Tuesday, February 10, 2026
29.1 C
Belagavi

ನಬಾರ್ಡ್ ರೈತರಿಗೆ ಹೆಚ್ಚಿನ ರೀತಿಯಲ್ಲಿ ಸಾಲ ಕೊಡುವ ಕೆಲಸ ಮಾಡಬೇಕಿದೆ: ಬಸವರಾಜ ಬೊಮ್ಮಾಯಿ

advertisement

spot_img

ನಬಾರ್ಡ್ ರೈತರಿಗೆ ಹೆಚ್ಚಿನ ರೀತಿಯಲ್ಲಿ ಸಾಲ ಕೊಡುವ ಕೆಲಸ ಮಾಡಬೇಕಿದೆ: ಬಸವರಾಜ ಬೊಮ್ಮಾಯಿ

ನಾಯಕರಿಗೆ ಜನರೊಂದಿಗೆ ಭಾವನಾತ್ಮಕ ಸಂಬಂಧ ಇದ್ದರೆ ಕೆಲಸಗಳು ಆಗುತ್ತವೆ: ಬಸವರಾಜ ಬೊಮ್ಮಾಯಿ

ಹಾವೇರಿ:(ರಟ್ಟಿಹಳ್ಳಿ) ನಬಾರ್ಡ್ ರೈತರಿಗೆ ಹೆಚ್ಚಿನ ರೀತಿಯಲ್ಲಿ ಸಾಲ ಕೊಡುವ ಕೆಲಸ ಮಾಡಬೇಕಿದೆ. ನಾವು ಬರಿ ಬೆಳೆ ಸಾಲ ಕೊಡುತ್ತೇವೆ. ಜಮೀನು ಪರಿವರ್ತನೆ, ಸುಗ್ಗಿ ಮಾಡಲು, ಯಂತ್ರೋಪರಕಣಕ್ಕೆ ಹಾಗೂ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡಬೇಕು. ಬರುವ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳಿಂದ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಇಂದು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ನಾಗವಂದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಸಹಕಾರ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಮನುಷ್ಯನ ಜೀವನ ಒಂಟಿ ಜೀವನ ಅಲ್ಲ, ನಾವು ಸಂಘ ಜೀವಿಗಳು. ನಾವೆಲ್ಲ ಒಂಟಿಯಾಗಿ ಜೀವನ ಮಾಡಲು ಸಾಧ್ಯವಿಲ್ಲ. ನಮಗೆ ತಂದೆ ತಾಯಿ, ಅಣ್ಣ ತಮ್ಮಂದಿರು ಬಂಧುಬಳಗ, ಊರಿನ ಹಿರಿಯರ ಕಿರಿಯರ ಸಹಕಾರ ಇರುತ್ತದೆ. ಅದಕ್ಕೆ ನಾಗರಿಕತೆ ಹುಟ್ಟು ಹಾಕಿದ್ದೇವೆ. ನಾಗರಿಕತೆ ಬೆಳೆದು, ನಾಡು ಬೆಳೆದು ದೇಶ ಬೆಳೆಯಿತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ಜೀವನ ಸುಗಮವಾಗಿರುತ್ತದೆ. ನಾನೊಬ್ಬನೆ ಸುಖವಾಗಿರಬೇಕೆಂದರೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಸುಖವನ್ನು ಹಂಚಿಕೊಂಡಾಗ ಮಾತ್ರ ಸುಖದ ಅನುಭವ ಆಗುತ್ತದೆ. ಆದ್ದರಿಂದ ನಾವೆಲ್ಲರೂ ಒಬ್ಬರಿಗೊಬ್ಬರು ಸಹಕಾರಿಯಾಗಿರಬೇಕು ಎಂದು ಹೇಳಿದರು.ಯಾರೋ ಒಬ್ಬ ಸಾಹುಕಾರ ಬಂದು ಎಲ್ಲರಿಗೂ ಸಾಲ ಕೊಡಲು ಸಾಧ್ಯವಿಲ್ಲ. ಎಲ್ಲರೂ ಸೇರಿ ಸಂಘ ಕಟ್ಟಿಕೊಂಡು ಸಾಲ ಕೊಟ್ಟು ಒಬ್ಬರಿಗೊಬ್ಬರು ಸಹಕಾರಿಯಾಗಿ ಸಕಾರದ ಯೋಜನೆಗಳನ್ನು ತಂದು ರೈತರಿಗೆ ಮುಟ್ಟಿಸಿದಾಗ ಅನುಕೂಲ ಆಗುತ್ತದೆ. ಬಂಡವಾಳ ಶಾಹಿಗೆ ಉತ್ತರ ಸಹಕಾರಿ ವ್ಯವಸ್ಥೆ. ಸಹಕಾರಿ ರಂಗದಲ್ಲಿ ಲಾಭವಾದರೆ ಸಹಕಾರಿಗಳಿಗೆ ಅನುಕೂಲ ಆಗುತ್ತದೆ. ಸಾಹುಕಾರರಿಗೆ ಲಾಭವಾದರೆ ಸಾಹುಕಾರನಿಗೆ ಲಾಭವಾಗುತ್ತದೆ ಎಂದು ಹೇಳಿದರು.

