ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಂಗ್ರಾಳಿ ಕೆ.ಎಚ್ ಸಿ.ಟಿ.ಎಸ್ ನಂ 2406 ರ ಈಶ್ವರ ದೇವಸ್ಥಾನದ ಹತ್ತಿರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಸಾರ್ವಜನಿಕ ಗ್ರಂಥಾಲಯದ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು
ಈ ಸಂದರ್ಭದಲ್ಲಿ ಎ.ವಾಯ್ ಬೆಂಡಿಗೇರಿ, ಬಸವರಾಜ ಮುದ್ದಾಪೂರ, ಚಂಬಣ್ಣ ಹೊನ್ನದಕಟ್ಟಿ, ವಿನಾಯಕ ಚೌಗಲೆ, ರೋಹಿನಿ ಚೌಗಲೆ ಧನಂಜಯ ಜಾಧವ, ಸಂಜೀವ ಬೆಳಗಾಂವಕರ, ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



