಟಾಗ ಕೃಷ್ಣನ ತಕ್ಕಡಿ ಮೇಲೆ ಏರಿತು. ಅಂದರೆ ನೀವು ತೋರಿಸುವ ಪ್ರೀತಿ ವಿಶ್ವಾಸ ನಾನು ಮಾಡಿರುವ ಕೆಲಸಕ್ಕಿಂತ ದೊಡ್ಡದು. ಸವಣೂರಿನ ಪರಿಸ್ಥಿತಿ ಹೇಗಿತ್ತು ಅಂತ ಎಲ್ಲರಿಗೂ ಗೊತ್ತಿದೆ. ಅಂದರೆ, ಕುಡಿಯುವ ನೀರಿನ ಸಮಸ್ಯೆ ಬಹಳ ಇತ್ತು ತಹಸೀಲ್ದಾರ ಕಚೇರಿ ಸುಟ್ಟು ಹೋಗಿತ್ತು. ಅಷ್ಟರ ಮಟ್ಟಿಗೆ ಜನರ ಸಹನೆಯ ಕಟ್ಟೆ ಒಡೆದು ಹೋಗಿತ್ತು. ಆ ಸಂದರ್ಭದಲ್ಲಿ ನಾನು ಬಂದೆ. ನಾನು ವಿಧಾನ ಪರಿಷತ್ ಸದಸ್ಯ ಇದ್ದಾಗ ಮೋತಿ ತಾಲಾಬ್‌ ಗೆ ಸಣ್ಣ ನೀರಾವರಿ ಯೋಜನೆ ಮಾಡಿದ್ದೆ. ನಾನು ನೀರಾವರಿ ಸಚಿವನಾದಾಗ ವರದಾ ನದಿಯಿಂದ ಮೋತಿ ತಾಲಾಬ್ ಗೆ ನೀರು ತಂದಿದ್ದರಿಂದ ಹಲವಾರು ವರ್ಷಗಳ ನೀರಿನ ಬಾಯಾರಿಕೆ ಕಡಿಮೆಯಾಯಿತು ಎಂದು ಹೇಳಿದರು.ನಾನು 2013 ರ ಚುನಾವಣೆ ಆಯಿತು. ಎರಡು ತಿಂಗಳಲ್ಲಿ ಬಂದೆ. ಸವಣೂರಿನಲ್ಲಿ ಅಲ್ಪ ಸಂಖ್ಯಾತ ತಾಯಂದಿರು ಅಲ್ಲಿ ಬಂದಿದ್ದರು. ಒಬ್ಬ ತಾಯಿಯನ್ನು ಹೇಗಿದ್ದೀರಾ ಎಂದು ಕೇಳಿದೆ. ಅವರು ಆರಾಮ ಇದ್ದೇವೆ. ನಾನು ಐವತ್ತು ವರ್ಷದ ಹಿಂದೆ ಸೊಸೆಯಾಗಿ ಇಲ್ಲಿಗೆ ಬಂದಿದ್ದೆ, ದೂರದಿಂದ ನೀರು ತರುವುದು ತಪ್ಪಿರಲಿಲ್ಲ. ನೀವು ದೇವರ ರೂಪದಲ್ಲಿ ಬಂದು ನೀರಿನ ಬವಣೆ ತಪ್ಪಿಸಿದ್ದೀರಿ, ಆದರೆ, ನಾನು ನಿಮಗೆ ಮತ ಹಾಕಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದರು. ನಾನು ಮತಕ್ಕಿಂತ ಪ್ರಾರ್ಥನೆಯಲ್ಲಿದೆ. ದೇವರಲ್ಲಿ ಪ್ರಾರ್ಥಿಸಿ ಎಂದು ಹೇಳಿದೆ.

