ಮೇರುನಟ, ಸಾಹಸಸಿಂಹ ಡಾ|| ವಿಷ್ಣುವರ್ಧನ್ ರವರ ಬೆಂಗಳೂರಿನಲ್ಲಿರುವ ಪುಣ್ಯಭೂಮಿಯನ್ನು ನೆಲಸಮ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬನ ಹಾಗೂ ವಿಷ್ಣುಸೇನಾ ಸಮಿತಿ, ವತಿಯಿಂದ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಚಲನಚಿತ್ರ ಲೋಕದಲ್ಲಿ ಜನಮನ ಗೆದ್ದ ಕನ್ನಡ ನಾಡಿನ ಹೆಸರಾಂತ ಮೇರು ನಟರಾದ, ಅಭಿಮಾನಿಗಳ ಆರಾಧ್ಯ ದೈವ, ದೇವಮಾನವ, ಸಾಹಸ ಸಿಂಹ ಡಾ. ವಿಷ್ಣುವರ್ಧನ ರವರ ಪುಣ್ಯಭೂಮಿಯನ್ನು ಧ್ವಂಸ ಮಾಡಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ,
ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಉಂಟುಮಾಡಿರುತ್ತದೆ. ಕನ್ನಡ ಅಭಿಮಾನವಾಗಿ ಬದುಕು ನಡೆಸಿದ ನಟನ ಆದರ್ಶ ಮೆರೆಯಬೇಕಿದ್ದ ನೆಲದಲ್ಲಿ ಅಪಮಾನ ಮಾಡಿದಂತಾಗಿದೆ. ಕನ್ನಡಿಗರಾದ ನಮ್ಮೆಲ್ಲರಿಗೂ ಬಾರಿ ನೋವು ತಂದಿದೆ. ಕನ್ನಡಕ್ಕಾಗಿ ದುಡಿದ ಹಿರಿಯ ನಟನಿಗೆ ಕೊಡುವ ಮರ್ಯಾದೆ ಇಷ್ಟೇನಾ..? ಇದು ನರಿ ಅಲ್ಲ ಅವರಿಗೆ ನ್ಯಾಯ ಸಿಗಲೇಬೇಕು. ಅದೇ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಅಪ್ರತಿಮ ನಟನ ಸ್ಮಾರಕವನ್ನು ಸಂರಕ್ಷಿಸುವಂತೆ ಕರವೇ, ವಿಷ್ಣುಸೇನಾ ಸಮಿತಿ ಸಂಘಟನೆ ವತಿಯಿಂದ ಆಗ್ರಹಿಸಿ
ಒತ್ತಾಯಿಸಿದರು .
ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟವನ್ನು ಮಾಡುತ್ತೇವೆಂದು ಎಚ್ಚರಿಕೆ ನೀಡುತ್ತಾ ರಾಮದುರ್ಗ ತಾಲೂಕಾ ಘಟಕದಿಂದ ಈ ಮೂಲಕ ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರ ಶ್ರೇಯಸ್ ವಾಲಿ.. ಉಪಾಧ್ಯಕ್ಷರ ವಿಗ್ನೇಶ್ ಹೆಬ್ಬಾರ್, ಅಪ್ಪಣ್ಣ ಬಾಡಗಾರ…, ನಗರ ಘಟಕ ಅಧ್ಯಕ್ಷರು ಅಪ್ಪು ಶಿರೆಯನ್ನವರ, ತಾಯಪ್ಪ, ಮಂಜು ಕೊರವರ ಮೌನೇಶ್ ಪತ್ತಾರ್, ವಿಷ್ಣು ಸೇನಾ ಸಮಿತಿ ಬಾಗಲಕೋಟ ಜಿಲ್ಲಾ ಅಧ್ಯಕ್ಷರ ಯಲ್ಲಪ್ಪ ಪುಂಜಿ.. ವಿಷ್ಣು ಸೇನಾ ಸಮಿತಿ.. ರಾಮದುರ್ಗ ಅಧ್ಯಕ್ಷರ ಮೋಹನ ದಾಸರ.. ಗೌರವ ಅಧ್ಯಕ್ಷ ಮಾರುತಿ ಕೊಳದುರ್, ಮೋಹನ್ ಮಲಜಿ… ಶಿವಪ್ಪ ಕೀಲಿ ಕೈ, ವಕೀಲರಾದ ಎಸ್, ಎಸ್, ದೊಡ್ಡಮನಿ, ಪುನೀತ ಫೌಂಡೇಶನ್ ರಾಜೇಶ್ ಹರ್ಲಾಪುರ್ ಉಪಸ್ಥಿರಿದರು