ರಾಮದುರ್ಗ ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ಸರ್ಕಾರದ ಆದೇಶದಂತೆ ಸ್ವಚ್ಛತಾಹಿ ಸೇವರ್ ಎಂಬ ಶೀರ್ಷಿಕೆ.
ಅಡಿಯಲ್ಲಿ ದಿನನಿತ್ಯ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಪುರಸಭೆಯಿಂದ ವಿವಿಧ ಆಟೋಟ ಚಟುವಟಿಕೆಗಳು ಆರೋಗ್ಯ ತಪಾಸಣೆಯನ್ನು.ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳಾದ ಈರಣ್ಣ ಕೆ ಗುಡದಾರಿ ಮಾತನಾಡಿ ಪೌರಕಾರ್ಮಿಕರ ಸ್ಥಿತಿಗತಿ ಕುರಿತು ಅವರ ಅವಲಂಬಿತರ ಕುರಿತು ಮುಂಜಾಗ್ರತ ಕ್ರಮವನ್ನು ಕೈಗೊಳ್ಳುವ ಕುರಿತು ಸವಿಸ್ತಾರವಾಗಿ ತಿಳಿಸಿದರು,
ಅಂಚೆ ಕಚೇರಿಯ ನಿರೀಕ್ಷಕರಾದ ಶ್ರೀ ನಾಗರಾಜ ಮಳ್ಳಿ ಮಾತನಾಡಿ ಪೌರಕಾರ್ಮಿಕರಿಗೆ ಅಂಚೆ ಯೋಜನೆಗಳ ಮಾಹಿತಿಯನ್ನು ನೀಡಿದರು ಹಾಗೂ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಎಸ್ ಡಿ ಐನಾಪುರ್ ಆರೋಗ್ಯದ ಕುರಿತು ಮಾಹಿತಿಯನ್ನು ನೀಡಿದರು ಸದರಿ ಕಾರ್ಯಕ್ರಮದಲ್ಲಿ ಪುರಸಭೆಯ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾದ. ಶ್ರೀಮತಿ ರೇಣುಕಾ ಹಲಗಿ, ಕಚೇರಿ ವ್ಯವಸ್ಥಾಪಕರಾದ ಶ್ರೀ ಎಂ ಆರ್ ನದಾಫ್, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ಪಿಎನ್ ಪಾಟೀಲ್, ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ಚಂದನ್ ಪಾಟೀಲ್ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಪೌರಕಾರ್ಮಿಕರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.