ನಾನು ಸಿಎಂ ಆಗಿದ್ದಾಗ ಸವಣೂರಿಗೆ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. ಮುಂದಿನ ವರ್ಷ ಕಾಲೇಜು ಆರಂಭವಾಗಬೇಕು. ಆಯುರ್ವೆದಿಕ್‌ಗೆ ಹೆಚ್ಚಿನ ಮಹತ್ವ ಬಂದಿದೆ. ಖಾಸಗಿ ಕಾಲೇಜುಗಳಲ್ಲಿ ಡೊನೇಷನ್ ಹೆಚ್ಚಿಗೆ ಇದೆ. ಬಡವರ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಸರ್ಕಾರಿ ಕಾಲೇಜು ತಂದಿದ್ದೇನೆ. ಯುವಕರಿಗೆ ಐಟಿಐ ಕಾಲೇಜು ಮಂಜೂರು ಮಾಡಿದ್ದೇನೆ. 30 ಕೋಟಿ ರೂ. ಯೋಜನೆ ಪೂರ್ಣಗೊಳ್ಳುತ್ತದೆ. ನಾನಿದ್ದಾಗ ತಾಯಿ ಮಕ್ಕಳ ಆಸತ್ರೆಯನ್ನು ಮಂಜೂರು ಮಾಡಿದ್ದೆ ಅದನ್ನು ರದ್ದು ಮಾಡಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಅಲ್ಪ ಸಂಖ್ಯಾತ ಸಮುದಾಯ ಹೆಚ್ಚಿಗೆ * ಇರುವುದರಿಂದ ಅದರ ಅಗತ್ಯವಿದೆ ಎಂದು ಹೇಳಿದರು.

ಸೇವೆಗೆ ಸ್ಫೂರ್ತಿ:
ನೀವೆಲ್ಲ ಬಂದಿರುವುದು ನನಗೆ ಇನ್ನಷ್ಟು ಹೆಚ್ಚಿನ ಸೇವೆ ಮಾಡಲು ಸ್ಫೂರ್ತಿ ಬಂದಿದೆ. ರಾಜಕಾರಣಕ್ಕೆ ವಯಸ್ಸಿನ ಮಿತಿ ಇಲ್ಲ. 18 ವರ್ಷಕ್ಕೆ ಮತ್ತ ಹಾಕುವ ಅವಕಾಶ ಸಿಗುತ್ತದೆ. ಆದರೆ, ಅದಕ್ಕೂ ಮೊದಲೇ ರಾಜಕಾರಣ ಮಡಬಹದು. ನಿವೃತ್ತಿಗೆ ವಯಸ್ಸಿಲ್ಲ. ಸರ್ಕಾರಿ ನೌಕರಿ ಮಾಡಲು ಶೈಕ್ಷಣಿಕ ಆರ್ಹತೆ ಬೇಕು. ಆದರೆ, ರಾಜಕಾರಣ ಮಾಡಲು ಯಾವುದೇ ಅರ್ಹತೆ ಬೇಕಿಲ್ಲ. ಸಕಾರಾತ್ಮಕವಾಗಿ ಯೋಚನೆ ಮಾಡಿದರೆ ಸೇವೆ ಮಾಡಲು ಯಾವುದೇ ವಯಸ್ಸು ಬೇಕಿಲ್ಲ. ಜೀವನದಲ್ಲಿ ಶಕ್ತಿ ಇರುವವರೆಗೂ ಸೇವೆ ಮಾಡಬಹುದು. ಸೇವೆ ಮಾಡುವ ಇಚ್ಚಾ ಶಕ್ತಿ ಇರುವವರೆಗೂ ಸಾರ್ವಜನಿಕ ಜೀವನದಲ್ಲಿ ಇರಬಹುದು. ಆದರ್ಶ ರಾಜಕಾರಣಿಗಳು ಇದ್ದಾರೆ. ರಾಜಶೇಖರ ಸಿಂಧೂರ್ ಅವರು ಯಾವತ್ತೂ ರಾಜಕಾರಣ ಮಾಡಬೇಕೆಂದು ಕೊಂಡವರಲ್ಲ. ನಾನು ಇಲ್ಲಿಗೆ ಬರಲು ಅವರೂ ಕಾರಣ, ಬಸಣ್ಣ ನೀವು ಶಿಗ್ಗಾವಿ ಸವಣೂರು ಕ್ಷೇತಕ್ಕೆ ಬರಬೇಕು ನಿಮ್ಮ ತಂದೆಯಿಂದ ನಮಗೆ ಸಹಾಯ ಆಗಿದೆ. ನೀವು ಬಂದರೆ ನಾನು ಕೇತ್ರ ಬಿಟ್ಟು ಕೊಡುತ್ತೇನೆ ಎಂದು ಹೇಳಿ ನನಗೆ ಸಹಾಯ ಮಾಡಿದರು. ಕರ್ನಾಟಕದಲ್ಲಿ ಸುಮಾರು ಐನೂರು ಮಂತ್ರಿಗಳಾಗಿದ್ದಾರೆ. ಅನೇಕ ಜನ ಸಿಎಂಗಳಾಗಿದ್ದಾರೆ. ಆದರೆ ಏಳೆಂಟು ಜನರ ಹೆಸರು ಮಾತ್ರ ಹೇಳುತ್ತಾರೆ. ಜನರ ಮನದಾಳದಲ್ಲಿ ಹೆಸರು ಮಾಡುವ ಕೆಲಸ ಮಾಡಿದವರು ಮಾತ್ರ ಶಾಸ್ವತವಾಗಿ ಕಾಲಾತೀತವಾಗಿ ಇರಲು ಸಾಧ್ಯ ಆ ಕೆಲಸ ಮಾಡುವ ಶಕ್ತಿಯನ್ನು ಭಗವಂತ ನನಗೆ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.

