ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ವಸುದೇವ ಕುಟುಂಬಕಂ ಉಪದೇಶ ಮಾಡಿದಂತೆ ಜಗತ್ತಿನಲ್ಲಿ ಎಲ್ಲರೂ ಒಂದೇ ಸಮಾನತೆಯಿಂದ ಬಾಳಬೇಕು ಎಂದು ಹೇಳಿದರು, ಒಳ್ಳೆಯ ದಾರಿಯಲ್ಲಿ ದಾರಿಯಲ್ಲಿ ಇಂದಿನ ಸಮಾಜ ಸಾಗಬೇಕಿದೆ, ಇಂದಿನ ಯಾಂತ್ರಿಕ ಯುಗ ದಲ್ಲಿ ಜಾತಿಭೇದ ಮಾಡದೆ ಎಲ್ಲರೂ ಸಮಾನ ರೀತಿಯಿಂದ ಬದುಕಬೇಕೆಂದು ಗಂಗಾಧರ್ ಭೋಸಲೆ ಹೇಳಿದರು,ಅವರು ಇಂದು ವೀರರಾಣಿ ಚೆನ್ನಮ್ಮಾ ಕನ್ನಡ ವಿದ್ಯಾಲಯದಲ್ಲಿ ನಡೆದ ಶ್ರೀ ಕೃಷ್ಣವೇಶಭೂಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೂವತ್ತಕ್ಕಿಂತ ಹೆಚ್ಚು ಮಕ್ಕಳು ಕೃಷ್ಣ ರಾಧೆಯ ವೇಷದಲ್ಲಿ ಬಂದು ಉತ್ಸಾಹದಿಂದ ಪಾಲ್ಗೊಂಡರು, ಅವರ ಜೊತೆ ಅವರ ಪಾಲಕರು ಸಹ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಈರಣ್ಣ ಗದಗಿನ, ಶ್ರೀಮತಿ ಹೇಮಾ ದಲಬಂಜನ್, ಶಿಕ್ಷಕಿಯರಾದ ರಾಜಶ್ರೀ ಭೋಸಲೆ.
ರತ್ನಾ ಹನಮಸಾಗರ,ಅಂಜುಮ್ ಕೆರೂರ್. ಪ್ರೀತಿ ಭಂಗಿ ಪ್ರಿಯಾ ಸೂರ್ಯವಂಶಿ, ಶಿಲ್ಪಾ ಪತ್ತಾರ್,ನಾಗರತ್ನ ಕೊಪ್ಪಳ,
ರೂಪಾ ಘೋರ್ಪಡೆ, ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಶ್ರೀ ಕೃಷ್ಣನ ಗೀತೆಗೆ ನೃತ್ಯ ಪ್ರದರ್ಶನ ಮಾಡಿದರು