Monday, March 2, 2026
22.3 C
Belagavi

ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ: ಕೆ.ವಿ.ಪ್ರಭಾಕರ್

advertisement

spot_img

ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ: ಕೆ.ವಿ.ಪ್ರಭಾಕರ್

ಜಾರಕಿಹೊಳಿಯವರ ಶಕ್ತಿ ಅವರ ಕಾಯಕದಲ್ಲಿದೆ: ಕೆ.ವಿ.ಪಿ

ಬೆಂಗಳೂರು ಫೆ 19: ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಸತೀಶ್ ಜಾರಕಿಹೊಳಿ ಅವರಿಗೆ ಪ್ರೆಸ್ ಕ್ಲಬ್ ನೀಡಿದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಯೇ ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟತೆ ಮತ್ತು ಖಚಿತತೆ ಸತೀಶ್ ಜಾರಕಿಹೊಳಿಯವರಿಗೆ ಇರುವ ಕಾರಣದಿಂದಲೇ ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಜಾರಕಿಹೊಳಿಯವರನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ತೇರನ್ನು ಎಳೆಯುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗಳ ಪಕ್ಕದಲ್ಲೇ ಜಾರಕಿಹೊಳಿಯವರ ಕೈಗಳಿವೆ ಎಂದು ನುಡಿದರು.ಜಾರಕಿಹೊಳಿಯವರು ಹೆಚ್ಚು ಮಾತಾಡುವುದಿಲ್ಲ, ಐವತ್ತು ಮಂದಿ ಸೇರಿರುವ ಸಭೆಯಾಗಲಿ, ಐದು ಲಕ್ಷ ಮಂದಿ ಸೇರಿರುವ ಸಭೆಯಾಗಲಿ ಐದೇ ನಿಮಿಷದಲ್ಲಿ ಮಾತು ಮುಗಿಸುತ್ತಾರೆ ಎಂದು ಬಹಳ ಮಂದಿ ನನಗೆ ಹೇಳಿದ್ದಾರೆ. ಅವರಿಗೆಲ್ಲಾ ನಾನು ಒಂದೇ ಉತ್ತರ ಕೊಡುತ್ತೇನೆ, “ದಡದಲ್ಲಿ ನಿಂತು ನೋಡುವಾಗ ಸಮುದ್ರ ಬಹಳ ಪ್ರಶಾಂತವಾಗಿ ಕಾಣುತ್ತದೆ. ಆದರೆ ಸಮುದ್ರದ ರಭಸ ಇರುವುದು ಅದರ ಆಳದಲ್ಲಿ. ಜಾರಕಿಹೊಳಿಯವರ ಮೌನದ ಆಳದಲ್ಲಿ ಅವರ ರಭಸ ಇದೆ. ಆ ರಭಸ ಅವರ ಕೆಲಸದಲ್ಲಿ ಕಾಣುತ್ತದೆ ಎಂದರು.

ಯಾವತ್ತು Easy chair politics ಗೆ ಒರಗಿಕೊಳ್ಳದ ಸತೀಶ್ ಅವರು ಬಹಳ ಕಷ್ಟವಾದ ಹಾದಿಯನ್ನೇ ಆರಿಸಿಕೊಂಡು ಅದರಲ್ಲಿ ಸಕ್ಸಸ್ ಆಗುತ್ತಾರೆ. ಇದು ಸ್ಪಷ್ಟವಾಗಿ ಮತ್ತೊಮ್ಮೆ ಗೋಚರಿಸಿದ್ದು ಶಿಗ್ಗಾಂವ್ ಉಪ ಚುನಾವಣೆಯಲ್ಲಿ. ಯಾವ ಮಾಧ್ಯಮದವರೂ ಕಲ್ಪಿಸಿಕೊಳ್ಳದ ರೀತಿಯಲ್ಲಿ ಹಲವು ಸವಾಲುಗಳ ನಡುವೆಯೂ ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಂಡೇ ಬಂದರು. ಇದಕ್ಕಾಗಿ ಅವರು ಮಾಡಿದ ಕೆಲಸವನ್ನು ನಾನು ಬಹಳ ಹತ್ತಿರದಿಂದ ಗಮನಿಸಿದ್ದೇನೆ.

ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಹೇಗೆ ಇಡೀ ಕ್ಷೇತ್ರದ ತುಂಬ ಹರಡಿ ಹೋಗಿದ್ದರು. ಅವರ ಮೂಲಕ ಹೇಗೆ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಿಸಿದರು ಎನ್ನುವುದು ಪ್ರತಿಯೊಬ್ಬ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಪಾಠ ಆಗುತ್ತದೆ ಎಂದು ವಿವರಿಸಿದರು.ಸೈದ್ಧಾಂತಿಕ ರಾಜಕಾರಣ ಅಳಿವಿನ‌ ಅಂಚಿನಲ್ಲಿರುವ ಈ ಕಾಲಘಟ್ಟದಲ್ಲಿ ” ಮಾನವ ಬಂಧುತ್ವ ವೇದಿಕೆ” ಮೂಲಕ ಇಡೀ ರಾಜ್ಯದಲ್ಲಿ ಸೈದ್ಧಾಂತಿಕ‌ ಪಡೆಯನ್ನು ಕಟ್ಟುತ್ತಿದ್ದಾರೆ. ಇವತ್ತು ಅಭಿಮಾನಿ ಪಡೆಯನ್ನು ಕಟ್ಟುವುದು ಬಹಳ ಸಲೀಸು. ಧಾರವಾಹಿ ನಟರೂ ಅಭಿಮಾನಿ ಪಡೆ ಕಟ್ಟುತ್ತಾರೆ. ಆದರೆ ಸೈದ್ಧಾಂತಿಕ‌ ಪಡೆ ಕಟ್ಟವುದು ಬಹಳ ದೊಡ್ಡ ಸವಾಲು. ಅಧಿಕಾರ-ಹಣ-ಜಾತಿಯ ಬಲ ಇದ್ದರೆ ರಾತ್ರಿ ಬೆಳಗಾಗುವುದರೊಳಗೆ ಅಭಿಮಾನಿಗಳು ಸಾಲುಗಟ್ಟುತ್ತಾರೆ. ಆದರೆ ಸೈದ್ದಾಂತಿಕ ಪಡೆ ಕಟ್ಟಲು ನಿತ್ಯ ಕಸರತ್ತು ಮಾಡಬೇಕಾಗುತ್ತದೆ. ಈ ಕಸರತ್ತನ್ನು ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯದ ತುಂಬ ಮಾಡುತ್ತಿದ್ದಾರೆ. ಈ ಮಾನವ ಬಂಧುತ್ವ ವೇದಿಕೆ ಕಾಂಗ್ರೆಸ್ಸಿಗೆ ಸೈದ್ಧಾಂತಿಕವಾಗಿ ನೀರು ಗೊಬ್ಬರ ಹಾಕುತ್ತಿದೆ ಎಂದು ವಿವರಿಸಿದರು.

ಜಾರಕಿಹೊಳಿ ಅವರಲ್ಲದೆ ಬೇರೆ ಯಾರಾದರೂ ಲೋಕೋಪಯೋಗಿ ಇಲಾಖೆ ಸಚಿವರಾಗಿದಿದ್ದರೆ ಇಷ್ಟೊತ್ತಿಗೆ ಹೈರಾಣಾಗಿಬಿಡುತ್ತಿದ್ದರು. ಹಿಂದಿನ ಸರ್ಕಾರ ಮಾಡಿಟ್ಟು ಹೋಗಿರುವ ಅನಾಹುತಗಳು ಮತ್ತು ವಿಪರೀತ ಆರ್ಥಿಕ ಹೊರೆಯ ಬಳಿಕವೂ ಸಮತೋಲನದಿಂದ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕೇ ನಾನು ಆಗಲೇ ಹೇಳಿದ್ದು, ಸತೀಶ್ ಅವರು ಕಷ್ಟವಾದ ಸವಾಲುಗಳಿಗೇ ಕೈ ಹಾಕಿ ಅದರಲ್ಲಿ ಸಕ್ಸಸ್ ಆಗುತ್ತಾರೆ.

ಬೆಳಗಾವಿ ರಾಜಕಾರಣದಲ್ಲಿ ಸಕ್ಸಸ್ ಆದವರು ರಾಜ್ಯ ರಾಜಕಾರಣದಲ್ಲಿ ಸಕ್ಸಸ್ ಆಗುವುದರಲ್ಲಿ ಅನುಮಾನಗಳೇ ಇಲ್ಲ.

ಹಾಗೆಯೇ ಬಹಳ ದೊಡ್ಡ ಉದ್ಯಮಿಯಾಗಿ ಸಕ್ಸಸ್ ಆಗಿದ್ದರೂ, ಉದ್ಯಮ ಮತ್ತು ರಾಜಕಾರಣವನ್ನು ಪರಸ್ಪರ ಬೆರೆಸದೆ ಸ್ಪಷ್ಟ ಅಂತರ ಕಾಯ್ದುಕೊಳ್ಳುವಲ್ಲೂ ಸಕ್ಸಸ್ ಆಗಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಬೆಂಗಳೂರು ಪ್ರೆಸ್ ಕ್ಲಬ್ , ವರ್ಷದ ವ್ಯಕ್ತಿ ಪ್ರಶಸ್ತಿಗೆ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಮಾಜವಾದಿ ಚಿಂತಕರೂ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿ ವರ್ಮಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ರಿಜ್ವಾನ್ ಅರ್ಷದ್ ಅವರು, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Hot this week

ನಂದೇಶ್ವರ ಸವದಿ ಕಣಕಣದಲ್ಲೂ ಬಸವ ತತ್ವ ತುಂಬಿದೆ

ಸವದಿ ಕಣಕಣದಲ್ಲೂ ಬಸವ ತತ್ವ ತುಂಬಿದೆ ನಂದೇಶ್ವರ ಬಸವ ಕೇಂದ್ರ ಸವದಿ ಗ್ರಾಮದ...