ಮಾದರಿ ತಾಲೂಕು
ಇವತ್ತು ಸವಣೂರು ತಾಲೂಕು ಮಾದರಿ ತಾಲೂಕು ಅಭಿವೃದ್ಧಿ ಆಗಬೇಕು. ಇನ್ನು ಬಹಳಷ್ಟು ಕೆಲಸ ಕಾರ್ಯ ಆಗಬೇಕು. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಆಗಲಿ, ರೈತರಿಗೆ ಅನುಕೂಲ ಆಗಲಿ, ರೈತ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಿಂದ ಅನುಕೂಲವಾಗಿದೆ. ಎಸ್.ಎಂ.ಕೃಷ್ಣ ಅವರು ಯಶಸ್ವಿನಿ ಯೋಜನೆ ಮಾಡಿದ್ದರು. ಅದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ನಾನು ಆ ಯೋಜನೆ ಮರು ಜಾರಿ ಮಾಡಿದೆ. ಒಳ್ಳೆಯ ಯೋಜನೆಗಳನ್ನು ಮುಂದಿನ ಸರ್ಕಾರ ಮುಂದುವರೆಸಬೇಕು. ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾಗ ನಾನು ಸಂಸದ ಆಗಿರುವುದು ನನ್ನ ಪುಣ್ಯಭಾಗ್ಯ ಬರುವಂತಹ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡುವ ಮುಖಾಂತರ ನಮ್ಮ ಟ್ರಸ್ಟ್ ನ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುವ ಸಂಕಲ್ಪ ಮಾಡುತ್ತೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಚನ್ನವೀರ ಮಹಾಸ್ವಾಮಿಗಳು ವಿರಕ್ತಮಠ, ಹೂವಿನಶಿಗ್ಲಿ ಹಾಗೂ ಪರಮಪೂಜ್ಯ ಶ್ರೀ ಗುರುಶಾಂತಯ್ಯ ಜಾನಗೋಡಿಮಠ ಸ್ವಾಮಿಗಳು ಕಪ್ಪತ್ತಗುಡ್ಡ ಉಭಯ ಶ್ರೀಗಳು ಸಾನಿಧ್ಯ ವಹಿಸಿದ್ದರು. ಭಾರತೀಯ ಜನತಾ ಪಕ್ಷದ ಸವಣೂರ ಮಂಡಳದ ಅಧ್ಯಕ್ಷರಾದ ಶಿವಪುತ್ರಪ್ಪ ಕಲಕೋಟಿ, ಮುಖಂಡರುಗಳಾದ ಭರತ ಬೊಮ್ಮಾಯಿ, ಶ್ರೀ ಎಸ್.ವಾಯ್ ಪಾಟೀಲ್, ಡಿ.ಎಸ್ ಮಾಳಗಿ, ಸುಭಾಷ ಗಡೆಪ್ಪನವರ, ಸುಮಂತ ಸಿಂಧೂರ, ಶೋಭಾ ನಿಸ್ಸಿಮಗೌಡ್ರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Hot this week

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

Topics

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬುಡಕಟ್ಟು...

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ.

ಬೆಳಗಾವಿಯ ಗೃಹ ಕಚೇರಿಯಲ್ಲಿ ಇಂದು ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ...
spot_img

Related Articles

Popular Categories

spot_img