ರಾಮದುರ್ಗ-ಇತಿಹಾಸವಿರುವ ಭಾರತದ ಮೂಲ ಮಣ್ಣಿನ ಅಸ್ಥಿತೆಯ ಪರಿಚಯ ಇಂದಿನ ಯುವ ಪೀಳಿಗೆಗೆ ಅಗತ್ಯವಾಗಿದೆ ಎಂದು ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ ಮಾತನಾಡಿದರು. ಮುಂದುವರಿದು ವೀರ ವನಿತೆ ಕಿತ್ತೂರ ಚನ್ನಮ್ಮ 200ನೇ ವರ್ಷದ ವಿಜಯೋತ್ಸವ ಹಾಗೂ ಅಭಯ ರಾಣಿ ಅಬ್ಬಕ್ಕ 500 ನೇ ಜಯಂತ್ಯುತ್ಸವದ ಅಂಗವಾಗಿ ఎబివిటి ವತಿಯಿಂದ ಹಮ್ಮಿಕೊಂಡಿದ್ದ ರಥಯಾತ್ರೆ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ,ಕಿತ್ತೂರ ರಾಣಿ ಚನ್ನಮ್ಮ ಅವರು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷ, ರಾಣಿ ಅಬ್ಬಕ್ಕ ಅವರ 500ನೇ ಜಯಂತಿ ಅಂಗವಾಗಿ ಅವರ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನರಿಗೆ ತಿಳಿಸುವ ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಣಿ ಚನ್ನಮ್ಮನ ಕಿಚ್ಚು, ಅಬ್ಬಕ್ಕನ ಸೂರ್ತಿ ಪ್ರತಿ ಮನೆ ಮನೆಗಳಲ್ಲಿ ಬೆಳಗಬೇಕಿದೆ. ಪೂರ್ವಜರು ಹಾಕಿ ಕೊಟ್ಟ ಸಂಸ್ಕೃತಿ- ಸಂಸ್ಕಾರ ಉಳಿಸಿ ಬೆಳೆಸುವ ಜತೆಗೆ ದೇಶದಲ್ಲಿನ ವೀರ ವನಿತೆಯರ ಸಾಹಸ ರಾಣಿ ಚನ್ನಮ್ಮ ಹಾಗೂ ರಾಣಿ ಅಬ್ಬಕ್ಕ 200-500 ವರ್ಷಗಳಾದರೂ ಅವರ ಸಾಧನೆಗಳು ಜನರ ಮನಸ್ಸಿನಲ್ಲಿ ಉಳಿದಿವೆ.
ಅವರ ದೇಶಭಕ್ತಿ ಅಜರಾಮರ. ಈ ಒಂದು ರಥಯಾತ್ರೆಯು ಮಿನಿ ವಿಧಾನಸೌಧದಿಂದ ಪ್ರಾರಂಭವಾಗಿ ಸಂಗೋಳ್ಳಿ ರಾಯಣ್ಣನ ವೃತ್ತಕ್ಕೆ ಬಂದು ಸಮಾಪ್ತಿಯಾಯಿತು. ಕಾರ್ಯಕ್ರಮದ ವಂದನಾರ್ಪಣೆ ಸಂದೇಶ್ ಪಟ್ಟಣ ಮಾಡಿದರು. ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ಹಾಗೂ ಹಿರಿಯರು ಭಾಗವಹಿಸಿದ್ದರು.