ಸಹಕಾರಿ ರಂಗ ಬಲಗೊಳ್ಳಬೇಕು
ಮಹಾರಾಷ್ಟ್ರದಲ್ಲಿ ಸಹಕಾರಿ ಸಂಘಗಳು ಸರಕಾರವನ್ನು ಆಳುತ್ತವೆ. ಅಷ್ಟು ಪ್ರಭಲವಾಗಿವೆ. ಇಲ್ಲಿ ಸರಕಾರ ಸಹಕಾರಿ ಸಂಘಗಳನ್ನು ಆಳಲು ಬಿಡುವುದಿಲ್ಲ. ಪ್ರಜಾಪ್ರಭುತ್ವ ತಳಹದಿ ಮೇಲೆ ಇರುವುದು ಸರಕಾರ. ನಾನು ಮಹಾರಾಷ್ಟ್ರಕ್ಕೆ ಹೋಗಿ ಒಂದು ಜಾಗದಲ್ಲಿ ಚಾ ಕುಡಿದೆ. ಅಲ್ಲಿ ಸಹಕಾರಿ ಸಂಘದ ಚಾ ಅಂಗಡಿ ಇದೆ. ಪಾನ್ ಅಂಗಡಿ, ವಿದ್ಯುಚ್ಛಕ್ತಿ ಎಲ್ಲವೂ ಸಹಕಾರಿ ಸಂಘದಲ್ಲಿ ನಡೆಯುತ್ತವೆ. ಮೊನ್ನೆ ನಿಧನರಾದ ಅಜಿತ್ ಪವಾರ್ ಅವರು 16 ವರ್ಷ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಆಧುನಿಕ ಯುಗದಲ್ಲಿ ಸಹಕಾರಿ ಸಂಘಗಳ ಶಕ್ತಿ ದೊಡ್ಡದಿದೆ. ಜಾಗತಿಕರಣದ ಹಿನ್ನೆಲೆಯಲಿ ಆರ್ಥಿಕ ವ್ಯವಹಾರ ಮಾಡಿದಷ್ಟು ಸಹಕಾರಿ ಸಂಘ ದೊಡ್ಡದಾಗುತ್ತದೆ. ಕೇಂದ್ರದಲ್ಲಿ ಸಹಕಾರಿ ಇಲಾಖೆ ಇರಲಿಲ್ಲ. ಈಗ ಸಹಕಾರ ಸಚಿವರಾಗಿ ಅಮಿತ್ ಶಾ ಇದ್ದಾರೆ. ಅವರು ಮೊದಲು ಎಲ್ಲ ಸಹಕಾರಿ ಸಂಘಗಳನ್ನು ಡಿಜಿಟೈಲೇಜೇಷನ್ ಮಾಡಿದ್ದಾರೆ. ಆಧುನಿಕ ಬ್ಯಾಂಕ್‌ಗಳೊಂದಿಗೆ ಪೈಪೋಟಿ ಮಾಡಬೇಕು. ಸಹಕಾರಿ ಸಂಘ ಬಲಗೊಳ್ಳಬೇಕೆಂದು ಹೇಳಿದ್ದಾರೆ ಎಂದರು.ನೀರಾವರಿ ಮಾಡಿರುವ ಸಮಾಧಾನ
