Wednesday, July 22, 2026
21.9 C
Belagavi

ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧ: ಸಿಎಂ ಡಿ ಕೆ ಶಿವಕುಮಾರ್

advertisement

spot_img

ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧ: ಸಿಎಂ ಡಿ ಕೆ ಶಿವಕುಮಾರ್

ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು

ಭಾರತ ಜೋಡೋ ಯುವ ಸಂಘ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ವೇದಿಕೆ

ಬಸವಕಲ್ಯಾಣ, ಜು.06:

“ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯದ ಮಹಿಳೆಯರು ನಮಗೆ ಬೆಂಬಲ ನೀಡಿದ್ದು, ಅವರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಸೋಮವಾರ ನಡೆದ ಅಕ್ಕಪಡೆ-ಮಹಿಳೆಯರ ಶಕ್ತಿ ಪ್ರದರ್ಶನ ಮತ್ತು ಆತ್ಮರಕ್ಷಣಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಹೆಣ್ಣು ಕುಟುಂಬದ ಕಣ್ಣು. ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು. ನಿಮ್ಮ ಮಾರ್ಗದರ್ಶನದಂತೆ ಪ್ರತಿಯೊಂದು ಕುಟುಂಬ ಬೆಳಗುತ್ತಿದೆ. ನಾರಿ ಶಕ್ತಿ ದೇಶದ ಶಕ್ತಿ. ನಾನು ಇಂದು ಬಸವಕಲ್ಯಾಣದಲ್ಲಿರುವ ಬಸವಣ್ಣನವರ ಅನುಭವ ಮಂಟಪದಿಂದ ಬರ ಪರಿಸ್ಥಿತಿ ಅಧ್ಯಯನ ಪ್ರವಾಸ ಆರಂಭಿಸಲು ಬಂದಿದ್ದೇನೆ. ಇಲ್ಲಿಂದ ಕಲಬುರ್ಗಿಗೆ ಹೋಗಿ, ಕಲ್ಯಾಣ ಕರ್ನಾಟಕದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡುತ್ತೇನೆ. ನಾವು ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ಗ್ರಾಮದೇವತೆ ಬಗ್ಗೆ ಕೇಳುತ್ತೇವೆ. ನಮ್ಮ ಭೂಮಿಯನ್ನು ಮಾತೃಭೂಮಿ, ಭೂಮಿತಾಯಿ ಎಂದು ಪರಿಗಣಿಸುತ್ತೇವೆ” ಎಂದು ಬಣ್ಣಿಸಿದರು.ಭಾರತ ಜೋಡೋ ಯುವ ಸಂಘ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ವೇದಿಕೆ

“ಮಹಿಳೆಯರ ಸುರಕ್ಷತೆಗಾಗಿ ಅಕ್ಕಪಡೆ ಆರಂಭಿಸಲಾಗಿದೆ. ನಮ್ಮ ಸರ್ಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮುಖಂಡತ್ವದಲ್ಲಿ ಈ ಪಡೆಯನ್ನು ರಚಿಸಿದೆ. ಈ ಪಡೆಗೆ ಸೇರಿರುವವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಶಕ್ತಿ, ಧೈರ್ಯ, ಸಾಧನೆಗೆ ಫಲ ಸಿಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಐತಿಹಾಸಿಕ ತೀರ್ಮಾನ ಮಾಡಲಿದೆ. ಮಹಿಳೆಯರಿಗಾಗಿ ಶಕ್ತಿ, ಗೃಹಜ್ಯೋತಿ, ಗೃಹಲಕ್ಷಿ ಕಾರ್ಯಕ್ರಮವನ್ನು ಈಗಾಗಲೇ ನೀಡಿದ್ದೇವೆ. ಮಹಿಳೆಯರು ಹಾಗೂ ಯುವಕರಿಗೆ ಪ್ರತಿ ಪಂಚಾಯ್ತಿಯಲ್ಲಿ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ಹಾಗೂ ಜಾತ್ಯಾತೀತ ತತ್ವ ಉಳಿಸಿಕೊಂಡು ಒಗ್ಗಟ್ಟಿನಿಂದ ಇರಲು ರಾಜ್ಯದಲ್ಲಿ 10 ಸಾವಿರ ಭಾರತ ಜೋಡೋ ಯವ ಸಂಘ ರಚಿಸಲು ಸರ್ಕಾರ ಆದೇಶ ಮಾಡಿದೆ” ಎಂದು ತಿಳಿಸಿದರು.

