ಇಂದು ಭಾರತೀಯ ಕಿಸಾನ್ ಸಂಘ ರಾಮದುರ್ಗ ತಾಲೂಕ ಘಟಕದ ಕಾರ್ಯಾಲಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಬಲರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಆಚರಣೆ ಮಾಡಲಾಯಿತು.ಇದು ಮಾಜಿ ಕೆಂದ್ರ ಕೃಷಿ ಮಂತ್ರಿ ಮತ್ತು ಮಾಜಿ ಪ್ರಧಾನಿ ಶ್ರೀ ಚರಣಸಿಂಗ ಚೌಧರಿರವರ ಜನ್ಮದಿನೋತ್ಸವ.
ಕಿಸಾನ್ ಚಾಚಾ ರವರ ಕೊಡುಗೆ ಕೃಷಿಗೆ ಬಹಳ ಅಪಾರವಾದ ಕೊಡುಗೆ ಇರುತ್ತೆದೆ ಅದಕ್ಕಾಗಿ ಅವರ ಜನ್ಮದಿನವನ್ನು, ರಾಷ್ಟ್ರೀಯ ರೈತ ದಿನಾಚರಣೆ ಅಂತ ಆಚರಣೆ ಮಾಡಲಗುವುದು. ಈ ಸಂಧರ್ಭದಲ್ಲಿ ತಾಲೂಕಾ ಅಧ್ಯಕ್ಷ ಶ್ರೀ ಸುರೇಶ ನಂದೆಪ್ಪನವರ, ಜಿಲ್ಲಾ ಉಪಾಧ್ಯಕ್ಷ ಶ್ರೀಬಸವರಾಜ ಕೋಣನ್ನವರ, ತಾಲೂಕ ಪದಾಧಿಕಾರಿಗಳಾದ ಶ್ರೀ ನಿಂಗಪ್ಪ ಗದಗಿ, ಶ್ರೀ ಅಪ್ಪನಗೌಡ ಪಾಟೀಲ್, ಶ್ರೀ ಆನಂದ ಪೂಜಾರ, ಶ್ರೀ ಆನಂದ ಜಾಲಪ್ಪನವರ ಮತ್ತು ಶ್ರೀ ಅಮರೇಶ್ ಬಟಕುರ್ಕಿ ಉಪಸ್ಥಿತರಿದ್ದರು.
Trending Now