ನಾನು 2009ರಲ್ಲಿ ನೀರಾವರಿ ಸಚಿವನಾಗಿದ್ದೇ ಅಪ್ಪರ್ ತುಂಗಾ ಯೋಜನೆಗೆ ಹೋರಾಟ ಮಾಡಿದ್ದೆವು ಅದನ್ನು ಪೂರ್ಣ ಮಾಡಬೇಕೆಂದು ಪ್ರಯತ್ನ ಮಾಡಿ ನಾನು ರಾಣೆಬೆನ್ನೂರಿಗೆ ಬಂದಾಗ ಅಧಿಕಾರಿಗಳ ಸಭೆ ಮಾಡಿದ್ದೆ. ಆಗ 2012 ಕ್ಕೆ ನೀರು ಕೊಡುತ್ತೇವೆ ಎಂದು ಹೇಳಿದ್ದೆ. ಅದಕ್ಕೆ ಬನ್ನಿಕೋಡ್ ಸಾಹೇಬರು ಮಂತ್ರಿಗಳಿಗೆ ಏನು ಮಾಹಿತಿ ಇಲ್ಲ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು. ನಾನು ಬನ್ನಿಕೋಡ್ ಸಾಹೇಬ್ರಿಗೆ ಫೋನ್ ಮಾಡಿದೆ ಅವರು ನೀನು ಮೊದಲು ಹೋಗಿ ಅಲ್ಲಿ ಕೆಲಸ ನಡೆಯುತ್ತಿರುವ ಪ್ರದೇಶ ನೋಡಿಕೊಂಡು ಬಾ ಆ ಮೇಲೆ ನಾನು ಹೇಳಿದ್ದು ಸರಿಯೋ ತಪ್ಪೊ ಅನ್ನುವುದು ಗೊತ್ತಾಗುತ್ತದೆ ಅಂದರು, ನಾನು ಹೋಗಿ ನೋಡಿದಾಗ ನೂರು ಮೀಟರ್ ಆಳದಲ್ಲಿ ಇತ್ತು. ಒಂದು ಟ್ರಕ್ ಮೇಲೆ ಬರಲು ಎರಡು ತಾಸು ಬೇಕಾಗುತ್ತಿತ್ತು. ಆಗ ಬನ್ನಿಕೋಡ್ ಸಾಹೇಬ್ರ ಮಾತು ಸರಿ ಇದೆ ಅಂತ ಅನಿಸಿತು. ಕಡೆಗೆ ಕೊಂಕಣ್ ರೈಲ್ವೆ ಯೋಜನೆಯ ಇಂಜನೀಯರನ್ನು ಕರೆದುಕೊಂಡು ಬಂದು ತೋರಿಸಿದಾಗ ಅವರು ಬ್ಲಾಸ್ಟ್ ಮಾಡಬೇಕೆಂದ ರಾತ್ರಿಯಿಂದ ಬೆಳತನಕ ಬ್ಲಾಸ್ಟ್ ಮಾಡುತ್ತಿದ್ದರು. ಅದನ್ನು ಎಲ್ಲ ಬ್ಲಾಸ್ಟ್ ಮಾಡಿ ಹಿರಕೆರೂರಿಗೆ ನೀರು ಬರುವಂತೆ ಮಾಡಿ ಯೋಜನೆ ಆರಂಭಿಸಿ ಬನ್ನಿಕೋಡ್ ಸಾಹೇಬರಿಂದ ಉದ್ಘಾಟನೆ ಮಾಡಿದ್ದೇನೆ. ಆದು ಸಮರ್ಪಕವಾಬೇಕು ಎಂದರು.

