ಬೆಳಗಾವಿ : ಜಿಲ್ಲೆಯ ರಾಮದುರ್ಗ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಹಜರತ್ ಚಮನ್ ಶ್ಯಾವಲಿ ದರ್ಗಾದಲ್ಲಿ ಆಯೋಜಿಸಿಲಾದ ಈದ್ ಮಿಲಾದ್ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಸೆಪ್ಟೆಂಬರ್ 6ಕ್ಕೆ ಅದ್ದೂರಿ
ಗಣೇಶ್ ವಿಸರ್ಜನೆ ಹಿನ್ನೆಲೆ ಸಪ್ಟೆಂಬರ್ 5ಕ್ಕೆ
ನಡೆಯಬೇಕಾದ ಈದ್ ಮಿಲಾದ್ ಹಬ್ಬದ ಮೆರವಣಿಗೆ ಸೆಪ್ಟೆಂಬರ್ 8ಕ್ಕೆ ಸಮಾಜದ ಮುಖಂಡರ ಒಮ್ಮತದಿಂದ ಮುಂದೂಡಿಕೆ ಮಾಡಲಾಗಿದೆ ಎಂದು ಅಂಜುಮನ್ ಏ ಇಸ್ಲಾಂ ಕಮಿಟಿ ಅಧ್ಯಕ್ಷ ಶಬ್ಬೀರ್ ಅಹ್ಮದ್ ಖಾಜಿ ತಿಳಿಸಿದರು.
ಅಂಜುಮನ್ ಇಸ್ಲಾಂ ಕಮಿಟಿ ನಿರ್ದೇಶಕ ಶಫಿ ಬೆನ್ನಿ
ಮಾತನಾಡಿ, ಸಪ್ಟೆಂಬರ್ 5 ಕ್ಕೆ ಮನೆಯಲ್ಲಿ ಸರಳವಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಸಪ್ಟೆಂಬರ್ 8ರಂದು ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ಹಬ್ಬವನ್ನು ಆಚರಿಸಲಾಗುವುದು
ಸೆಪ್ಟೆಂಬರ್ 6ಕ್ಕೆ ಅದ್ದೂರಿ
ಗಣೇಶ್ ವಿಸರ್ಜನೆ ಹಿನ್ನೆಲೆ ಸಪ್ಟೆಂಬರ್ ಐದಕ್ಕೆ
ನಡೆಯಬೇಕಾದ ಈದ್ ಮಿಲಾದ್ ಹಬ್ಬದ ಮೆರವಣಿಗೆ ಸೆಪ್ಟೆಂಬರ್ ಎಂಟಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಈ ಬಾರಿ 1500 ನೇ ಈದ್ ಮಿಲಾದ್ ಇರುವ ಕಾರಣ ಅತ್ಯಂತ ವಿಜೃಂಭಣೆಯಿಂದ ಮಿಲಾದ್ ಹಬ್ಬವನ್ನು ಆಚರಿಸಲಾಗುವುದು ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆಯು ಪಟ್ಟಣದ ಜಾಮಿಯಾ ಮಸೀದಿಯಿಂದ ಬೆಳಗ್ಗೆ 9:30 ಗಂಟೆಗೆ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.
ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರು ಪದಾಧಿಕಾರಿಗಳು, ರಾಮದುರ್ಗ ಪಟ್ಟಣದ ಎಲ್ಲ ಮುಸ್ಲಿಂ ಜಮಾತಿನ ಮುಖಂಡರು ಯುವಕರು ಉಪಸ್ಥಿತರಿದ್ದರು.