Saturday, April 11, 2026
36.1 C
Belagavi

ಸಿಎಂ ಪತ್ರಿಕಾ ಹೇಳಿಕೆಗೆ ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು

advertisement

spot_img

ಸಿಎಂ ಪತ್ರಿಕಾ ಹೇಳಿಕೆಗೆ ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು

ಸಂಪೂರ್ಣ ಅಭಿವೃದ್ಧಿ ನಿಲ್ಲಿಸಿ ಸಾಲ ಮಾಡಿರುವ ಶ್ರೇಯಸ್ಸು ಸಿದ್ದರಾಮಯ್ಯಗೆ ಸಲ್ಲುತ್ತದೆ: ಬಸವರಾಜ ಬೊಮ್ಮಾಯಿ

ಸಿಎಂ ತಮ್ಮ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಬೊಟ್ಟು ಮಾಡುವುದು ಎಷ್ಟು ಸರಿ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ರಾಜಕಿಯ ಲಾಭಕ್ಕಾಗಿ ತಂದಿರುವ ಗ್ಯಾರೆಂಟಿ ಅನುಷ್ಠಾನ ಮಾಡಲು ಮೊದಲನೆ ಬಜೆಟ್ ನಿಂದ ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ,, ಮೊಟರ್ ವೆಹಿಕಲ್ ತೆರಿಗೆ ಹೆಚ್ಚಳ ಮಾಡಿ ತೆರಿಗೆ ಭಯೊತ್ಪಾದನೆ ಮಾಡಿರುವ ಕೀರ್ತಿ ಸಿದ್ದರಾಮಯ್ಯ ಅವರಿಗೆ ಹೋಗುತ್ತದೆ. ಸಪೂರ್ಣ ಅಭಿವೃದ್ಧಿ ನಿಲ್ಲಿಸಿ ಸಾಲ ಮಾಡಿರುವ ಶ್ರೇಯಸ್ಸು ಸಿದ್ದರಾಮಯ್ಯಗೆ ಸಲ್ಲುತ್ತದೆ. ತಮ್ಮ ಮೂಲಭೂತ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಬೊಟ್ಟು ಮಾಡುವುದು ಎಷ್ಟು ಸರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆಗೆ ಎಕ್ಸ್ ಮೂಲಕ ತಿರುಗೇಟು ನೀಡಿರುವ ಅವರು, ಹದಿನಾಲ್ಕನೆ ಹಣಕಾಸಿನ ಶರತ್ತುಗಳು ನಿರ್ಧಾರ ಮಾಡುವಾಗ. ನಿಮ್ಮದೇ ಸರ್ಕಾರ ಇತ್ತು ಮತ್ತು ಅದನ್ನು ಅಂತಿಮಗೊಳಿಸುವಾಗ ನಿಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರ ಇತ್ತು ಆಗ ಅದರಲ್ಲಿ ಐದು ಜನ ಕಾಂಗ್ರೆಸ್ಸಿನ ಸಚಿವರಿದ್ದರು. ಆಗ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದು, ಈಗ ಅನ್ಯಾಯ ಆಗಿದೆ ಅನ್ನುವುದು ಬೂಟಾಟಿಕೆ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಜಿಎಸ್ ಟಿ ಯನ್ನು ಮೊದಲು ತಂದಿದ್ದು ಯುಪಿಎ ಸರ್ಕಾರ ಎಲ್ಲಾ ಕಾನೂನು ಅವರ ಕಾಲದಲ್ಲಿ ಜಾರಿಗೆ ತಂದು ಜಿಎಸ್ ಟಿ ಅವತಾರಕ್ಕೆ ಕಾರಣಿಭೂತರೆ ಕಾಂಗ್ರೆಸ್ ನ ಮಹಾ ನಾಯಕರು ಮತ್ತು ಜಿಎಸ್ ಟಿಯ ಎಲ್ಲ ವಿಚಾರಗಳು ಜಿಎಸ್ ಟಿ ಕೌನ್ಸಿಲ್ ನಲ್ಲಿ ನಿರ್ಧಾರ ಆಗುತ್ತವೆ. ಜಿಎಸ್ ಟಿ ಕೌನ್ಸಿನಲ್ ನಲ್ಲಿ ಶಾಸ್ವತ ಸದಸ್ಯರಾಗಿ ರಾಜ್ಯ ಸರ್ಕಾರ ಇರುತ್ತದೆ. ಇಂತಹ ಪ್ರಮುಖ ವಿಚಾರ ಇದ್ದಾಗ ಮುಖ್ಯಮಂತ್ರಿಗಳು ಒಂದು ಬಾರಿಯೂ ಜಿಎಸ್ ಟಿ ಕೌನ್ಸಿಲ್ ಸಭೆಗೆ ಹೋಗಿಲ್ಲ. ಅಲ್ಲಿ ಕಳಿಸಿರುವ ನಮ್ಮ ರಾಜ್ಯದ ಪ್ರತಿನಿಧಿಗಳು ರಾಜ್ಯದ ಹಿತ ಕಾಪಾಡಲು ಏನು ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲಿ ಏನೂ ಮಾತನಾಡದೇ ಹೊರಗಡೆ ರಾಜಕಾರಣಕ್ಕಾಗಿ ಈ ಮಾತುಗಳನ್ನಾಡುವಂಥದ್ದು ಸರಿಯಲ್ಲ.
ಶೇ 52% ಎಸ್ ಜಿಎಸ್ ಟಿಯಲ್ಲಿ ಬರುತ್ತದೆ. ಶೇ40 ಕೇಂದ್ರದ ಜಿಎಸ್ ಟಿ ಯಲ್ಲಿ ಬರುತ್ತದೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಸಿದ್ದಾರೆ.

