ಶೇರುದಾರರು ಠೇವಣಿದಾರರು ಮತ್ತು ಸಾಲ ತೆಗೆದುಕೊಂಡಂತ ಗ್ರಾಹಕರ ಸಹಾಯಕರದಿಂದ ನಮ್ಮ ಮರಾಠಾ ಕ್ರೆಡಿಟ ಸೊಸೈಟಿಯು ಇಂದು ಒಳ್ಳೆಯ ರೀತಿಯಿಂದ ಕಾರ್ಯನಿರ್ವಹಿಸುತ್ತಿದ್ದು ಗ್ರಾಹಕರ ಸಹಕಾರಕ್ಕೆ ಸ್ಪಂದಿಸುತ್ತಿದೆ, ಆ ಕಾರಣದಿಂದ ನಮ್ಮ ಮರಾಠ ಸೊಸೈಟಿಯು 2024- 25 ನೇ ಸಾಲಿನಲ್ಲಿ 24 ಲಕ್ಷಕ್ಕೂ ಹೆಚ್ಚು ಲಾಭಾಂಶವನ್ನು ಹೊಂದಿದೆ, 65 ಕೋಟಿಗೂ ಹೆಚ್ಚು ಬಂಡವಾಳ ದುಡಿಯುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಪಿ.ಎಂ .ಜಗತಾಪ ತಿಳಿಸಿದರು.
ಅವರು ಮರಾಠ ಕಲ್ಯಾಣ ಮಂಟಪದಲ್ಲಿ ನಡೆದ ನಡೆದ ಡಿ ಮರಾಠ ಅರ್ಬನ್ ಸೊಸೈಟಿಯ 25ನೇ ವರ್ಷದ ಸರ್ವಸಾಧಾರಣ ಸಭೆ ಮತ್ತು ಬೆಳ್ಳಿ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೊಸೈಟಿಯು ಈಗ ಸ್ವಂತ ಕಟ್ಟಡವನ್ನು ಹೊಂದಿದ್ದು ಗ್ರಾಹಕರಿಗೆ ಅನುಕೂಲ ಆಗುವಂತೆ ಈಗ ನಮ್ಮ ನಾವು ಸೊಸೈಟಿಯಲ್ಲಿ ಡಿಪಾಸಿಟ್ ಲಾಕರ್, ಬಂಗಾರದ ಮೇಲೆ ಸಾಲ, ಸೇಫ್ ಲಾಕರನ್ನು ಬಾಡಿಗೆಗೆ ಕೊಡುವ ವ್ಯವಸ್ಥೆ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು. ಸೇರುದಾರರಿಗೆ 12% ಡಿವಿಡೆಂಟನ್ನು ಕೊಡ ಮಾಡಲಾಗಿದೆ ಎಂದು ಹೇಳಿದರು.
ನಿವೃತ್ತ ಸಹಕಾರಿ ಅಧಿಕಾರಿಗಳಾದ ಹುರಕಡ್ಲಿ ಯವರು ಮಾತನಾಡಿ ಒಂದು ಸಂಘವು 25 ವರ್ಷ ಬೆಳೆದು ಅತ್ಯುತ್ತಮ ರೀತಿ ಯಿಂದ ಸಾಗುವುದಕ್ಕೆ ಅದನ್ನು ನಡೆಸುತ್ತಿರುವ ಆಡಳಿತ ಮಂಡಳಿ ಹಾಗೂ ಗ್ರಾಹಕರು ಮುಖ್ಯ ಕಾರಣ ಎಂದು ಹೇಳಿದರು, ಪಡೆದ ಸಾಲವನ್ನು ಸರಿಯಾದ ಸಮಯದಲ್ಲಿ ಮರುಪಾವತಿಸಬೇಕೆಂದು ಹೇಳಿದರು.
ವೇದಿಕೆ ಮೇಲೆ ಉಪಾಧ್ಯಕ್ಷ ಸಂಜೀವ್ ನಲವಡೆ, ಮುನವಳ್ಳಿ ಶಾಖೆಯ ತಾನಾಜಿ ಮೊರಂಕರ್, ಯರಗಟ್ಟಿ ಶಾಖೆಯ ಅಶೋಕ್ ಅಂಗಡಿ, ರಾಮದುರ್ಗ ಶಾಖೆಯ ಎಲ್ಲ ನಿರ್ದೇಶಕರುಗಳು ಶೇರುದಾರರು, ಗ್ರಾಹಕರು ಉಪಸ್ಥಿತರಿದ್ದರು. ಗಂಗಾಧರ ಭೋಸಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ
24- 25 ನೇ ಸಾಲಿನಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು, ಸಂಘದ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಪಟ್ಟಣ ವಾರ್ಷಿಕ್ ವರದಿ ಮಂಡಿಸಿದರು. ಎಸ್. ಪಿ .ಮುರಾರಿ ಕಾರ್ಯಕ್ರಮ ನಡೆಸಿಕೊಟ್ಟರು, ಶ್ರೀಮತಿ ರಾಜಶ್ರೀ ಭೋಸಲೆ ವಂದಿಸಿದರು.



