ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಬಾಣಂತಿ ಹಸುಗುಸು ಇರುವ ವರದಿಯನ್ನು RMD Digtel Media ವರದಿ ಮಾಡಿತ್ತು ತಕ್ಷಣ ಕಾರ್ಯಪ್ರವೃತ್ತರಾದ ಸಂಗಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಂಗಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಲಹಾಳ ಗ್ರಾಮದ ದೊಡ್ಡಪ್ಪ ಮುಷಪ್ಪ ಮಾದರ ಎಂಬುವವರ ಗೊಡೆ ಕುಸಿದ ಮನೆಯಲ್ಲಿ 11 ದಿನದ ಹಸುಗುಸನ್ನು ಇಟ್ಟುಕೊಂಡು ವಾಸವಾದ ಸುದ್ದಿಯನ್ನು ನಿಮ್ಮ ಸುದ್ದಿ ವಾಹಿನಿ ಪ್ರನಯಾ ನ್ಯೂಸ್ ನ ವರದಿಗೆ ಸಂಗಳ ಗ್ರಾಮ ಪಂಚಾಯತನ ಪಿಡಿಒ ಹಾಗೂ ಸದಸ್ಯರು ಸೇರಿಕೊಂಡು ಬಾಣಂತಿಯ ಮನೆಗೆ ಭೇಟಿ ನೀಡಿ ದಿನಸಿ ಸಾಮಗ್ರಿಗಳ ಕಿಟ್ಟ ವಿತರಿಸಿ ಮಾನವಿಯತೆ ಮೆರೆದಿದ್ದಾರೆ.
ಈ ವೇಳೆ ಗ್ರಾಮ ಪಂಚಾಯತಿ ಪಿಡಿಒ ಆಯ್.ಎಚ್.ಅಗಸರ, ಕಾರ್ಯದರ್ಶಿ ಬಸವರಾಜ ಹುಲ್ಲೂರ, ಗ್ರಾಮ ಲೆಕ್ಕಾಧಿಕಾರಿ ರಾಜು.ಬಿಳಗಿಕರ, ಗ್ರಾಮ ಪಂಚಾಯತಿ ಸದಸ್ಯರಾದ ಶಂಕರಗೌಡ ಪಾಟೀಲ, ಹನಮಂತ ಮಾದರ, ಪ್ರೇಮಾ ಹಿರೆಮಠ, ಸೈದಾಬಿ ಹಡಗಲಿ, ಆಶಾ ಕಾರ್ಯಕರ್ತೆ ರೇಣುಕಾ ಭಜಂತ್ರಿ ಸೇರಿದಂತೆ ಗ್ರಾಮಸ್ಥರು ಹಾಗೂ ಪಂಚಾಯತಿ ಸಿಬ್ಬಂದಿ ಇದ್ದರು.