ನಾನು ನೀರಾವರಿ ಸಚಿವನಾಗಿ ಸುಮಾರು ಒಂದುಲಕ್ಷ ಎಕರೆಗೆ ರಾಣೆಬೆನ್ನೂರು, ಹಿರೆಕೆರೂರು, ಹಾವೇರಿ, ಬ್ಯಾಡಗಿ ತಾಲೂಕುಗಳಲ್ಲಿ ನೀರಾವರಿ ಮಾಡಿದ್ದು ದೊಡ್ಡ ಸಮಾಧಾನವಾಗಿದೆ. ಡ್ಯಾಮಿನಿಂದ ನೀರು ಬಿಟ್ಟಾಗ ನನ್ನ ಕಣ್ಣಲ್ಲಿ ನೀರು ಬಂತು ಅದನ್ನು ನೋಡಿ ನಮ್ಮ ನಾಯಕರಾದ ಯಡಿಯೂರಪ್ಪ ಅವರು ಯಾಕಪ್ಪ ಅಂತ ಕೇಳಿದರು. ಇದು ಆನಂದಬಾಸ್ತ್ರ, ಬಹಳಷ್ಟು ಹಿರಿಯರ ಬೇಡಿಕೆಯಾಗಿತ್ತು. ಗಂಗಾಮಾತೆ ಹರಿದು ಬರುತ್ತಿರುವುದು, ನನ್ನ ತಾಯಿಯ ಹೆಸರು ಗಂಗಮ್ಮ ಅದನ್ನು ನೆನೆದು ಭಾವನಾತ್ಮಕವಾದೆ ಎಂದು ಹೇಳಿದೆ. ಹೀಗೇ ನಾಯಕರು ಜನರ ಬಗ್ಗೆ ಭಾವನಾತ್ಮಕ ಸಂಬಂಧ ಇದ್ದರೆ ಕೆಲಸಗಳು ಆಗುತ್ತವೆ. ಕೇವಲ ಕಾನೂನು ವಿಚಾರಗಳನ್ನು ಮಾತನಾಡಿದೆ ಯಾವುದೂ ಕೆಲಸ ಆಗುವುದಿಲ್ಲ. ಆಗಲಾರದ ಕೆಲಸ ಆಗಬೇಕೆಂದರೆ ನಮ್ಮ ಮನದಾಳದಲ್ಲಿ ಬದ್ಧತೆ ಇರಬೇಕು. ಈಗ ಅವರು ಮಾಲತಿ ಡ್ಯಾಂ ಬಗ್ಗೆ ಹೇಳಿದ್ದಾರೆ. ಅದನ್ನು ಕೈಗೆತ್ತಿಕೊಂಡರೆ ಅದಕ್ಕೆ ಬೇಕಾದ ಎಲ್ಲ ಸಹಕಾರ ಕೊಡುತ್ತೇನೆ. ಬೆಡ್ತಿ ವರದಾ ಯೋಜನೆಗೆ ಈಗಾಗಲೇ ಹೋರಾಟ ಕೈಗೆತ್ತಿಕೊಂಡಿದ್ದೇವೆ. ಅದಕ್ಕೆ ಕೇಂದ್ರ ಸಕಾರ ಒಪ್ಪಿಗೆ ಕೊಟ್ಟಿದೆ. ರಾಜ್ಯ ಸಕಾರವೂ ಒಪ್ಪಿಗೆ ಕೊಟ್ಟಿದೆ. ಆ ಯೋಜನೆ ಜಾರಿಯಾದರೆ ನಮ್ಮ ಜಿಲ್ಲೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಮಹಿಳೆಯರ ಶತಮಾನ
ಒಬ್ಬ ತಾಯಿ ಈ ಸಹಕಾರ ಸಂಸ್ಥೆ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷೆ ಆಗಿರುವಾಗ ಆಚರಿಸುತ್ತಿರುವುದು ಸಂತಸದ ವಿಷಯ. 21 ನೇ ಶತಮಾನ ಮಹಿಳೆಯರ ಶತಮಾನ, ಅವರು ಎಲ್ಲ ರಂಗದಲ್ಲಿ ನಾಯಕತ್ವ ವಹಿಸಬೇಕು. ಮಾಜಿ ಸಚಿವ ಬಿ.ಸಿ. ಪಾಟೀಲರು ಹಿರೆಕೆರೂರು ಅಭಿವೃದ್ಧಿಯಲ್ಲಿ ಸ್ಥಿರಸ್ಥಾಯಿಯಾಗುವ ಕೆಲಸ ಮಾಡಿದ್ದಾರೆ. ಅವರು ಬರುವ ಮುಂಚೆ ರಸ್ತೆಗಳು ಹೇಗಿದ್ದವು. ಈಗ ಹೇಗಿವೆ. ಪ್ರತಿಯೊಂದು ಗ್ರಾಮಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು, ಘಟ್ಟದ ಪ್ರದೇಶಗಳಲ್ಲಿ ನೀರಾವರಿ ಮಾಡಿದ್ದರು. ಏತ ನೀರಾವರಿ ಯೋಜನೆಯನು ಬಿಸಿ ಪಾಟೀಲರು ಮಾಡಿದ್ದು, ದುರ್ಗಾದೇವಿ ಯೋಜನೆ ಈಗ ಸರ್ವಜ್ಞ, ಗುಡ್ಡದ ಮಲ್ಲಾಪುರ, ಗುಡ್ಡದ ಮಾದಾಪುರ, ಅಸುಂಡಿ ಏತ ನೀರಾವರಿ ಯೋಜನೆ, ನಮ್ಮ ನಾಯಕ ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರಕ್ಕೆ ಕೆರೆ ತುಂಬಿಸುವ ಯೋಜನೆಯಲ್ಲಿ ಗುಡದಳ್ಳಿ ಯೋಜನೆಯಲ್ಲಿ 11 ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದು ಬೇಡ, ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ ಸದಸ್ಯರು, ಶಾಸಕರು ಸಂಸದರು ಒಟ್ಟಾಗಿ ಕೆಲಸ ಮಾಡಿದರೆ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ. ಐದು ವಷದಲ್ಲಿ 59 ತಿಂಗಳು ಕೆಲಸ ಮಾಡೋಣ ಒಂದು ತಿಂಗಳು ರಾಜಕಾರಣ ಮಾಡೋಣ. ಸಹಕಾರ ರಂಗದ ಪಿತಾಮಹ ಎಸ್. ಎಸ್. ಪಾಟೀಲರ ಮೂರ್ತಿಯನ್ನು ಅವರ ಊರಲ್ಲಿ ಮಾಡಿದ್ದು ನಾನು. