ಹುಬ್ಬಳ್ಳಿಯ ಆಕಾಶದಲ್ಲಿ ಮತ್ತೆ ಬಣ್ಣ ಬಣ್ಣದ ಹಕ್ಕಿಗಳ ಹಾರಾಟದ ಹಬ್ಬ!
ಫೆಬ್ರವರಿ 7 ಮತ್ತು 8, 2026 ರಂದು ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಆಯೋಜಿತವಾಗಿರುವ ‘ಅಂತರಾಷ್ಟ್ರೀಯ ಗಾಳಿಪಟ ಉತ್ಸವ – 2026’ ಸಂಭ್ರಮದ ಹಬ್ಬದ ಹಿನ್ನೆಲೆಯಲ್ಲಿ ಇಂದು ‘ಅಂತರಾಷ್ಟ್ರೀಯ ಗಾಳಿಪಟ ಉತ್ಸವ – 2026’ ರ ಅಧಿಕೃತ ಲೋಗೋ ಹಾಗೂ ಪೋಸ್ಟರ್ ಅನಾವರಣಗೊಳಿಸಲಾಯಿತು.
ಅಂತರಾಷ್ಟ್ರೀಯ ಗಾಳಿಪಟ ಉತ್ಸವವು ನಮ್ಮ ಅವಳಿ ನಗರದ ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲಿದೆ. ದೇಶ-ವಿದೇಶಗಳ ಗಾಳಿಪಟ ಪ್ರೇಮಿಗಳನ್ನು ಸ್ವಾಗತಿಸಲು ನಮ್ಮ ಹುಬ್ಬಳ್ಳಿ ಸಜ್ಜಾಗಿದೆ.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ Jyothi Patil , ಉಪಮಹಾಪೌರರಾದ ಶ್ರೀ ಸಂತೋಷ ಚವ್ಹಾಣ Santosh Chavan , ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಬಿಜೆಪಿ ಅಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಪಕ್ಷದ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.



