ಸುರೆಬಾನ ಮನಿಹಾಳ ಗ್ರಾಮದ ಗುರುದೇವ ಆತ್ಮಾನಂದರ ಪುಣ್ಯಶ್ರಮದಲ್ಲಿ 75 ವರ್ಷದ ಅಮೃತ ಮಹೋತ್ಸವದ ಒಂದು ತಿಂಗಳ ಪರಿಯಂತರ “ಓಂ ನಮಃ ಸುವಾಯ ಜಪ ಯಜ್ಞ ”ಕಾರ್ಯಕ್ರಮವನ್ನು ಸೋಮವಾರ ದಿನಾಂಕ 3-11-2025 ರಂದು ಜಗದ್ಗುರು ಶ್ರೀ ಸಮರ್ಥ ಶಿವಾನಂದ ಮಹಾಸ್ವಾಮಿಗಳು ಧ್ವಜಾರೋಹಣ ಮಾಡುವ ಮೂಲಕ ಈ ಮಹಾಮಂತ್ರದ ಜಪಯಜ್ಞ(24*7) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
ಮೊದಲನೆಯ ದಿನದ ಜಪಯಜ್ಞ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ರೆಡ್ಡಿರ್ ತಿಮ್ಮಾಪುರ ಗ್ರಾಮದ ಅಧ್ಯಾತ್ಮ ಬಂಧುಗಳು ಪಾಲ್ಗೊಂಡಿದ್ದರು.. ಪ್ರತಿಯೊಬ್ಬ ಮನುಷ್ಯ ಬಯಸುವುದು ಸುಖ ಅದಕ್ಕೆ ಯಾವುದೇ ನಾಮ,ರೂಪ,ಆಕಾರವಿಲ್ಲದಂತಹ ಮಹಾಮಂತ್ರವಾದ ಓಂ ನಮಃ ಸುಖಾಯ ಮಂತ್ರವನ್ನು ಜಗತ್ತಿಗೆ ಮೊಟ್ಟ ಮೊದಲು ತಿಳಿಸಿಕೊಟ್ಟ ಮಹಾನ್ ತತ್ವಜ್ಞಾನಿ ಶ್ರೀ ಗುರುದೇವ ಆತ್ಮನಂದರು,, ಇವರ 43ನೆ ಪುಣ್ಯತಿಥಿಯು ಡಿಸೆಂಬರ್ 3ರಂದು ಸುರೇಬಾನ್ ಮಣಿಹಾಳದ ಪುಣ್ಯಶ್ರಮದಲ್ಲಿ ನೆರವೇರುವುದು .. ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ಜನ ಪಾಲ್ಗೊಳ್ಳುತ್ತಾರೆ. ಈ ಮಹಾಮಂತ್ರದ ಜಪಾಯಜ್ಞ ಕಾರ್ಯಕ್ರಮದಲ್ಲಿ ಹಾರೋ ಬೆಳವಾಡಿ, ಶಿರೂರ್, ಪುಡುಕಲಕಟ್ಟಿ, ತಲೆಮೋರಬ, ಧಾರವಾಡ, ನಾಗನೂರು, ಸೋಟಕನಾಳ, ದೊಡವಾಡ , ಗೋವನಕೊಪ್ಪ , ಮಲ್ಲಿಗವಾಡ ಹಂಗರಕಿ ಮತ್ತು ಮನಿಹಾಳಾ ಗ್ರಾಮದ ಅಧ್ಯಾತ್ಮ ಬಂಧುಗಳು ಪಾಲ್ಗೊಳ್ಳಲಿದ್ದಾರೆ




