ಕರ್ನಾಟಕ ಸರ್ಕಾರವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಇದೇ ಸಪ್ಟೆಂಬರ್ 22 ರಿಂದ ಹಿಂದುಳಿದ ವರ್ಗಗಳಿಗೆ ಸೇರಿದವರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಿದೆ. ಇದಕ್ಕಾಗಿ ಗಣತಿದಾರರು ತಮ್ಮ ಮನೆ ಬಾಗಿಲಿಗೆ ಬರಲಿದ್ದು, ಅವರಿಗೆ ತಮ್ಮ ಕುಟುಂಬದ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಲು ಕರ್ನಾಟಕ ರಾಜ್ಯಾದ್ಯಂತ ಇರುವ ಬಣಜಿಗ ಬಂಧುಗಳಿಗೆ ವಿನಂತಿಸಿಕೊಳ್ಳಲಾಗಿದೆ. ಬಣಜಿಗ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿದ್ದು ಸರ್ಕಾರಕ್ಕೆ ನಮ್ಮಸಮುದಾಯದ ನಿಖರ ಮಾಹಿತಿ ದೊರಕಿದರೆ ಜನ ಕಲ್ಯಾಣ ಕಾಠ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುವುದಲ್ಲದೆ, ಸರ್ಕಾರದ ಸವಲತ್ತುಗಳನ್ನು ಪಡೆಯಲು ಬಣಜಿಗ ಬಾಂಧವರು ಹಕ್ಕುಳ್ಳವರಾಗುತ್ತೇವೆ.ಆಯೋಗ ರೂಪಿಸಿರುವ ಪ್ರಶ್ನಾವಳಿ ಸಂಖ್ಯೆ 8 ರಲ್ಲಿ ಧರ್ಮದ ಬಗ್ಗೆ ಪ್ರಸ್ತಾಪವಿದ್ದು ಕ್ರ. 8 (11) ಇತರೆ ಎಂದು ನೀಡಿರುವ ಕಾಲಂನಲ್ಲಿ ‘ಲಿಂಗಾಯತ’ ಎಂದು, ಪ್ರಶ್ನಾವಳಿ ಸಂಖ್ಯೆ 9ರ ಜಾತಿ ಕಾಲಂನಲ್ಲಿ ‘ಬಣಜಿಗ’ ಎಂದೂ ನಮೂದಿಸಿ, ಪ್ರಶ್ನಾವಳಿ ಸಂಖ್ಯೆ 10 ರ ಉಪಜಾತಿ ಕಾಲಂನಲ್ಲಿ ‘ಬಣಜಿಗ’ ಎಂದು ಮತ್ತೊಮ್ಮೆ ನಮೂದಿಸಿ ಹೀಗೆ ಗಣತಿದಾರರು ದಾಖಲಿಸಿದ ಬಗೆಗೆ ಖಚಿತಪಡಿಸಿಕೊಂಡ ನಂತರವೇ ಸದರಿ ಪ್ರಶ್ನಾವಳಿಗೆ ಒಪ್ಪಿಗೆ ನೀಡಲು ಮನವಿ ಸೂಚಿಸಲಾಗಿದೆ.
ಮೀಸಲಾತಿಗಾಗಿ ನೀಡಲಾಗುವ ಜಾತಿ ಪ್ರಮಾಣ ಪತ್ರಕ್ಕೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಾವು ಬರೆಸುವ ಮಾಹಿತಿಗೂ ಸಂಬಂಧವಿರುವುದಿಲ್ಲ. ಶಾಲಾ ದಾಖಲಾತಿಗಳ ಪರಿಶೀಲನೆಯ ನಂತರವೇ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಅದಕ್ಕಾಗಿ ಸಮಾಜ ಬಾಂಧವರು ಯಾವುದೇ ಗೊಂದಲಕ್ಕೆ ಒಳಗಾಗದೇ ಈ ಸಮೀಕ್ಷೆಯಲ್ಲಿ ನಮ್ಮ ನೈಜ ಜಾತಿಯನ್ನೇ ಬರೆಸಲು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ನಮ್ಮಬಣಜಿಗ ಬಾಂಧವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
https://youtu.be/l2USuQrbuN4