ಉತ್ತರ ಕರ್ನಾಟಕ ಅಭಿವೃದ್ಧಿಗೆ. 15 ಸಾವಿರ ಕೋಟಿ ವಿಶೇಷ ಅನುದಾನ ನೀಡಿ- ಶಿವಕುಮಾರ. R. ಮೇಟಿ (ಅಗ್ನಿ)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಉತ್ತರ...

ಕೊಲ್ಲಿ ಯುದ್ಧ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯ

ಅಮೆರಿಕಾದ ತದ್ವಿರುದ್ಧ ನಿಲುವಿಗೆ ಸಿಎಂ ಖಂಡನೆ ಕೊಲ್ಲಿ ಯುದ್ಧ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗುವುದು:...

ಬಸವ ತತ್ವಕ್ಕೆ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರ

ಬಸವ ತತ್ವಕ್ಕೆ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರ ಬಸವ ತತ್ವಗಳನ್ನು ಚಾಚು ತಪ್ಪದೆ...

80 ಕೆಜಿ ಭಾರ ಜಗ್ಗುವ ಟ್ರ್ಯಾಕ್ಟರ್ ಕಂಡು ಹಿಡಿದ ವಿದ್ಯಾರ್ಥಿ

80 ಕೆಜಿ ಭಾರ ಜಗ್ಗುವ ಟ್ರ್ಯಾಕ್ಟರ್ ಕಂಡು ಹಿಡಿದ ವಿದ್ಯಾರ್ಥಿ ರಾಷ್ಟ್ರೀಯ ವಿಜ್ಞಾನ...

Topics

ನಂದೇಶ್ವರ ಸವದಿ ಕಣಕಣದಲ್ಲೂ ಬಸವ ತತ್ವ ತುಂಬಿದೆ

ಸವದಿ ಕಣಕಣದಲ್ಲೂ ಬಸವ ತತ್ವ ತುಂಬಿದೆ ನಂದೇಶ್ವರ ಬಸವ ಕೇಂದ್ರ ಸವದಿ ಗ್ರಾಮದ...

ಉತ್ತರ ಕರ್ನಾಟಕ ಅಭಿವೃದ್ಧಿಗೆ. 15 ಸಾವಿರ ಕೋಟಿ ವಿಶೇಷ ಅನುದಾನ ನೀಡಿ- ಶಿವಕುಮಾರ. R. ಮೇಟಿ (ಅಗ್ನಿ)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಉತ್ತರ...

ಕೊಲ್ಲಿ ಯುದ್ಧ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯ

ಅಮೆರಿಕಾದ ತದ್ವಿರುದ್ಧ ನಿಲುವಿಗೆ ಸಿಎಂ ಖಂಡನೆ ಕೊಲ್ಲಿ ಯುದ್ಧ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗುವುದು:...

ಬಸವ ತತ್ವಕ್ಕೆ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರ

ಬಸವ ತತ್ವಕ್ಕೆ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರ ಬಸವ ತತ್ವಗಳನ್ನು ಚಾಚು ತಪ್ಪದೆ...

80 ಕೆಜಿ ಭಾರ ಜಗ್ಗುವ ಟ್ರ್ಯಾಕ್ಟರ್ ಕಂಡು ಹಿಡಿದ ವಿದ್ಯಾರ್ಥಿ

80 ಕೆಜಿ ಭಾರ ಜಗ್ಗುವ ಟ್ರ್ಯಾಕ್ಟರ್ ಕಂಡು ಹಿಡಿದ ವಿದ್ಯಾರ್ಥಿ ರಾಷ್ಟ್ರೀಯ ವಿಜ್ಞಾನ...

ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ

ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ ಬ್ಯಾಡಗಿಯಲ್ಲಿ...

ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಉಪಕ್ರಮದಡಿ ಕೈಗಾರಿಕಾ ಅನುಮತಿ ಮತ್ತಷ್ಟು ಸಲೀಸು-ಶೀಘ್ರ!

ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಉಪಕ್ರಮದಡಿ ಕೈಗಾರಿಕಾ ಅನುಮತಿ ಮತ್ತಷ್ಟು ಸಲೀಸು-ಶೀಘ್ರ! ರಾಜ್ಯದ...

ಯಾರ ಓಲೈಕೆ ಮಾಡಲು ಉರ್ದು ಜಾಹೀರಾತು ನೀಡಿದ್ದರು? ಎಂದು ಹೇಳಿ ಪುಣ್ಯಕಟ್ಟಿಕೊಳ್ಳಿ.ಮುಖ್ಯಮಂತ್ರಿ Siddaramaiah

ಉರ್ದು ಪತ್ರಿಕೆಯಲ್ಲಿ ಸರ್ಕಾರದ ಜಾಹೀರಾತೊಂದು ಉರ್ದು ಭಾಷೆಯಲ್ಲಿ ಪ್ರಕಟಗೊಂಡಿದ್ದನ್ನು ವಿರೋಧಿಸಿ ವಿಪಕ್ಷಗಳ...
spot_img

Related Articles

Popular Categories

spot_img