ಈ ಕಾನೂನಿನ ಮೂಲ ಪುರುಷರಾದ ಕಾಂಗ್ರೆಸ್ಸಿಗರು
ಕರ್ನಾಟಕಕ್ಕೆ ಅನ್ಯಾಯವಾಗಿರುವುದಲ್ಲಿ ಅವರ ದೊಡ್ಟ ಪಾತ್ರ ಯಾರೂ ಮರೆಯುವುದಿಲ್ಲ‌. ಅದೇ ರೀತಿ ಕರ್ನಾಟಕ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ ಮೊದಲಿನಿಂದಲೂ ಇದೆ. ಸೆಸ್ ಸಂವಿಧಾನ ಬದ್ದವಾಗಿ ಯಾವ ವಿಚಾರಕ್ಕಾಗಿ ಸಂಗ್ರಹಿಸುತ್ತಾರೆ ಅದಕ್ಕೆ ಬಳಸಲು ಸಂವಿಧಾನದಲ್ಲಿ ತಂದವರೇ ಕಾಂಗ್ರೆಸ್ ನವರು. 60 ರ ದಶಕದಲ್ಲಿ ತಂದಿರುವ ಈ ಸೆಸ್ ಈಗ ಅನ್ಯಾಯವಾಗುತ್ತಿದೆ ಎಂದು ಬೊಬ್ಬೆ ಹಾಕುವುದು ಎಷ್ಟರ ಮಟ್ಟಿಗೆ ಸರಿ ?ಆರ್ಥಿಕ ನಿರ್ವಹಣೆಯಲ್ಲಿ ವಿಫಲ
ಸಿಎಂ ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ . ನಿನ್ನೆ ಬಂದಿರುವ ಸಿಎಜಿ ರಿಪೋರ್ಟ್ ನಲ್ಲಿ ಸುಮಾರು 25 ಸಾವಿರ ಕೋಟಿ ಬಾಕಿ ಇಟ್ಟುಕೊಂಡಿದ್ದಾರೆ. ಅದಕ್ಕೇನು ಹೇಳುತ್ತಾರೆ ಸಿದ್ದರಾಮಯ್ಯ. 25 ಸಾವಿರ ಕೊಟಿ ಶ್ರೀಮಂತರ ತೆರಿಗೆಯನ್ನು ಬಾಕಿ ವಸೂಲಿ ಮಾಡಲು ಇವರಿಗೆ ಧೈರ್ಯ ಇಲ್ಲವೇ ಅಥವಾ ಮನಸಿಲ್ಲವೇ ? ಹೀಗೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ರಾಜಕಿಯ ಲಾಭಕ್ಕಾಗಿ ತಂದಿರುವ ಗ್ಯಾರೆಂಟಿ ಅನುಷ್ಟಾನ ಮಾಡಲು ಮೊದಲನೆ ಬಜೆಟ್ ನಿಂದ ಲ್ಯಾಂಡ್ ಸ್ಟಾಂಪ್ ಡ್ಯೂಟಿ ಹೆಚ್ಚಳ, ಅಬಕಾರಿ ತೆರಿಗೆ,, ಮೊಟರ್ ವೆಹಿಕಲ್ ಡ್ಯೂಟಿ ಹೆಚ್ಚಳ ಮಾಡಿ ತೆರಿಗೆ ಭಯೊತ್ಪಾದನೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಹೋಗುತ್ತದೆ. ಸಪೂರ್ಣ ಅಭಿವೃದ್ಧಿ ನಿಲ್ಲಿಸಿ ಸಾಲ ಮಾಡಿರುವ ಶ್ರೇಯಸ್ಸು ಸಿದ್ದರಾಮಯ್ಯಗೆ ಸಲ್ಲುತ್ತದೆ. ತಮ್ಮ ಮೂಲಭೂತ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಬೊಟ್ಟು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದಿಂದ ರೈಲ್ವೆ ಯೋಜನೆಗೆ ಯುಪಿಎ ಅವಧಿಯಲ್ಲಿ 700 ಕೋಟಿ ಬರುತ್ತಿತ್ತು ಈಗ 7000 ಕೊಟಿ ರೂ. ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಸುಮಾರು 30 ಸಾವಿರ ಕೋಟಿ ಕಳೆದ ಆರು ವರ್ಷದಲ್ಲಿ ಬಂದಿದೆ. ಕಿಸಾನ ಸಮ್ಮಾನ್ ಯೋಜನೆಯಲ್ಲಿ ಸುಮಾರು 62 ಲಕ್ಷ ರೈತರಿಗೆ ಸಾವಿರಾರು ಕೋಟಿ ಬಂದಿದೆ. ಆಯುಷ್ಮಾನ್ ಭಾರತದಲ್ಲಿ ಕೇಂದ್ರ ಸರ್ಕಾರ ಕೊಡುತ್ತಿದೆ. ಹೀಗೆ ಬೇರೆ ಬೇರೆ ರೂಪದಲ್ಲಿ ಕೇಂದ್ರದಿಂದ ಬರುವುದನ್ನು ಜನರ ಮುಂದೆ ಇಟ್ಟಿಲ್ಲ. ಜನರ ಬದುಕು ಬಹಳ ದುಸ್ತರ ಆಗಿದೆ. ಜನರ ಬದುಕಿಗೆ ಭಾರ ಆಗಿರುವುದು ಕಾಂಗ್ರೆಸ್ ಸರ್ಕಾರ. ಇದನ್ನು ಯಾವಾಗ ತೆಗೆದು ಹಾಕುತ್ತೇವೆ ಎನ್ನುವ ಹವಣಿಕೆಯಲ್ಲಿ ಕರ್ನಾಟಕದ ಜನತೆ ಇದ್ದಾರೆ ಎನ್ನುವುದನ್ನು ನಾವ್ಯಾರು ಮರೆಯಬಾರದು ಎಂದು ತಿಳಿಸಿದ್ದಾರೆ.

