Tuesday, December 9, 2025
14.8 C
Belagavi

ಕಲಹಾಳ ಪ್ರೌಢಶಾಲಾ ಅವರಣವನ್ನು ತೆರವುಗೊಳಿಸುವಂತೆ ಶಾಂತಿಯುತ ಪ್ರತಿಭಟನೆ.

advertisement

spot_img

ಕಲಹಾಳ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಕಳೆದ ಸುಮಾರು ಎರಡು ದಶಕಗಳಿಂದ ವಾಸವಾಗಿರುವ ಹತ್ತು ದಲಿತ ಕುಟುಂಬಗಳ ಮನೆಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯ ವಸತಿ ಕಲ್ಪಿಸಿ ವಿದ್ಯಾರ್ಥಿಗಳ ಆಟ ಮತ್ತು ಪಾಠಗಳಿಗೆ ತೊಂದರೆ ಆಗದಂತೆ ಕಲಹಾಳ ಪ್ರೌಢಶಾಲಾ ಎಸ್.ಡಿ.ಎಂ.ಸಿ ಸದಸ್ಯರು , ಗ್ರಾಮಪಂಚಾಯತ ಸದಸ್ಯರುಗಳು , ದಲಿತರು ಸೇರಿದಂತೆ ಗ್ರಾಮದ ಗುರು-ಹಿರಿಯರು ಯುವಕರು ಕಳೆದ ಹಲವು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಸಮಸ್ಯೆ ಹಾಗೆಯೇ ಉಳಿದಿದೆ ,

29-10-2025 ರಂದು ತಹಶಿಲ್ದಾರ ರಾಮದುರ್ಗ , ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ ರಾಮದುರ್ಗ , ಕ್ಷೇತ್ರ ಶಿಕ್ಷಣಾಧಿಕಾರಿ ರಾಮದುರ್ಗ , ಜಿಲ್ಲಾಧಿಕಾರಿಗಳು , ಜಿಲ್ಲಾಪಂಚಾಯತ ಸಿ.ಇ.ಒ ಹಾಗೂ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಇವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು ಇಲ್ಲಿಯವರೆಗೂ ಯಾವುದೇ ಸ್ಪಂದನೆ ಸಿಗದ ಕಾರಣ ಇಂದು ಶಾಂತ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ,
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರೌಢಶಾಲಾ ಆವರಣದಲ್ಲಿ ವಾಸವಾಗಿರುವ ವಸತಿ ರಹಿತರಿಗೆ ಸರಕಾರಿ ಗೋಮಾಳ ಜಾಗೆ ಗ್ರಾಮದಲ್ಲಿ ಇದ್ದರೆ ಅಂತವರ ಪಟ್ಟಿಯನ್ನು ಮಾಡಿ ಸಲ್ಲಿಸಲು ಪಿ.ಡಿ.ಒ ಅವರಿಗೆ ಸೂಚಿಸಿದರು ಸರಕಾರದ ನಿಯಮದ ಪ್ರಕಾರ ಯಾರು ವಸತಿ ರಹಿತರು ಇರುತ್ತಾರೋ ಅವರಿಗೆ ಮನೆಗಳನ್ನು ಹಂಚಿಕೆ ಮಾಡಲು ಗ್ರಾಮ ಸಭೆಯನ್ನು ನಡೆಸಿ ಗ್ರಾಮಸ್ಥರೇ ನಿರ್ಧರಿಸಲು ತಿಳಿಸಿ ಈ ಪ್ರತಿಭಟನೆಯನ್ನು ಕೈ ಬಿಡಯವಂತೆ ಪ್ರತಿಭಟನಾ ನಿರತರಿಗೆ ಮನವೊಲಿಸಿದರು,

ಪ್ರತಿಭಟನೆಯಲ್ಲಿ ಕಲಹಾಳ ಗ್ರಾಮದ ಯುವ ಮುಖಂಡ ಕಲ್ಲಪ್ಪ ಜಗ್ಗಲ , ಧಾರವಾಡ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು , ಮುಖಂಡರಾದ ಶಿವಬಸಪ್ಪ ಹಲಗತ್ತಿ , ದುಂಡಯ್ಯ ಹಿರೇಮಠ ,ಕರಿಬಸಪ್ಪ ಮರಿಬಾಶೆಟ್ಟಿ ,ಮಹದೇವ ಕಟ್ಟಿ , ಮಲ್ಲಪ್ಪ ಹಾದಿಮನಿ , ಮುತ್ತಪ್ಪ ರಾಯರಡ್ಡಿ , ಹನಮಂತ ಮಾದರ , ಶಿವಪ್ಪ ಕಂಬಳಿ , ವೆಂಕಣ್ಣ ಡೊಂಬರಳ್ಳಿ , ಪ್ರಭು ಬೀರನೂರ , ಮಲ್ಲಪ್ಪ ಹೂಗಾರ , ಹನಮಂತಗೌಡ ಪಾಟೀಲ , ಶಂಕರಗೌಡ ವಿ,ಪಾಟೀಲ , ಮಹದಾಯಿ ಹೋರಾಟಗಾರ ಹನಮಪ್ಪ ಮಡಿವಾಳರ , ಹಲವಾರು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು
ಪ್ರತಿಭಟನೆಯು ಶಾಂತರೀತಿಯಿಂದ ನಡೆಯಲು ಸುರೇಬಾನ ಪೋಲೀಸ್ ಠಾಣೆಯ ಪಿ.ಎಸ್.ಐ ಎಸ್.ಎಚ್.ಪವಾರ ನೇತೃತ್ವದಲ್ಲಿ ಬಂದೋಬಸ್ತ ಒದಗಿಸಿದರು

Hot this week

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು,...

ಸಿ ಟಿ ರವಿ|ಮೆಕ್ಕೆಜೋಳ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ

ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ ಈ ಅಧಿವೇಶನದಲ್ಲಿ...

ಸಚಿವ ಸಂತೋಷ್ ಲಾಡ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ...

ಆರೋಗ್ಯ ಸಚಿವ ದಿನೇಶ್ ಗುಂಡುರಾವ್

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಹೇಳಿಕೆ ಸಮಸ್ಯೆಗಳು ಯಾವಾಗಲು...

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್   https://youtu.be/Yy8EZZFHGjs

Topics

ಸದನದಲ್ಲಿ ಸರ್ಕಾರಕ್ಕೆ ಎದುರಾಗುವ ಪ್ರಮುಖ ವಿಚಾರಗಳು

ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಒಟ್ಟು 10 ದಿನಗಳ ಕಾಲ ನಡೆಯಲಿರುವ...

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ|ಸಿಎಂ ಸಿದ್ದರಾಮಯ್ಯ

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ ಹನುಮಂತಯ್ಯ ಒಬ್ಬ ದಕ್ಷ...

ಪಂಚಭೂತಗಳಲ್ಲಿ ಲೀನವಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ.

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು. ಒಂದೇ ಕಡೆ ನಾಲ್ಕು ಜನರ...
spot_img

Related Articles

Popular Categories

spot_img