Tuesday, December 9, 2025
18.1 C
Belagavi

24 ಗಂಟೆಗಳಲ್ಲಿ 300ಕ್ಕೂ ಹೆಚ್ಚು ಮಾವೋವಾದಿಗಳ ಶರಣಾಗತಿ.

advertisement

spot_img

ನವದೆಹಲಿ: ಕಳೆದ 24 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಒಂದು ಕಾಲದಲ್ಲಿ ಬಾಂಬ್‌ ಸ್ಫೋಟಿಸಿ ಹತ್ಯೆಗೈಯುತ್ತಿದ್ದ ಸ್ಥಳದಲ್ಲಿ ಈಗ ಒಲಿಂಪಿಕ್ಸ್‌ ಕ್ರೀಡಾಕೂಟದ ತಯಾರಿ ನಡೆಯುತ್ತಿದೆ. ಇದು ಅತಿದೊಡ್ಡ ಬೆಳವಣಿಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ಶೃಂಗಸಭೆ ಯಲ್ಲಿ ಮಾತನಾಡಿದ ಅವರು, ಮಾವೋವಾದಿಗಳು ಕಳೆದ 50-55 ವರ್ಷಗಳಲ್ಲಿ ಸಾವಿರಾರು ಜನರನ್ನ ಕೊಂದಿದ್ದಾರೆ. ಅಲ್ಲದೇ ಶಾಲೆಗಳನ್ನಾಗಲಿ, ಆಸ್ಪತ್ರೆಗಳನ್ನಾಗಲಿ ನಿರ್ಮಿಸಲು ಬಿಡಲಿಲ್ಲ. ವೈದ್ಯರನ್ನ ಚಿಕಿತ್ಸಾಲಯಗಳಿಗೆ ಹೋಗದಂತೆ ತಡೆದರು. ಹಲವು ಸಂಸ್ಥೆಗಳ ಮೇಲೆ ದಾಳಿ ಮಾಡಿದ್ದರು. ಮಾವೋವಾದಿಗಳ ಭಯೋತ್ಪಾದನೆಯಿಂದ ಯುವಜನರಿಗೆ ಅನ್ಯಾಯವಾಗಿತ್ತು. ಇದೇ ಮೊದಲ ಬಾರಿಗೆ ಜಗತ್ತಿನ ಮುಂದೆ ನನ್ನ ನೋವನ್ನ ಹೇಳಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದರು.

ನಮ್ಮ ಸರ್ಕಾರ ಅನ್ಯಾಯಕ್ಕೆ ಒಳಗಾದ ಹಾಗೂ ದಾರಿ ತಪ್ಪಿದ ಯುವಜನರನ್ನ ತಲುಪಿ, ಮತ್ತೆ ಅವರನ್ನ ಮುಖ್ಯವಾಹಿನಿಗೆ ತರಲು ವಿಶೇಷ ಪ್ರಯತ್ನಗಳನ್ನ ನಡೆಸಿದೆ. ಇಡೀ ದೇಶ ಇಂದು ಈ ಪ್ರಯತ್ನಗಳ ಫಲಿತಾಂಶ ನೋಡುತ್ತಿದೆ. ಈಗ 303 ನಕ್ಸಲರು ಶರಣಾಗಿದ್ದಾರೆ.

ಛತ್ತೀಸ್‌ಗಢದಲ್ಲಿ ಗುರುವಾರ ಒಂದೇ ದಿನ 170 ನಕ್ಸಲರು ಶರಣಾಗಿದ್ದಾರೆ. ಇವರು ಸಾಮಾನ್ಯ ಜನರಾಗಿರಲಿಲ್ಲ. ಇವರ ತಲೆಗೆ ಬಹುಮಾನ ನಿಗದಿ ಮಾಡಲಾಗಿತ್ತು. ಈಗ ಅವರೇ ಮುಕ್ತವಾಗಿ ಶರಣಾಗಿದ್ದು, ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಾಮೂಹಿಕ ಶರಣಾಗತಿಯ ಪರಿಣಾಮವಾಗಿ ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆ ಇಳಿಕೆಯಾಗಿದೆ. ಹಿಂದೆ 125 ಇದ್ದ ನಕ್ಸಲ್‌ ಪೀಡಿತ ಜಿಲ್ಲೆಗಳು ಈಗ 11ಕ್ಕೆ ಇಳಿಕೆಯಾಗಿದೆ. ನಕ್ಸಲ್‌ ಚಟುವಟಿಕೆಗಳನ್ನ ತಡೆಯುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ.

