ಸ್ಮಾರ್ಟ್ ಬಜಾರ್ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ದು*ರ್ಮರಣ!
ಸ್ಮಾರ್ಟ್ ಬಜಾರ್ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾ*ವನ್ನಪ್ಪಿರುವ ಘೋರ ಘಟನೆ ಬೆಂಗಳೂರಿನ ಬೋನ್ ಮಿಲ್ ಬಳಿ ನಡೆದಿದೆ. 50 ವರ್ಷದ ಸ್ವಾಮಿ ಮೃ*ತ ದುರ್ದೈವಿ. ಎಂದಿನಂತೆ ಕೆಲಸದಲ್ಲಿದ್ದಾಗ, ಟ್ರಾಲಿ ಜಾರಿ ಗೇಟ್ ಸೆಕ್ಯೂರಿಟಿ ಗಾರ್ಡ್ ಮೇಲೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಸ್ವಾಮಿ ಮೃ*ತಪಟ್ಟಿದ್ದಾರೆ.
ಮೃ*ತ ಸ್ವಾಮಿ ಅವರು ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಭೇಟಿ ನೀಡಿದ್ದಾರೆ.
ಮೃ*ತ ಸ್ವಾಮಿ ಅವರ ಕುಟುಂಬಕ್ಕೆ ಸ್ಮಾರ್ಟ್ ಬಜಾರ್ ಆಡಳಿತ ಮಂಡಳಿ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಹನುಮಂತರಾಯಪ್ಪ ಒತ್ತಾಯಿಸಿದ್ದಾರೆ. ಬಡ ಕುಟುಂಬಕ್ಕೆ ಆಸರೆಯಾಗಿದ್ದ ವ್ಯಕ್ತಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.