“ನಾವು ಮಾತೃ ದೇವೋಭವ ಎಂದು ಪರಿಗಣಿಸಿದ್ದೇವೆ. ನೀವೆಲ್ಲರೂ ನಮ್ಮ ಜೊತೆ ಕೈಜೋಡಿಸಿ, ನಮಗೆ ಶಕ್ತಿ ತುಂಬಿದ್ದೀರಿ. ನಿಮಗೆ ಶಕ್ತಿ ನೀಡುವ ಜವಾಬ್ದಾರಿ ನಮ್ಮದು. ನಿಮ್ಮಲ್ಲಿ ನಾಯಕತ್ವ ಬೆಳೆಯಬೇಕು. ಪಂಚಾಯ್ತಿಯಿಂದ ಸಂಸತ್ತಿನವರೆಗೂ ನಾಯಕತ್ವ ಬೆಳೆಯಬೇಕು. ರಾಜಕೀಯವಾಗಿ ಮಾತ್ರವಲ್ಲ, ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನಾಯಕರಾಗಿ ಬೆಳೆಯಬೇಕು. ನಿಮ್ಮ ಜೊತೆಯಲ್ಲಿ ಡಿ ಕೆ ಶಿವಕುಮಾರ್ ಹಾಗೂ ಈ ಸರ್ಕಾರ ಇರಲಿದೆ” ಎಂದು ತಿಳಿಸಿದರು.

Hot this week

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ಅನಿವಾರ್ಯ: ಸಿಎಂ ಡಿ.ಕೆ.ಶಿವಕುಮಾರ್

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ಅನಿವಾರ್ಯ: ಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಎಲ್ ನ...

ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ಎಲ್ಲರೂ ಸಹಕರಿಸಿ:-ಮುಖ್ಯ ಚುನಾವಣಾ ಅಧಿಕಾರಿ ವಿ.ಅನ್ಬುಕುಮಾರ್

ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ಎಲ್ಲರೂ ಸಹಕರಿಸಿ: -ಮುಖ್ಯ ಚುನಾವಣಾ ಅಧಿಕಾರಿ ವಿ.ಅನ್ಬುಕುಮಾರ್ ಧಾರವಾಡ...

ರಾಮದುರ್ಗ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನವೀಕೃತ ಕೊಠಡಿ ಹಾಗೂ ನಾಮಫಲಕ ಅನಾವರಣ

ರಾಮದುರ್ಗ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನವೀಕೃತ ಕೊಠಡಿ ಹಾಗೂ ನಾಮಫಲಕ ಅನಾವರಣ ರಾಮದುರ್ಗ...

15 ಸಾವಿರ ಶಾಲಾ ಶಿಕ್ಷಕರ ನೇಮಕ: ಸಿಎಂ ಡಿ ಕೆ ಶಿವಕುಮಾರ್

15 ಸಾವಿರ ಶಾಲಾ ಶಿಕ್ಷಕರ ನೇಮಕ: ಸಿಎಂ ಡಿ ಕೆ ಶಿವಕುಮಾರ್ ಕೆಪಿಎಸ್...

15 ದಿನದಲ್ಲಿ ಕೇಂದ್ರಕ್ಕೆ ಸಲ್ಲಿಸಲು ಬರ ಪರಿಸ್ಥಿತಿ ವರದಿ ಸಿದ್ಧಪಡಿಸಿ: ಅಧಿಕಾರಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ನಿರ್ದೇಶನ

15 ದಿನದಲ್ಲಿ ಕೇಂದ್ರಕ್ಕೆ ಸಲ್ಲಿಸಲು ಬರ ಪರಿಸ್ಥಿತಿ ವರದಿ ಸಿದ್ಧಪಡಿಸಿ: ಅಧಿಕಾರಿಗಳಿಗೆ...

Topics

ರಾಮದುರ್ಗ ಮಾಜಿ ಸೈನಿಕರಿಗೆ ಗೌರವ ಡಾಕ್ಟರೆಟ್

ಮಾಜಿ ಸೈನಿಕರಿಗೆ ಗೌರವ ಡಾಕ್ಟರೆಟ್ ರಾಮದುರ್ಗ : ಅಖಿಲ ಕರ್ನಾಟಕ ಮಾಜಿ ಸೈನಿಕರ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...
spot_img

Related Articles

Popular Categories

spot_img