ಸಂತೋಷ್ ಲಾಡ್ ಹಾಡಿ ಹೊಗಳಿದ ಶಾಸಕ ಕೋನರಡ್ಡಿ
==================
ಸಂತೋಷ್ ಲಾಡ್ ಅಂದರೆ ಫೈವ್ ಸ್ಟಾರ್ ಇದ್ದಂಗೆ
=======
ಗಿಗ್ ಕಾರ್ಮಿಕರಿಗೆ ನೆರವು, ಶ್ರಮಿಕ ವಸತಿ ಶಾಲೆಗಳ ಸ್ಥಾಪನೆ ಪ್ರಸ್ತಾಪ
ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಇಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಕಾರ್ಯವೈಖರಿಯನ್ನು ನವಲಗುಂದ ಶಾಸಕರಾದ ಎನ್ ಎಚ್ ಕೋನರಡ್ಡಿ ಅವರು ಮನತುಂಬಿ ಪ್ರಶಂಸಿಸಿದರು.
ಸಂತೋಷ್ ಲಾಡ್ ಎಂದರೆ ಫೈವ್ ಸ್ಟಾರ್ ಇದ್ದಂಗೆ. ಕಳೆದ ಮೂವತ್ತು ವರ್ಷಗಳಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಇದ್ದೇನೆ. ಕಾರ್ಮಿಕ ಇಲಾಖೆಯ ಸಚಿವರು ಯಾರು ಅಂತಾನೆ ತಿಳಿಯುತ್ತಿರಲಿಲ್ಲ. ಈಗ ಸಂತೋಷ್ ಲಾಡ್ ಅವರು ಸಚಿವರಾಗಿದ್ದಾರೆ. ಅವರು ತಮ್ಮ ಕೆಲಸದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ ಎಂದರು.
ಅವರನ್ನು ಕಾರ್ಮಿಕ ಸಚಿವರಾಗಿ ನೇಮಿಸಿದ ಏನಪ್ಪ ಇಂತಹ ಖಾತೆ ಕೊಟ್ಟರು? ಏನು ಮಾಡ್ತಿಯಾ ಎಂದಿದ್ದೆ. ನಾನು ಕೆಲಸ ಮಾಡಿ ತೋರಿಸುತ್ತೇನೆ ಎಂದಿದ್ದರು. ಅವರು ಗಿಗ್ ಕಾಯಿದೆ ತಂದರು ಇಡೀ ದೇಶವೇ ಅದನ್ನು ಮೆಚ್ಚಿತು. ರಾಹುಲ್ ಗಾಂಧಿ ಅವರು ಪ್ರಶಂಸಿದರು, ಮುಖ್ಯಮಂತ್ರಿಗಳು ಅದನ್ನು ಹೊಗಳಿದರು. ಆ ಕಾಯಿದೆಯಿಂದ ಸಾಕಷ್ಟು ಕಾರ್ಮಿಕರಿಗೆ ಒಳ್ಳೆಯದಾಗಿದೆ ಎಂದರು.
ಹೊಸ ಹೊಸ ಯೋಜನೆಗಳು: ಕಾರ್ಮಿಕ ಇಲಾಖೆಯಲ್ಲಿ ಹೊಸ ಹೊಸ ಯೋಜನೆ ಜಾರಿ ಮಾಡಿ ಇವತ್ತು ಕಾರ್ಮಿಕ ಇಲಾಖೆ ಇದೇ ಎಂಬುದನ್ನು ತೋರಿಸಿದರು. ಕೂಲಿ ಕಾರ್ಮಿಕರ ಮಕ್ಕಳಿಗೆ 104 ವಸತಿ ಶಾಲೆಗಳನ್ನು ಮಂಜೂರು ಮಾಡಿದರು. ನಮ್ಮ ಜಿಲ್ಲೆಗೂ ಶಾಲೆ ಮಂಜೂರು ಮಾಡಿದ್ದಾರೆ ಎಂದು ವಿವರಿಸಿದರು.