Hot this week

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ! ಆಲಮಟ್ಟಿಯಿಂದ ನಗರಕ್ಕೆ...

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ* ಕೆಎಲ್ ಇ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ....

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ದಾವಣಗೆರೆ...

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ:...

Topics

ಹಳ್ಳಿ-ಹಳ್ಳಿಯಲ್ಲೂ ಕಾಂಗ್ರೆಸ್ ಅಲೆ, ಮನೆ-ಮನೆಯಲ್ಲೂ ಉಮೇಶ್ ಮೇಟಿ ಗೆಲುವಿನ ಕಹಳೆ

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ! ಹಳ್ಳಿ ಇರಲಿ,...

ಅಹಿಂದ ಹತ್ತಿಕ್ಕಲು ಸಿದ್ದರಾಮಯ್ಯ ಯತ್ನ; ಹೆಚ್.ಡಿ. ಕುಮಾರಸ್ವಾಮಿ ಆರೋಪ

ಅಹಿಂದ ಹತ್ತಿಕ್ಕಲು ಸಿದ್ದರಾಮಯ್ಯ ಯತ್ನ; ಹೆಚ್.ಡಿ. ಕುಮಾರಸ್ವಾಮಿ ಆರೋಪ ಅಹಿಂದ ಹೆಸರಿನಲ್ಲಿ ನಿರಂತರವಾಗಿ...
spot_img

Related Articles

Popular Categories

spot_img