ಕುಡಿಯುವ ನೀರಿನ ಬಿಲ್ ಪರಿಷ್ಕರಣೆ ಮಾಡುವಂತೆ ಮನವಿ.
ಹೌದು ವೀಕ್ಷಕರೇ ಇತ್ತೀಚಿಗೆ ರಾಮದುರ್ಗ ಪಟ್ಟಣದಲ್ಲಿ ಕುಡಿಯುವ ನೀರಿನ ಬಿಲ್ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು ಇದನ್ನ ಪರಿಷ್ಕರಿಸಿ ಕಡಿಮೆ ಮಾಡುವಂತೆ ಬೈಲಹೊಂಗಲದ ಉಪ ವಿಭಾಗ ಅಧಿಕಾರಿ AC ಪ್ರವೀಣ್ ಜೈನ್ ಅವರಿಗೆ ರಾಮದುರ್ಗ ಪಟ್ಟಣದ ನೇಕಾರಪೇಟೆಯ ಮುಖಂಡರುಗಳು ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಿದರು . ಮನವಿ ಸ್ವೀಕರಿಸಿದ AC ಪ್ರವೀಣ್ ಜೈನ್ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು.
ಸಂದರ್ಭದಲ್ಲಿ ದೇವಾಂಗ ಸಮಾಜದ ಮುಖಂಡರುಗಳಾದ ಶಂಕರಣ್ಣ ಮುರುಡಿ, ವಕೀಲರಾದ ರಾಜು ಕೋಪರ್ಡೆ, ವಿಠ್ಠಲ ಮುರುಡಿ, ಸಿದ್ದಣ್ಣ ಸೂಳಿಭಾವಿ, ಮಾಜಿ ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ತಿಮ್ಮಣ್ಣ ಚಿಂಚಖಂಡಿ, ಪ್ರಭು ಬಲಕುಂದಿ, ಚಂದ್ರು ಕಡ್ಡಿ, ರಾಜು ಸೂಳಿಭಾವಿ, ನಾಮದೇವ ಸೋರಿ, ಲಕ್ಕಪ್ಪ ಮುರುಡಿ, ಈರಣ್ಣ ಕಡ್ಡಿ, ದಶರಥ ಹುಲಮನಿ, ಗಣೇಶ ಸೂಳಿಭಾವಿ, ತಿಮ್ಮಣ್ಣ ಸೂಳಿಕೇರಿ ಮುಂತಾದವರು ಉಪಸ್ಥತರಿದ್ದರು.
Trending Now



