ಪ್ರತಿನಿತ್ಯ ಒಂದು ಗಂಟೆ ರಾಜ ಯೋಗದ ಅಭ್ಯಾಸ ಮಾಡಿದರೆ ನಿಮಗೆ ನೀವು ರಾಜರಾಗಬಲ್ಲಿರಿ ನಿಮ್ಮ ಇಂದ್ರಿಯಗಳ ಮೇಲೆ ರಾಜರಾಗಬಲ್ಲಿರಿ ನಿಮ್ಮ ಪರಿಸರಕ್ಕೆ ರಾಜರಾಗಬಲ್ಲಿರಿ ನಿಮ್ಮ ನಾಡಿಗೆ ರಾಜರಾಗಬಲ್ಲಿರಿ ಎಂದು
ಮೌಂಟ್ಅಬುನ ಹೆಚ್ಚುವರಿ ಕಾರ್ಯದರ್ಶಿ ಬ್ರಹ್ಮಕುಮಾರ ಮೃತ್ಯುಂಜಯ ಅಣ್ಣನವರು ತಿಳಿಸಿದರು.
ರಾಮದುರ್ಗ ಪಟ್ಟಣದ ಎಪಿಎಂಸಿ ಹತ್ತಿರ ನಿರ್ಮಿಸಿದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ನೂತನ ರಾಜಯೋಗ ಸೇವಾ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬಸವ ಬುದ್ಧರು ತಿಳಿಸಿರುವ ಮೌಲ್ಯಗಳನ್ನು ಮರೆಯುತ್ತಿರುವುದು ಆಸಾಂತಿಗೆ ಕಾರಣವಾಗುತ್ತಿದೆ. ದಿನದ ಒಂದು ಗಂಟೆ ರಾಜಯೋಗ ಅಭ್ಯಾಸ ಮಾಡಿದರೆ ನೆಮ್ಮದಿಯ ಜೀವನ ಸಾಧ್ಯವಿದೆ ಎಂದರು.
ಮಹಾತ್ಮಾ ಗಾಂಧೀಜಿ ಅವರ ಆಶಯದಂತೆ ನಶಾಮುಕ್ತ ಸಮಾಜ ನಿರ್ಮಾಣ ಮಾಡಲು ಈಶ್ವರಿಯ ವಿಶ್ವವಿದ್ಯಾಲಯ ಶ್ರಮಿಸುತ್ತಿದ್ದರೆ ಮದ್ಯಪಾನದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದು ಬೇಸರೆ ಸಂಗತಿಯಾಗಿದೆ. ಕೂಡಲೇ ಸರಕಾರ ದೇಶದಲ್ಲಿನ ಮಧ್ಯ ಮಾರಾಟವನ್ನು ಸಂಪೂರ್ಣ ಬಂದ್ ಮಾಡಬೇಕೆಂದು ಅವರು ಆಗ್ರಹಿಸಿದರು.
ಕಲಾ ಅಕ್ಕನವರು ಪ್ರಾಸ್ತಾವಿಕ ಮಾತನಾಡಿ, ರಾಮದುರ್ಗದಲ್ಲಿ 1980ರಲ್ಲಿ ಪ್ರಾರಂಭಿಸಿದ ಈ ಸಂಸ್ಥೆಯು ಸ್ವಂತ ಬೃಹತ್ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ದಾನಿಗಳು ಸಹಾಯ ಸಹಕಾರ ನೀಡಿದ್ದಾರೆಂದು ಸ್ಮರಿಸಿದರು.
ಮೌಂಟ ಆಬುದ ರಾಜಯೋಗಿನಿ ರವಿಕಲಾ ಅಕ್ಕ ಈಶ್ವರಿಯ ಸಂದೇಶ ನೀಡಿದರು.
`ತೊಂಡಿಕಟ್ಟಿ ಗಾಳೇಶ್ವರ ಮಠದ ಅಭಿನವ ವೆಂಕಟೇಶ ಮಹಾರಾಜರು ಹಾಗೂ ಮನಗೂಳಿ ವಿರಕ್ತಮಠದ ವಿರಶೀಶಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಡಿ.ಸಿ.ಸಿ ಬ್ಯಾಂಕ ನಿರ್ದೇಶಕ ಮಲ್ಲಣ್ಣ ಯಾದವಾಡ, ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿದರು
ಮಾತನಾಡಿದರು.
ತೊರಗಲ್ಲ ಸಂಸ್ಥಾನದ ಯುವರಾಜ ಸಂಜಯಸಿಂಹ ಶಿಂಧೆ, ಬ್ರಹ್ಮಕುಮಾರಿಗಳಾದ ಮೀರಾ ಅಕ್ಕ, ಪ್ರಭಾ ಅಕ್ಕ, ಸರೋಜಾ ಅಕ್ಕ, ಯಮುನಾ ಅಕ್ಕ, ಉಮಾ ಅಕ್ಕ, ಮಹಾದೇವಿ ಅಕ್ಕ, ಮೀನಾಕ್ಷಿ ಅಕ್ಕ, ಸುವರ್ಣಾ ಅಕ್ಕ, ವಿದ್ಯಾ ಅಕ್ಕ, ನಾಗೇಶ ಅಣ್ಣ, ಅಚ್ಯುತ ಅಣ್ಣ, ಜಯಸಿಂಹ ಅಣ್ಣ ಪ್ರಕಾಶ ಅಣ್ಣ, ಶಿವಾನಂದ ಅಣ್ಣ, ಚೆನ್ನಬಸವರಾಜ ಹಿರೇರಡ್ಡಿ ಸೇರಿದಂತೆ ಮತ್ತಿತರರಿದ್ದರು.
ಮಂಜುಳಾ ಅಕ್ಕ ಸ್ವಾಗತಿಸಿದರು. ಅಕ್ಕಮಹಾದೇವಿ ಅಕ್ಕ ಹಾಗೂ ಸವಿತಾ ಅಕ್ಕ ನಿರೂಪಿಸಿದರು. ಸ್ಥಳೀಯ ಶಾಖೆಯ ಉಸ್ತುವಾರಿ ಮಹಾದೇವಿ ಅಕ್ಕ ವಂದಿಸಿದರು.