ಈ ಹಿಂದೆ ಬಸ್ತಾರ್‌ನಲ್ಲಿ (ತೀವ್ರವಾಗಿ ಬಾಧಿತವಾದ ಜಿಲ್ಲೆ) ಮಾವೋಗಳು ವಾಹನಗಳನ್ನ ಸ್ಫೋಟಿಸಿ ಭದ್ರತಾ ಸಿಬ್ಬಂದಿಗಳನ್ನ ಹತ್ಯೆಗೈದಿದ್ದರು. ಇಂದು ಅಲ್ಲಿನ ಯುವಕರು ʻಬಸ್ತಾರ್‌ ಒಲಿಂಪಿಕ್ಸ್‌ʼ ಆಯೋಜಿಸುತ್ತಿದ್ದಾರೆ. ಇದು ಅತಿದೊಡ್ಡ ಬದಲಾವಣೆ. ಈಗ ಶಾಂತಿಯ ದೀಪಾವಳಿ ಆಚರಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತ ಪಡಿಸಿದರು.

ಕಾಂಗ್ರೆಸ್‌ ಅವರನ್ನ ಗಮನಿಸಲಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ಈ ಪರಿಸರ ವ್ಯವಸ್ಥೆಯ ಕುರಿತು ಚರ್ಚೆಸೋದನ್ನೇ ಸಂಪೂರ್ಣವಾಗಿ ನಿಗ್ರಹಿಸಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಬಹಳ ದೊಡ್ಡ ಸೆನ್ಸಾರ್‌ಶಿಪ್ ಕಾರ್ಯವಿಧಾನವು ಕಾರ್ಯನಿರ್ವಹಿಸುತ್ತಿತ್ತು… ಕಾಂಗ್ರೆಸ್ ಆಳ್ವಿಕೆಯಲ್ಲಿ ಪ್ರವರ್ಧಮಾನಕ್ಕೆ ಬಂದವರು, ಸಂಸ್ಥೆಗಳನ್ನು ವಶಪಡಿಸಿಕೊಂಡು ತಮ್ಮನ್ನು ನಗರ ನಕ್ಸಲರು ಎಂದು ಕರೆದುಕೊಂಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದರು

Hot this week

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು,...

ಸಿ ಟಿ ರವಿ|ಮೆಕ್ಕೆಜೋಳ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ

ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ ಈ ಅಧಿವೇಶನದಲ್ಲಿ...

ಸಚಿವ ಸಂತೋಷ್ ಲಾಡ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ...

ಆರೋಗ್ಯ ಸಚಿವ ದಿನೇಶ್ ಗುಂಡುರಾವ್

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಹೇಳಿಕೆ ಸಮಸ್ಯೆಗಳು ಯಾವಾಗಲು...

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್   https://youtu.be/Yy8EZZFHGjs

Topics

ಸದನದಲ್ಲಿ ಸರ್ಕಾರಕ್ಕೆ ಎದುರಾಗುವ ಪ್ರಮುಖ ವಿಚಾರಗಳು

ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಒಟ್ಟು 10 ದಿನಗಳ ಕಾಲ ನಡೆಯಲಿರುವ...

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ|ಸಿಎಂ ಸಿದ್ದರಾಮಯ್ಯ

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ ಹನುಮಂತಯ್ಯ ಒಬ್ಬ ದಕ್ಷ...

ಪಂಚಭೂತಗಳಲ್ಲಿ ಲೀನವಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ.

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು. ಒಂದೇ ಕಡೆ ನಾಲ್ಕು ಜನರ...
spot_img

Related Articles

Popular Categories

spot_img