ಮತದಾನ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಶೋಕ ಪಟ್ಟಣ
ನಮ್ಮ ತಾಲೂಕಿನ ರೈತರು ಹಾಗೂ ಮುಖಂಡರ ಅಭಿಪ್ರಾಯದಂತೆ ನಾಮಪತ್ರ ವಾಪಸ್ಸು ಪಡೆದಿದ್ದೇನೆ
ನಾವು ಮಾಜಿ ಶಾಸಕರಾದ ಮಹದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಅವರಿಗೆ ಬೆಂಬಲ ನೀಡುತ್ತಿದ್ದೇನೆ
ಅವಿರೋಧವಾಗಿ ಆಯ್ಕೆ ಮಾಡಲು ನಾವು ಪ್ರಯತ್ನ ಪಟ್ಟಿದ್ವಿ
ಆದ್ರೆ ಜಾರಕಿಹೊಳಿ ಬಣದಿಂದ ಢವಣ ಅವರು ನಿಂತುಕೊಂಡ್ರು
ನಮ್ಮ ತಾಲೂಕಿನಲ್ಲಿ ಮೂರು ನಾಲ್ಕು ಜನ ಶನಿಗಳು ಇದ್ದಾರೆ
ಖಾಲಿ ಚೀಲವನ್ನ ಹಿಡಿದುಕೊಂಡು ಓಡಾಡುತ್ತಿದ್ದಾರೆ
ಹಣ ಇದೆ ಅಂತ ಖಾಲಿ ಚೀಲ ಹಿಡಿದು ಓಡಾಡುತ್ತಿದ್ದಾರೆ
ಊರಿನಲ್ಲಿ ಅವರಿಗೆ ಬೆಲೆ ಇಲ್ಲಾ ಲೀಡರ್ ಆಗಲು ಹೊರಟಿದ್ದಾರೆ
ಪರೋಕ್ಷವಾಗಿ ಜಾರಕಿಹೊಳಿ ಬೆಂಬಲಿಗರಿಗೆ ಶನಿಗಳು ಅಂತ ಹೇಳಿದ ಅಶೋಕ ಪಟ್ಟಣ
ವಿಧಾನಸಭೆ ಚುನಾವಣೆ ಬಂದಾಗ ನಾವು ಬೇರೆ ಬೇರೆ ಇರುತ್ತೇವೆ
ಆದ್ರೆ ಸಹಕಾರ ಚುನಾವಣೆಯಲ್ಲಿ ನಾವು ಈಗ ಒಂದಾಗಿದ್ದೇವೆ ಎಂದ ಪಟ್ಟಣ