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನೇಕ ನಾಯಕರಿದ್ದಾರೆ. ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ. ಆರ್ಥಿಕವಾಗಿ ಬಲಪಡಿಸುವ ಕೆಲಸ ಮಾಡಬೇಕಿದೆ. ನಬಾರ್ಡ್ ಹೆಚ್ಚಿನ ರೀತಿಯಲ್ಲಿ ರೈತರಿಗೆ ಸಾಲ ಕೊಡುವ ಕೆಲಸ ಮಾಡಬೇಕಿದೆ. ನಾವು ಬರಿ ಬೆಳೆ ಸಾಲ ಕೊಡುತ್ತೇವೆ. ಜಮೀನು ಪರಿವರ್ತನೆ, ಸುಗ್ಗಿ, ಯಂತ್ರೋಪರಕಣಕ್ಕೆ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡಬೇಕು. ಬರುವ ದಿನಗಳಲ್ಲಿ ಕೇಂದ್ರ ರಾಜ್ಯಗಳಿಂದ ಅದನ್ನು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರುಈ ಸಂಧರ್ಭದಲ್ಲಿ ಶ್ರೀ.ಷ.ಬ್ರ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಹೊರಗಿನಮಠ, ನಾಗವಂದ ಶ್ರೀಗಳು ಸಾನಿಧ್ಯವಹಿಸಿದ್ದರು. ಮಾಜಿ ಸಚಿವರಾದ ಬಿ.ಸಿ ಪಾಟೀಲ್, ಮಾಜಿ ಶಾಸಕರಾದ ಬಿ.ಎಚ್ ಬನ್ನಿಕೋಡ, ಮಾಜಿ ಮುಖ್ಯ ಸಚೇತಕರಾದ ಡಿ.ಎಂ.ಸಾಲಿ, ಟಿ.ಎ.ಪಿ.ಸಿ.ಎಂ ಅಧ್ಯಕ್ಷರಾದ ಎಸ್.ಎಸ್.ಪಾಟೀಲ್, ಕೆ.ಸಿ.ಸಿ ಬ್ಯಾಂಕ ನಿರ್ದೇಶಕರುಗಳಾದ ಲಿಂಗರಾಜ ಚಪ್ಪರದಹಳ್ಳಿ, ರವಿಶಂಕರ ಬಾಳಿಕಾಯಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ರಾಮಣ್ಣ ಕೆಂಚಳ್ಳೇರ, ಮುಖಂಡರಾದ ಎನ್.ಎಂ ಈಟೇರ, ಅರ್.ಎನ್ ಗಂಗೋಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ದೀಪಾ ಆನ್ವೇರಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುಳಾ ನಾಗಪ್ಪ ಹಾಲಿವಾಣದ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Hot this week

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

Topics

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬುಡಕಟ್ಟು...

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ.

ಬೆಳಗಾವಿಯ ಗೃಹ ಕಚೇರಿಯಲ್ಲಿ ಇಂದು ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ...
spot_img

Related Articles

Popular Categories

spot_img